Anganawadi Recruitment : ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Anganawadi Recruitment: ಉಡುಪಿ (Udupi) ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ (Anganawadi Recruitment). ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 29/3/2023 ರಂದು ಕೊನೆಯ ದಿನಾಂಕವಾಗಿದೆ. ಇನ್ನು ಯಾವೆಲ್ಲಾ ಸ್ಥಳಗಳಲ್ಲಿ ಹುದ್ದೆ ಖಾಲಿ ಇದೆ? ವಿದ್ಯಾರ್ಹತೆ? ಈ ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.

ಯಾವೆಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ?
ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನೆಯ ಗ್ರಾಮ ಪಂಚಾಯತ್ , ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಾದ ಶಿವಾನಂದನಗರ (ಸಾಮಾನ್ಯ), ಹೆಜಮಾಡಿ ಬೋರುಗುಡ್ಡೆ (ಸಾಮಾನ್ಯ), ಕಾಜರಗುತ್ತು (ಸಾಮಾನ್ಯ), ಧರ್ಮೆಟ್ಟು (ಸಾಮಾನ್ಯ) ಮತ್ತು ಮಣಿಪುರ ವಿ.ಪಿ (ಸಾಮಾನ್ಯ).

ವಿದ್ಯಾರ್ಹತೆ:
• ಅಭ್ಯರ್ಥಿಗಳು ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು.
• ಎಸ್.ಎಸ್.ಎಲ್.ಸಿ.ಯಲ್ಲಿ (SSLC) ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿರಬೇಕು.
• ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಎಲ್ಲೆಲ್ಲಿ ಅಂಗನವಾಡಿ ಸಹಾಯಕಿ ಹುದ್ದೆ ಖಾಲಿ ಇದೆ?
ಅದಮಾರು (ಸಾಮಾನ್ಯ), ಕಡೆಕಾರು ಪಡುಕೆರೆ (ಸಾಮಾನ್ಯ), ಮಣಿಪುರ ವಿ.ಪಿ (ಸಾಮಾನ್ಯ), ಎರ್ಮಾಳು ಬಡಾ (ಸಾಮಾನ್ಯ),
ಬೊಳ್ಜೆ (ಸಾಮಾನ್ಯ), ಪಿತ್ರೋಡಿ (ಸಾಮಾನ್ಯ)
ಬಬ್ಬರ್ಯಗುಡ್ಡೆ (ಸಾಮಾನ್ಯ), ಬೊಟ್ಟಲ (ಸಾಮಾನ್ಯ), ಮಹಾತ್ಮಾಗಾಂಧಿ ಶಾಲೆ (ಸಾಮಾನ್ಯ), ಎಲ್.ವಿ.ಪಿ-2 (ಸಾಮಾನ್ಯ), ಪೊಲಿಪು ಗರಡಿ (ಸಾಮಾನ್ಯ), ನವಶಕ್ತಿ (ಸಾಮಾನ್ಯ) ಮತ್ತು ಶಿವಾನಂದನಗರ (ಸಾಮಾನ್ಯ).

ವಯೋಮಿತಿ: ಕನಿಷ್ಟ 19 ಹಾಗೂ ಗರಿಷ್ಟ 35 ವರ್ಷ
ವಿದ್ಯಾರ್ಹತೆ:
• ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ ಅಥವಾ ಮುಕ್ತ ವಿದ್ಯಾಲಯಗಳಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿರಬೇಕು.
• ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿರಬೇಕು.
• ಹಾಗೆಯೇ ಸಾಮಾನ್ಯ ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕು.
• ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಉಡುಪಿ ದೂರವಾಣಿ ಸಂಖ್ಯೆ : 0820-2524055 ಅನ್ನು ಸಂಪರ್ಕಿಸಬಹುದಾಗಿದೆ.

ಕುಂದಾಪುರದಲ್ಲಿ (Kundapura) ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 29/3/2023 ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.

ಯಾವೆಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹರ್ಕೂರು ಗ್ರಾಮ (ಸಾಮಾನ್ಯ), ಜಪ್ತಿ ಗ್ರಾಮದ ಕರಿಕಲ್ ಕಟ್ಟೆ (ಸಾಮಾನ್ಯ) ಮತ್ತು ಯಡಮೊಗೆ ಗ್ರಾಮದ ಕೊಳಾಲಿ (ಎಸ್.ಟಿ).

ಎಲ್ಲೆಲ್ಲಿ ಸಹಾಯಕಿ ಹುದ್ದೆಗಳು ಖಾಲಿ ಇದೆ?
ಕರ್ಕುಂಜೆ ಗ್ರಾಮದ ಹೆರ್ಜಾಡಿ (ಸಾಮಾನ್ಯ), ಅಮಾಸೆಬೈಲು ಗ್ರಾಮದ ಬಳ್ಮನೆ (ಸಾಮಾನ್ಯ), ತೆಕ್ಕಟ್ಟೆ ಗ್ರಾಮದ ಕೊಮೆ (ಸಾಮಾನ್ಯ), ತೆಕ್ಕಟ್ಟೆ ಗ್ರಾಮ (ಸಾಮಾನ್ಯ), ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ (ಸಾಮಾನ್ಯ), ಬೇಳೂರು ಗ್ರಾಮದ ದೇವಸ್ಥಾನಬೆಟ್ಟು (ಸಾಮಾನ್ಯ), ಹೆಸ್ಕತ್ತೂರು ಗ್ರಾಮ (ಸಾಮಾನ್ಯ), ಹರ್ಕೂರು ಗ್ರಾಮ (ಸಾಮಾನ್ಯ), ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಕೊಳನ್ಕಲ್ (ಸಾಮಾನ್ಯ), ವಾರ್ಡ್-3 ರ ಕರ್ನಾಟಕ ಟೈಲ್ಸ್ (ಸಾಮಾನ್ಯ) ಕುಳಂಜೆ ಗ್ರಾಮದ ಭರತ್ಕಲ್ (ಸಾಮಾನ್ಯ), ಯಡ್ತರೆ ಗ್ರಾಮದ ಕೊರಾಡಿ (ಎಸ್.ಟಿ) ಹಾಗೂ ಕೊಡ್ಲಾಡಿ ಗ್ರಾಮದ ಮಾರ್ಡಿ (ಎಸ್.ಟಿ)

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲೂಕು ಪಂಚಾಯತ್ ಹತ್ತಿರ, ಶಾಸ್ತಿçà ಪಾರ್ಕ್, ಕುಂದಾಪುರ ದೂ.ಸಂಖ್ಯೆ: 08254-230807 ಅನ್ನು ಸಂಪರ್ಕಿಸಿ.

 

ಇದನ್ನೂ ಓದಿ: KEA ಯಿಂದ ಉದ್ಯೋಗವಕಾಶ! ಆಸಕ್ತರು ಈ ಕೂಡಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿ ಇಲ್ಲಿದೆ

Leave A Reply

Your email address will not be published.