25 ಕೋಟಿ ಗೆದ್ದ ವ್ಯಕ್ತಿಯ ಕಥೆ ವ್ಯಥೆ ! ಈಗ ಈತನ ಜೀವನ ಹೇಗಿದೆ, ಗೊತ್ತಾ ?

Lottery ticket: ಅದೃಷ್ಟ ಲಕ್ಷ್ಮಿ ಕೈ ಹಿಡಿದಾಗ ಎಲ್ಲವನ್ನು ಗೆದ್ದ ಸಂಭ್ರಮ ಮನೆ ಮಾಡಿರುತ್ತೆ. ಜ್ಯಾಕ್ ಪಾಟ್ ಅನ್ನೋ ಹಾಗೆ ಕೇರಳದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದು ಗೊತ್ತಿರುವ ವಿಚಾರ. ಒಮ್ಮೆ ಅದೃಷ್ಟ ಕೈ ಹಿಡಿದರೆ ಯಾವುದೇ ಸಮಸ್ಯೆ ಎದುರಾಗದು. ಹೈ ಫೈ ಜೀವನ ಕಾರು ಐಷಾರಾಮಿ ಜೀವನದ್ದೇ ಕಾರುಬಾರು ಅನ್ನೋದು ಹೆಚ್ಚಿನವರ ಅನಿಸಿಕೆ. ಆದರೆ, ಕೇರಳದಲ್ಲಿ ಬಂಪರ್ ಲಾಟರಿ ಹೊಡೆದು ಕೋಟಿ ಗೆದ್ದ ಕೇರಳದ ಅನೂಪ್ ಎಂಬ ಯುವಕನ ಪಾಡು ಹೇಗಾಗಿದೆ ಗೊತ್ತಾ?

ಎಷ್ಟೋ ಬಾರಿ ನಾವು ಅಂದುಕೊಂಡ ಕನಸನ್ನು ನನಸು ಮಾಡಲು ಹಣದ ಕೊರತೆ ಉಂಟಾಗಿ ಕನಸು ಈಡೇರದೇ ಮರುಗುವವವರೆ ಹೆಚ್ಚು. ಕುರುಡು ಕಾಂಚಾಣದ ಮಹಿಮೆ ಅರಿಯದವರು ಇರಲಿಕ್ಕಿಲ್ಲ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಹಂಗೆ ಸಕ್ಕರೆ ಕಂಡಾಗ ಇರುವೆ ಮುತ್ತಿಕ್ಕುವಂತೆ ದಿನಂಪ್ರತಿ ಏನೇನೋ ಗೋಳು ತೋಡಿಕೊಂಡು ಅನೂಪ್ ಬಳಿ ಸಹಾಯ ಹಸ್ತ ಕೇಳುವ ಮಂದಿಗೇನೂ ಕಮ್ಮಿಯಿಲ್ಲ. ಈ ಹಿಂದೆ ಅನೂಪ್ ಎಂದರೆ ಯಾರೆಂದು ಗೊತ್ತಿಲ್ಲದವರೆಲ್ಲ ಅಣ್ಣ ಅಕ್ಕ, ಹೀಗೆ ಬಂಧು ಬಳಗದ ನೆಪ ಹೇಳಿ ಆರ್ಥಿಕ ಸಹಾಯಕ್ಕಾಗಿ ದುಂಬಾಲು ಬೀಳುತ್ತಿದ್ದು ಅನೂಪ್ ಅವರಿಗಂತೂ ಯಾಕಾದರೂ ಈ ಲಾಟರಿ ಹಣ ಸಿಕ್ಕಿತು ಎಂದು ಜಿಗುಪ್ಸೆ ಉಂಟಾಗುವಂತೆ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಆಟೋ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ಅನೂಪ್ ತಿರುವನಂತಪುರ ಕೇರಳದ ಲಾಟರಿಯಲ್ಲಿ 25 ಕೋಟಿ ಲಾಟರಿ ಟಿಕೆಟ್​ ಗೆದ್ದು ಅದೃಷ್ಟದ ಜೊತೆಗೆ ಸಂಕಷ್ಟ ಕೂಡ ಎದುರಾಗುತ್ತದೆ ಎಂಬುದಕ್ಕೆ ನಿದರ್ಶನವಾಗಿ ಬಿಟ್ಟಿದ್ದಾರೆ. ರಾಜ್ಯ ಸರ್ಕಾರ (Government) ನಡೆಸುತ್ತಿರುವ ಲಾಟರಿ (Lottery Ticket) ವ್ಯವಹಾರದ ಏಜೆಂಟ್​ ಆಗಿ ಕಾರ್ಯ ನಿರ್ವಹಿಸಿದ ಅನೂಪ್​ಗೆ ಕೋಟಿ ಕೋಟಿ ಹಣ ಬರುತ್ತಿದ್ದಂತೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಲು ಅನೂಪ್ ಮನೆ ಮುಂದೆ ಬರುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಅನೂಪ್‌ ಗೆ ಪರಿಚಯ ಇಲ್ಲದವರು. ಅದರಲ್ಲೂ ನಾವು ನಿಮಗೆ ಸಂಬಂಧಿಕರು ಎಂದು ಹೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಅನೂಪ್.‌

ತಾನು ಗೆದ್ದ 25 ಕೋಟಿ ಹಣದಿಂದಾಗಿ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿಕೊಂಡು ಬರುವ ಜನರ ಜೊತೆಗೆ ಪತ್ರಗಳಿಗೇನು ಕಮ್ಮಿ ಎಂದು ಅನೂಪ್‌ ಹೇಳುತ್ತಾರೆ. ಇದರಿಂದ ನನಗಿದ್ದ ಅಲ್ಪ ನೆಮ್ಮದಿ ಕೂಡಾ ಹೋಗಿದೆ. ಇದರ ಜೊತೆಗೆ ಅನೂಪ್‌ ಐಷರಾಮಿ ಜೀವನ ನಡೆಸುತ್ತಿದ್ದು, ಈ ಲಾಟರಿ ಅದೃಷ್ಟದ ಜೊತೆಗೆ ನೆಮ್ಮದಿನ ಕಿತ್ಕೊಂಡಿದೆ ಎಂದು ಅನೂಪ್‌ ಹೇಳುತ್ತಾರೆ. ಈ ಹಣದಿಂದ ಜೀವನ ಬದಲಾಗಿಲ್ಲ ಹಾಗೆನೇ ಇದೆ ಎಂದು ಹೇಳಿತ್ತಿರುವ ಅನೂಪ್‌ ಒಂದು ಲೆಕ್ಕದಲ್ಲಿ ಜನರಿಂದಾಗಿ ಮಿಂಚುತ್ತಿದ್ದಾರೆ ಎನ್ನಬಹುದು.

ಅದೃಷ್ಟ ಲಕ್ಷ್ಮಿ ಕೈ ಹಿಡಿದ ಕೂಡಲೇ ಎಲ್ಲರೂ ಅನೂಪ್ ಅವರನ್ನು ಗುರುತಿಸುವಂತಾಗಿ ನೇಮ್ ಫೇಮ್ ಹೆಚ್ಚಾಗಿ ಸದ್ಯ ಕೇರಳ ಸರ್ಕಾರದ ಒಡೆತನ ಲಾಟರಿ ವ್ಯವಹಾರದಲ್ಲಿ ಅನೂಪ್ ಮಿಂಚುತ್ತಿದ್ದಾರೆ. ಕೇರಳ ಲಾಟರಿ ವಿಭಾಗದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿತ ಏಜೆಂಟ್​ ಗಳಿದ್ದು, ಇವರ ಕೆಳಗೆ ಅನೇಕ ನೋಂದಾಯಿತರಲ್ಲದ ಉಪ ಎಜೆಂಟ್​ ಮತ್ತು ಮಾರಾಟಗಾರರಿದ್ದು, ಈ ಲಾಟರಿ ವ್ಯವಹಾರದಿಂದ ಅನೇಕ ಜನರ ಜೀವನಕ್ಕೆ ದಾರಿಯಾಗಿದೆ.

ಲಾಟರಿ ಕಾಯ್ದೆಯ ಅನುಸಾರ, ಕೇರಳದ ಭೌಗೋಳಿಕ ಗಡಿಯಲ್ಲಿ ಮಾತ್ರ ಟಿಕೆಟ್‌ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಕ್ಕೆ ಭೇಟಿ ನೀಡುವ ಯಾರಾದರೂ ಟಿಕೆಟ್ ಖರೀದಿಸಬಹುದು ಮತ್ತು ಅಗತ್ಯ ದಾಖಲೆಗಳು ಮತ್ತು ಟಿಕೆಟ್‌ನ ಮೂಲವನ್ನು ಒದಗಿಸುವ ಮೂಲಕ ಬಹುಮಾನದ ಮೊತ್ತವನ್ನು ಪಡೆದುಕೊಳ್ಳಬಹುದು. ಟಿಕೆಟ್​ ಖರೀದಿ ಹೆಚ್ಚುತ್ತ ಹೋದಂತೆ, ಅನೇಕ ಮಂದಿ ಟಿಕೆಟ್​ ಮಾರಾಟಕ್ಕೆ ಮುಂದಾಗುವ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ ಎಂದು ರಾಜ್ಯ ಲಾಟರಿ ನಿರ್ದೇಶನಾಲಯದ ಪ್ರಚಾರ ಅಧಿಕಾರಿ ಬಿ ಟಿ ಅನಿಲ್ ಕುಮಾರ್ ಹೇಳಿದ್ದಾರೆ.

ಲಾಟರಿ ಮಾರಾಟದ ಮೂಲಕ ಸಂಗ್ರಹಿಸಿದ ಎಲ್ಲಾ ಹಣವನ್ನು ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಕೇವಲ ಕೇರಳಿಗರು ಮಾತ್ರವಲ್ಲದೇ, ನೆರಯ ರಾಜ್ಯಗಳ ಜನರು ಮತ್ತು ವಲಸೆ ಕಾರ್ಮಿಕರು ಕೂಡ ಈ ಲಾಟರಿಯನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ.

Leave A Reply

Your email address will not be published.