Ambani : ಜಿಯೋ ಕ್ರಾಂತಿಯ ನಂತರ ಈಗ ಜಿನೋಮ್ ಕ್ರಾಂತಿ!
Reliance industries limited : ಉದ್ಯಮಿ, ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance industries limited)ನ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎಂದೇ ಹೇಳಬಹುದು. ಏರ್ಟೆಲ್(Airtel), ಬಿಎಸ್ಎನ್ ಎಲ್(bsnl) ಜೊತೆಗೆ ಪೈಪೋಟಿ ನಡೆಸಿ , ಜಿಯೋ(jio) ಟೆಲಿಕಾಂ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿದೆ. ಜಿಯೋ ಗ್ರಾಹಕರಿಗೆ ಪ್ರತಿಬಾರಿ ಹೊಸ ಹೊಸ ಆಫರ್ ಗಳನ್ನು ನೀಡುತ್ತಿದ್ದು, ಅಗ್ಗದ ಬೆಲೆಯ ರೀಚಾರ್ಜ್ ಯೋಜನೆ(jio recharge plan), ಅನಿಯಮಿತ ಕರೆ, SMS ಸೇವೆಯ ಮೂಲಕ ಜಿಯೋ ಚಂದಾದರರನ್ನು ಹೆಚ್ಚಿಸಿಕೊಂಡಿದೆ. ಸದ್ಯ ಅಂಬಾನಿ ಆರೋಗ್ಯ ಕ್ಷೇತ್ರದಲ್ಲಿ ಬಹಳ ಮುಖ್ಯ ಎನಿಸಿರುವ ಜೆನಿಟಿಕ್ ಮ್ಯಾಪಿಂಗ್ (Genetic Mapping) ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟಿಂಗ್ ಕಿಟ್ (Genome Sequencing Test Kit) ಅನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ.
ಜಿನೋಮ್ ಸೀಕ್ವೆನ್ಸಿಂಗ್ ಅಂದ್ರೆ, ಇದು ದೇಹದ ಆರೋಗ್ಯ ಹೇಗಿದೆ, ಪೂರ್ಣ ಆರೋಗ್ಯದ ಸ್ಥಿತಿಯನ್ನು ತಿಳಿಸುತ್ತದೆ. ಯಾವ ರೋಗಗಳಿಗೆ ದೇಹ ಗುರಿಯಾಗಬಹುದು ಎಂಬುದನ್ನು ತಿಳಿಸುತ್ತದೆ. ಇಲ್ಲಿ ನಮ್ಮ ಜೀನ್ಗಳ ಮ್ಯಾಪಿಂಗ್ ಮಾಡುವ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಇತ್ತೀಚೆಗೆ ಬೆಂಗಳೂರು ಮೂಲದ ಸ್ಟ್ರಾಂಡ್ ಲೈಫ್ ಸೈನ್ಸಸ್ (Strand Life Sciences Pvt Ltd) ಎಂಬ ಸಂಸ್ಥೆಯು ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಕಿಟ್ ಅನ್ನು ಅಭಿವೃದ್ಧಿಪಡಿಸಿತ್ತು. 2021 ರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಸ್ಟ್ರಾಂಡ್ ಲೈಫ್ ಸೈನ್ಸಸ್ ಕಂಪನಿಯನ್ನು ಖರೀದಿಸಿ, ಶೇ. 80ರಷ್ಟು ಪಾಲು ಹೊಂದಿದೆ. ಹಾಗಾಗಿ ಮುಂದಿನ ವಾರಗಳಲ್ಲಿ ಸಮಗ್ರ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಕಿಟ್ ಅನ್ನು ಕೇವಲ 145 ಡಾಲರ್ ಅಂದ್ರೆ ಸುಮಾರು 12,000 ರೂ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಅಮೆರಿಕದ 23ಅಂಡ್ಮೀ (23andMe) ಎಂಬ ಕಂಪನಿ ಕೂಡ ಕಡಿಮೆ ಬೆಲೆಗೆ ಜಿನೋಮ್ ಟೆಸ್ಟಿಂಗ್ ಕಿಟ್ ಅಭಿವೃದ್ಧಿಪಡಿಸಿದೆ. ಆದರೆ, 23ಅಂಡ್ಮೀ ಸಂಸ್ಥೆಯ ವ್ಯಕ್ತಿಯ ಆರೋಗ್ಯದ ಬಗ್ಗೆ ಹೇಳುವ ಕಿಟ್ಗೆ 99 ಡಾಲರ್ ಬೆಲೆ ಇದೆ. ಅದೇ ನೂತನ ಸಮಗ್ರ ಜಿನೋಮ್ ಸೀಕ್ವೆನ್ಸಿಂಗ್ ಕಿಟ್ಗೆ 199 ಡಾಲರ್ (16 ಸಾವಿರ ರೂ) ಬೆಲೆ ಇದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಜಿನೋಮ್ ಸೀಕ್ವೆನ್ಸಿಂಗ್ ಕಿಟ್ ಎಂದೇ ಹೇಳಬಹುದು.
ಭಾರತದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡುವ, ಮ್ಯಾಪ್ ಮೈ ಜಿನೋಮ್ (MapMyGenome), ಮೆಡ್ಜಿನೋಮ್ (MedGenome), ಚೀನಾದ ಕಂಪನಿ ಸೇರಿದಂತೆ ಹಲವು ಕಂಪನಿಗಳಿವೆ. ಇವುಗಳ ಕಿಟ್ಗಳ ಬೆಲೆ 1 ಸಾವಿರ ಡಾಲರ್ಗಿಂತಲೂ (80 ಸಾವಿರ) ಹೆಚ್ಚಾಗಿದೆ. 2019ರಲ್ಲಿ ಜಾಗತಿಕ ಜೆನಿಟಿಕ್ ಟೆಸ್ಟಿಂಗ್ ಮಾರುಕಟ್ಟೆ 12.7 ಬಿಲಿಯನ್ ಡಾಲರ್ ಅಂದ್ರೆ ಸುಮಾರು 1.05 ಲಕ್ಷ ಕೋಟಿ ರೂ ಬೆಲೆ ಇತ್ತು. 2027ರಷ್ಟರಲ್ಲಿ ಇದು 21.3 ಬಿಲಿಯನ್ ಡಾಲರ್ ಅಂದ್ರೆ 1.76 ಲಕ್ಷ ಕೋಟಿ ರೂ. ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಅಂಬಾನಿ ಜಿಯೋ ಕ್ರಾಂತಿ ಹುಟ್ಟಿಸಿ, ಇದೀಗ ಜಿನೋಮ್ ಕ್ರಾಂತಿ ಆರಂಭಿಸಲಿದ್ದಾರೆ.