SSLC ನಂತರ ಏನು ಮಾಡಬೇಕೆಂಬ ಚಿಂತೆಯೇ? ಇಲ್ಲಿದೆ ಬೆಸ್ಟ್ ಕೋರ್ಸ್ ಆಪ್ಶನ್!
Best Courses After SSLC : ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ಮುಗಿದ ಬಳಿಕ ಸಾಕಷ್ಟು ವಿದ್ಯಾರ್ಥಿಗಳಿಗೆ ಮುಂದೆ ಏನು? ಎಂಬ ಪ್ರಶ್ನಾರ್ಥಕ ಚಿಹ್ನೆ ತಲೆಯಲ್ಲಿ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ನೆರೆಹೊರೆಯವರು, ಫ್ರೇಂಡ್ಸ್, ಸಂಬಂಧಿಕರು, SSLC ಆಯ್ತಾ? ಮುಂದೆ ಏನು? ಈ ಪ್ರಶ್ನೆ ಕೇಳೇ ಕೇಳ್ತಾರೆ. ನೀವು SSLC ಮುಗಿಸಿದ್ದು, ಮುಂದೆ ಯಾವ ಕೋರ್ಸ್ ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದರೆ, ನಿಮಗೆ ಬೆಸ್ಟ್ ಸಲಹೆ ಇಲ್ಲಿದೆ. ಎಸ್‌ಎಸ್‌ಎಲ್‌ಸಿ ನಂತರ ಆಯ್ಕೆ ಮಾಡಬಹುದಾದ ಉತ್ತಮ ಕೋರ್ಸ್‌ಗಳ (Best Courses After SSLC) ಪಟ್ಟಿ ಇಲ್ಲಿದೆ.
ಪಿಯುಸಿ (ಪದವಿ ಪೂರ್ವ ಶಿಕ್ಷಣ ) :
SSLC ನಂತರ ಎಲ್ಲರ ಮೊದಲ ಆಯ್ಕೆ PUC ಆಗಿರುತ್ತದೆ. ಎಸ್‌ಎಸ್‌ಎಲ್‌ಸಿ ಆದ ಬಳಿಕ ಪಿಯುಸಿ ಮಾಡಿದರೆ ಜ್ಞಾನ ಇನ್ನಷ್ಟು ಹೆಚ್ಚುತ್ತದೆ ಎಂಬುದು ಕೆಲವರ ಭಾವನೆ ಆಗಿರುತ್ತದೆ. ಹಾಗಾಗಿ ಇದನ್ನೇ ಆಯ್ಕೆ ಮಾಡುತ್ತಾರೆ. ಇನ್ನೂ ಕೆಲವರು ಫ್ರೆಂಡ್ಸ್ ಎಲ್ಲಾ ಪಿಯುಸಿಗೆ ಸೇರ್ಪಡೆ ಆಗಿದ್ದಾರೆ, ನಾನೂ ಹೋಗುತ್ತೇನೆ ಅಥವಾ ಮುಂದೆ ಡಿಗ್ರಿ ಮಾಡಬೇಕು ಎಂದು ಅದನ್ನು ಆಯ್ಕೆ ಮಾಡುತ್ತಾರೆ.
ಪಿಯುಸಿ ಯಲ್ಲಿ ಮೂರು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದು. Science ( ವಿಜ್ಞಾನ ವಿಭಾಗ), commerce (ವಾಣಿಜ್ಯ ವಿಭಾಗ), arts ( ಕಲಾ ವಿಭಾಗ ) ಈ ಮೂರು ವಿಭಾಗಗಳು ಪಿಯುಸಿ ಯಲ್ಲಿ ಇರುವಂತದ್ದು, ಇದು ಎಸ್‌ಎಸ್‌ಎಲ್‌ಸಿ ನಂತರ ಉತ್ತಮ ಆಯ್ಕೆ ಯಾಗಿದೆ. ಪಿಯುಸಿ ಮಾಡಿದರೆ ಜ್ಞಾನವೂ ಹೆಚ್ಚುತ್ತದೆ. ಅಲ್ಲದೆ, ಈ ಮೂರು ವಿಭಾಗಗಳಲ್ಲಿ ಒಂದನ್ನು ಆಯ್ಕೆ ಮಾಡಿ, ಮುಂದೆ ಅದಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಆಯ್ಕೆ ಮಾಡಿ, ಉದ್ಯೋಗ ಪಡೆಯಬಹುದು.
ಅರೆವೈದ್ಯಕೀಯ ಕೋರ್ಸ್‌ಗಳು :
ಎಸ್‌ಎಸ್‌ಎಲ್‌ಸಿ ನಂತರ ಅರೆವೈದ್ಯಕೀಯ ಕೋರ್ಸ್‌ಗಳನ್ನೂ ಮಾಡಬಹುದು. ಇದು ಆಸ್ಪತ್ರೆಗೆ ಸಂಬಂಧಪಟ್ಟ ಕೋರ್ಸ್ ಆಗಿದ್ದು, ಬೇಗನೆ ಉದ್ಯೋಗವೂ ಸಿಗುತ್ತದೆ. ಅರೆವೈದ್ಯಕೀಯ ಕೋರ್ಸ್ ಗಳು ಯಾವುದೆಲ್ಲಾ ಎಂಬುದು ಇಲ್ಲಿ ನೀಡಲಾಗಿದೆ.
• ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
• ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
• ಡಿಪ್ಲೊಮಾ ಇನ್ ಹೆಲ್ತ್ ಇನ್‌ಸ್ಪೆಕ್ಟರ್.
• ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ.
ಡಿಪ್ಲೊಮ ಕೋರ್ಸ್‌ಗಳು:
ಎಸ್‌ಎಸ್‌ಎಲ್‌ಸಿ ನಂತರ ಡಿಪ್ಲೊಮ ಕೋರ್ಸ್‌ಗಳನ್ನೂ ಮಾಡಬಹುದು. ಹೆಚ್ಚಿನವರು ಈ ಕೋರ್ಸ್ ಮಾಡುತ್ತಾರೆ. ಡಿಪ್ಲೊಮಾ ನಂತರ ಇಂಜಿನಿಯರಿಂಗ್ ಕೂಡ ಮಾಡಬಹುದಾಗಿದ್ದು, ಹೆಚ್ಚಿನ ಯುವಕರ ಆಯ್ಕೆ ಇದೇ ಆಗಿದೆ. ಇನ್ನು ಡಿಪ್ಲೊಮಾ ಕೋರ್ಸ್‌ಗಳ ಪಟ್ಟಿ ಇಲ್ಲಿದೆ.
• ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್
• ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
• ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್
• ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್
ಡಿಪ್ಲೊಮ ಕೋರ್ಸ್‌ಗಳು (diploma courses) :
ಎಸ್‌ಎಸ್‌ಎಲ್‌ಸಿ ನಂತರ ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಮಾತ್ರವಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್‌ಗಳನ್ನೂ ಮಾಡಬಹುದಾಗಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮ. ಇನ್ನು ಕೋರ್ಸ್ಗಳ ವಿವರ ಇಲ್ಲಿದೆ.
• ಡಿಪ್ಲೊಮ ಇನ್ ಫಾರ್ಮಸಿ
• ಡಿಪ್ಲೊಮ ಇನ್ ನರ್ಸಿಂಗ್ ಮತ್ತು ಮಿಡ್ ವೈಫರಿ
• ಡಿಪ್ಲೊಮ ಇನ್ ಇಂಟೀರಿಯರ್ ಡಿಸೈನಿಂಗ್
• ಡಿಪ್ಲೊಮ ಇನ್ ಪ್ರಿಂಟಿಂಗ್ ಟೆಕ್ನಾಲಜಿ
• ಡಿಪ್ಲೊಮ ಟೂಲ್ ಆಂಡ್ ಡೈ ಮೇಕಿಂಗ್
• ಡಿಪ್ಲೊಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ
• ಡಿಪ್ಲೊಮ ಇನ್ ಪೌಲ್ಟ್ರಿ
• ಡಿಪ್ಲೊಮ ಇನ್ ಲೆದರ್ ಟೆಕ್ನಾಲಜಿ
• ಡಿಪ್ಲೊಮ ಇನ್ ಮ್ಯೂಸಿಕ್(ಕರ್ನಾಟಿಕ್ ಮತ್ತು ಸಂಗೀತ)
• ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ
• ಡಿಪ್ಲೊಮ ಇನ್ ಫುಡ್ ಟೆಕ್ನಾಲಜಿ.
ಐಟಿಐ (ITI) :
ಹೆಚ್ಚಿನ ಯುವಕರು ಎಸ್‌ಎಸ್‌ಎಲ್‌ಸಿ ನಂತರ ಐಟಿಐ (ITI) ಆಯ್ಕೆ ಮಾಡುತ್ತಾರೆ. ಐಟಿಐ (industrial training institute) ಕೋರ್ಸ್ ಎರಡು ವರ್ಷದ ಕೋರ್ಸ್ ಆಗಿದ್ದು, ಇದನ್ನು ಆಯ್ಕೆ ಮಾಡಿದರೆ ಉದ್ಯೋಗವು ಬೇಗ ಸಿಗುತ್ತದೆ. ಖಾಸಗಿ ಕೈಗಾರಿಕಾ ಕಂಪನಿಗಳು ಮತ್ತು ಕೇಂದ್ರ, ರಾಜ್ಯ ಸರ್ಕಾರದ ಅಧಿನದ ಇಲಾಖೆಗಳು ಹಾಗೂ ಕೆಲವು ಸಚಿವಾಲಯಗಳಲ್ಲಿ ಉದ್ಯೋಗ ಅವಕಾಶ ಸಿಗುತ್ತದೆ. ಇವೆಲ್ಲಾ ಎಸ್‌ಎಸ್‌ಎಲ್‌ಸಿ ನಂತರದ ಉತ್ತಮ ಕೊರ್ಸ್ ಗಳು.