Second Hand Car : ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ಎಲ್ಲಾ ವಿಚಾರ ಗಮನದಲ್ಲಿರಲಿ! ಇಲ್ಲದಿದ್ದರೆ ಮೋಸ ಕಟ್ಟಿಟ್ಟಬುತ್ತಿ!!!

Second Hand Car: ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ತಮ್ಮ ಓಡಾಟಕ್ಕೆ ಎಂದು ಒಂದು ಕಾರು ಕೊಳ್ಳುವವರು ಸಂಖ್ಯೆ ಸಾಲು ಸಾಲಾಗಿದೆ. ಆದರೆ ಹೊಸ ಕಾರು(new car ) ಖರೀದಿಸಲು ಸುಮಾರು 5ಲಕ್ಷ ಕ್ಕಿಂತ ಹೆಚ್ಚು ಹಣ ಬೇಕೇ ಬೇಕು. ಸದ್ಯ ಎಲ್ಲರಿಂದ ಇಷ್ಟು ಹಣ ಕೊಟ್ಟು ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಸಹಜವಾಗಿ ಜನರು ಸೆಕೆಂಡ್ ಹ್ಯಾಂಡ್ ಕಾರನ್ನು (Second Hand Car) ಖರೀದಿಸುವ ನಿರ್ಧಾರವನ್ನು ಮಾಡುತ್ತಾರೆ.

ಕಾರು ಇದ್ದರೆ ಆರಾಮ ಪ್ರಯಾಣ ಮಾಡಬಹುದು. ಸಮಾಜದಲ್ಲಿ ಒಂದು ಸ್ಟೇಟಸ್ (Status)​ ಇರುತ್ತೆ ಅನ್ನುವ ಕಾರಣಕ್ಕಾಗಿ ಒಂದು ಕಾರು ಕೊಂಡುಕೊಳ್ಳಬೇಕು ಎಂಬ ಮನೋಭಾವನೆ ಇರುತ್ತೆ. ಸದ್ಯ ನೀವೂ ಸಹ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೆಲವು ಸಲಹೆಗಳನ್ನು ತಿಳಿದುಕೊಳ್ಳಿ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ನಂತರ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಬರದಂತೆ ಜಾಗೃತಿ ವಹಿಸುವುದು ತುಂಬಾ ಮುಖ್ಯ.

ದಾಖಲೆಗಳನ್ನು ಪರಿಶೀಲಿಸಿ:
ಕಾರನ್ನು ಖರೀದಿಸುವಾಗ ಆರ್‌ಸಿ, ಪಿಒಸಿ ಮತ್ತು ವಿಮೆಯಂತಹ ಪೇಪರ್‌ಗಳನ್ನು ಪರಿಶೀಲಿಸಿ. RC ವಾಹನದ ಪ್ರಮುಖ ದಾಖಲೆಯಾಗಿದೆ. ಇದು ವಾಹನದ ಎಲ್ಲಾ ವಿವರಗಳನ್ನು ಒಳಗೊಂಡಿದೆ. ಈ ಕಾರ್ಡಿನಲ್ಲಿ ಯಾವಾಗ ಕಾರು ಮಾಡೋದು, ಯಾವಾಗ ರಿಜಿಸ್ಟರ್ ಮಾಡೋದು, ಮಾಡೆಲ್ ನಂಬರ್, ಚಾಸಿಸ್ ನಂಬರ್, ಕಲರ್, ಬಾಡಿ ಟೈಪ್ ಎಲ್ಲವನ್ನೂ ಬರೆದಿರುತ್ತೆ. ಕಾರು ಸುಮಾರು 15 ವರ್ಷ ಹಳೆಯದಾಗಿದ್ದರೆ, ಅದನ್ನು ಖರೀದಿಸಬೇಡಿ. ಅಲ್ಲದೆ, ಆರ್‌ಸಿ ಮೇಲೆ ಬ್ಯಾಂಕ್‌ನ ಹೆಸರನ್ನು ಬರೆದಿದ್ದರೆ, ಮೊದಲು ಕಾರ್ ಮಾರಾಟಗಾರರಿಂದ ಬ್ಯಾಂಕ್‌ನ ಎನ್‌ಒಸಿ ತೆಗೆದುಕೊಳ್ಳಿ, ಇಲ್ಲದಿದ್ದರೆ ಕಾರನ್ನು ವರ್ಗಾಯಿಸಲು ಕಷ್ಟವಾಗುತ್ತದೆ.

ಡೀಲರ್​ಗಳ ಬಗ್ಗೆ ಎಚ್ಚರವಿರಲಿ :
ಉಪಯೋಗಿಸಿದ ಕಾರುಗಳನ್ನು ಮಾರಾಟ ಮಾಡುವುದು ಡೀಲರ್ ಗಳ ಕೆಲಸ. ಆ ಸಂದರ್ಭದಲ್ಲಿ, ಅವರು ಯಾವುದೇ ರೀತಿಯ ಕಾರನ್ನು ಇಟ್ಟುಕೊಂಡಿರುತ್ತಾರೆ. ಅದೇ ಕಾರುಗಳನ್ನು ನಿಮಗೂ ತೋರಿಸುತ್ತಾರೆ. ಹಳೆ ಕಾರುಗಳನ್ನು ಹೊಸ ರೀತಿ ಕಾಣುವಂತೆ ಮಾಡಿ ಮಾರಾಟ ​ ಮಾಡುತ್ತಾರೆ. ಈ ಜಾಲಕ್ಕೆ ನೀವು ಸಿಲುಕಿಕೊಳ್ಳಬೇಡಿ. ನೀವು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಬಯಸಿದರೆ, ನಿಮಗೆ ತಿಳಿದಿರುವವರ ಬಳಿ ಖರೀದಿಸಿ. ಉತ್ತಮ ಸ್ಟಾಕ್ ಹೊಂದಿರುವ ವಿತರಕರ ಬಳಿಗೆ ಹೋಗಿ. ಡೀಲರ್ ಗಳ ಮಾತು ಕೇಳಿ ಕಂಪ್ಯೂಸ್ ಆಗಬೇಡಿ.

ನೈಜ ಮಾಹಿತಿ ಪಡೆಯುವುದು (Information):
ಹೊಸ ಕಾರು ಖರೀದಿಸುವಾಗ ನಮಗೆ ನೈಜ ಮಾಹಿತಿ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಹಳೆ ಕಾರು ಖರೀದಿ ವಿಚಾರಕ್ಕೆ ಬಂದಾಗ ಅನೇಕ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತುಂಬಾನೇ ಜಾಗರೂಕರಾಗಿರಬೇಕಾಗುತ್ತದೆ.

ಆನ್​ಲೈನ್​ನಲ್ಲಿ ಕಾರು ಖರಿದೀಸಬೇಡಿ:
ನೀವು ಆನ್‌ಲೈನ್‌ನಲ್ಲಿ ಮೋಸ ಹೋಗಬಹುದು. ನೀವು ಟೆಸ್ಟ್ ಡ್ರೈವ್ ತೆಗೆದುಕೊಂಡು ವಾಹನದ ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಸೂಕ್ತ. ಎಂಜಿನ್ ತೈಲವನ್ನು ಪರಿಶೀಲಿಸಿ. ಆಯಿಲ್ ಹಾಕದೆ ವಾಹನ ಚಲಾಯಿಸಿದರೆ ಇಂಜಿನ್ ಹಾಳಾಗಬಹುದು. ಆದ್ದರಿಂದ ಆನ್ಲೈನ್ ಮೂಲಕ ಕಾರು ಖರೀದಿಸುವುದು ಸೂಕ್ತವಲ್ಲ.

ಎಂಜಿನ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ:
ನೀವು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುತ್ತಿದ್ದರೆ, ಕಾರನ್ನು ಹೊರಗಡೆಯಿಂದ ಮಾತ್ರ ಪರಿಶೀಲಿಸಬೇಡಿ. ಕಾರಿನ ಒಳಭಾಗವನ್ನು ಸರಿಯಾಗಿ ಪರಿಶೀಲಿಸಿ. ನಿಮ್ಮೊಂದಿಗೆ ಮೆಕ್ಯಾನಿಕ್ ಅನ್ನು ಕರೆದುಕೊಂಡು ಹೋಗಿ ಕಾರನ್ನು ಪರಿಶೀಲಿಸಬಹುದು. ವಿಶೇಷ ಮತ್ತು ವಿಶ್ವಾಸಾರ್ಹ ವ್ಯಕ್ತಿಯ ಸಹಾಯವನ್ನು ಸಹ ತೆಗೆದುಕೊಳ್ಳಿ. ಕಾರು ಖರೀದಿಸುವಾಗ ಇಂಜಿನ್ ಬಗ್ಗೆ ಗಮನ ಹರಿಸದಿದ್ದರೆ ಮುಂದೆ ಸರ್ವಿಸ್ ವೆಚ್ಚವನ್ನು ಆಗಾಗ ಎದುರಿಸಬೇಕಾಗುತ್ತದೆ.

ಒಟ್ಟಿನಲ್ಲಿ ನಿಮ್ಮ ಕಾರು ಖರೀದಿ ಆಸೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಹಲವಾರು ಫೈನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತವೆ. ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಿಳಿದವರಿಂದ ಅರಿತುಕೊಳ್ಳುವುದು ಉತ್ತಮ. ಉದಾಹರಣೆಗೆ ನಿಮ್ಮ ಆದಾಯಕ್ಕೆ ಅನುಸರಿಸಿ ಹೆಚ್ಚು ನಂಬಿಕೆಯುಕ್ತ ಫೈನಾನ್ಸ್‌ಗಳಿಂದ ಸ್ಪಷ್ಟ ಮಾಹಿತಿ ಪಡೆದು ಸಾಲ ಪಡೆದುಕೊಳ್ಳುವುದು ಸೂಕ್ತ. ಸದ್ಯ ಸೆಕೆಂಡ್ ಹ್ಯಾಂಡ್ ಕಾರು ಕೊಂಡುಕೊಳ್ಳುವಾಗ ಈ ಮೇಲಿನ ಅಂಶಗಳನ್ನು ಗಮನದಲ್ಲಿರಿಸಿ.

 

ಇದನ್ನೂ ಓದಿ :  ಕಲ್ಲಂಗಡಿ ಹಣ್ಣು ಪ್ರಿಯರಿಗೆ ಶಾಕಿಂಗ್ ನ್ಯೂಸ್

Leave A Reply

Your email address will not be published.