ಅಂದು ದೆಹಲಿಯ ಅತಿ ಸಿರಿವಂತ ಮಹಿಳೆಯಾಗಿದ್ದಾಕೆ, ಇಂದು ಬೀದಿ ಬದಿಯ ಪುಸ್ತಕ ವ್ಯಾಪಾರಿ! ರಾಣಿಯಂತೆ ಮೆರೆದು, ಬೀದಿಯಲ್ಲಿ ಬದುಕುತ್ತಿರುವ ಈಕೆಯ ಕಥೆಯ ವ್ಯಥೆಯೇನು ಗೊತ್ತೇ?
ಈಕೆ ಒಂದು ಕಾಲದಲ್ಲಿ ದೆಹಲಿಯ ಅತ್ಯಂತ ಶ್ರೀಮಂತ ಮಹಿಳೆಯರಲ್ಲೊಬ್ಬಳು. ಅರಬ್ ಪತಿಯೊಡನೆ ಕೋಟಿಗಟ್ಟಲೆ ಹಣ, ಮೂರ್ನಾಲ್ಕು ಕಾರುಗಳ ಒಡತಿಯಾಗಿ ಮೆರೆಯುತ್ತಿದ್ದವಳು. ಒಂದೊಮ್ಮೆ ದೇಶದ ರಾಜಧಾನಿ ದೆಹಲಿಯ ಅತಿ ಸಿರಿವಂತ ಮಹಿಳೆ ಎನ್ನುವ ಖ್ಯಾತಿಯೂ ಈಕೆಯ ಪಾಲಿಗಿತ್ತು. ಆದರಿಂದು ಪುಸ್ತಕ ಮಾರುತ್ತಾ ಜೀವನ ನಡೆಸುವ ಮುದುಕಿಯಾಗಿದ್ದಾಳೆ. ಅಂದು ರಾಣಿಯಂತೆ ಮೆರೆದವಳು ಇಂದು ಬೀದಿಯಲ್ಲಿ ಬದುಕುತ್ತಿದ್ದಾಳೆ. ಮನುಷ್ಯ ಬದುಕು ಇವತ್ತಿದ್ದಂತೆ ನಾಳೆ ಇರುವುದಿಲ್ಲ. ಜೀವನದ ಪ್ರತಿಯೊಂದೂ ಕ್ಷಣವೂ ಕ್ಷಣಿಕವೇ ಎಂಬುದಕ್ಕೆ ಹಲವು ಸಾಕ್ಷಿಗಳು ನಮ್ಮ ಕಣ್ಣೆದುರಿಗಿವೆ, ಅದಕ್ಕೆ ಈ ಅಜ್ಜಿಯ ಬದುಕೂ ಸೇರ್ಪಡೆಯಾಗಿದೆ. ಹಾಗಿದ್ರೆ ಯಾರು ಈ ಮಹಿಳೆ? ಶ್ರೀಮಂತಳಿದ್ದವಳು ಇದ್ದಕ್ಕಿದ್ದಂತೆ ಹೀಗೆ ಬೀದಿಯಲ್ಲಿ ಬೀಳಲು ಕಾರಣವೇನು ಗೊತ್ತಾ? ಹಾಗಿದ್ರ ಹಾಗಿದ್ರೆ ಈ ಸ್ಟೋರಿ ನೋಡಿ.
ಅಂದು ಅದ್ದೂರಿ ಜೀವನ ಹೊಂದಿದ್ದರೂ ಇಂದು ಏನೂ ಇಲ್ಲದೆ ಬದುಕುತ್ತಿರುವ ಈಕೆ ಯಾರೆಂದು ತಿಳಿಯುವ ಕುತೂಹಲವೇ? ದೆಹಲಿಯ ಬೀದಿಯಲ್ಲಿ ವಾಸಿಸುವ ಈ ಅಜ್ಜಿಯ ಕತೆ ಸಿನಿಮಾ ಕತೆಗಿಂತ ಕಡಿಮೆ ಇಲ್ಲ. ಅರಬ್ ಪತಿ, ಕೋಟಿಗಟ್ಟಲೆ ಹಣ, ಮೂರ್ನಾಲ್ಕು ಕಾರುಗಳ ಒಡತಿಯಾಗಿದ್ದವಳು ಇಂದು ಬೀದಿಯಲ್ಲಿ ಬದುಕುತ್ತಿದ್ದಾಳೆ. ಇವಳು ಬೇರೆ ಯಾರೂ ಅಲ್ಲ, ಅನಾಮಿಕಾ ಉರುಫ್ ಆಶಾ ದೇವಿ ಸಾರಸ್ವತ್! ಇವಳ ಬದುಕಿನಲ್ಲಾದ ತಿರುವುಗಳನ್ನು ಕೇಳಿದ್ರೆ ನಿಜಕ್ಕೂ ಮನಸ್ಸು ಚುರ್ ಎನ್ನುತ್ತದೆ. ಆದರೆ ಈಕೆಯ ಬದುಕಿನ ಹೆಗ್ಗಳಿಕೆ ನಿಮ್ಮನ್ನು ನಿಜಕ್ಕೂ ಹುಬ್ಬೇರಿಸುವಂತೆ ಮಾಡಬಹುದು.
ಈ ಅಜ್ಜಿ ಸ್ಫುಟವಾಗಿ ಇಂಗ್ಲಿಷ್ ಮಾತನಾಡುವುದನ್ನು ಕೇಳಿದರೆ ನೀವೂ ಬೆರಗಾಗ್ತೀರಾ! ದೇಶದಲ್ಲಿ ಮಹಿಳಾ ಶಿಕ್ಷಣ ಪ್ರವರ್ಧಮಾನಕ್ಕೆ ಬಂದಿರದ ಸಮಯದಲ್ಲೇ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿ ಪಡೆದಿದ್ದವಳು. ಈಕೆಯ ಕುಟುಂಬ ಬೆಳ್ಳಿಯ ವ್ಯಾಪಾರ ಮಾಡುತ್ತಿತ್ತು. ಅಷ್ಟೇ ಅಲ್ಲ, ಈಕೆಯ ಪತಿ ಭಾರತದ ಅತಿದೊಡ್ಡ ಸ್ಮಗ್ಲರ್ ಆಗಿದ್ದ! ಬದುಕಿನಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ಅಂತೆಯೇ ಈಕೆಯ ಜೀವನವಂತೂ ಊಹಿಸದ ವಿಪರೀತ ಬದಲಾವಣೆಯನ್ನು ಕಂಡಿದೆ.
ಅನಾಮಿಕಾ ಬದುಕು ಒಂದು ಹಂತದವರೆಗೆ ಅದ್ದೂರಿಯಾಗಿಯೇ ಇತ್ತು. ಸುಂದರವಾದ ಯೌವನ, ಉತ್ತಮ ಓದು ಸಿಕ್ಕಾಪಟ್ಟೆ ದುಡಿಯುವ ಪತಿ ಮೂವರು ಮಕ್ಕಳು ಮನೆಯಲ್ಲಿ 9 ಕಾರುಗಳು, ಡ್ರೈವರ್ ಗಳು, ಮನೆಯ ಎಲ್ಲ ಕೆಲಸಕ್ಕೂ ಆಳುಕಾಳುಗಳು. ಬೆಳ್ಳಿಯ ಬಟ್ಟಲಲ್ಲೇ ಊಟ ಮಾಡಲಾಗುತ್ತಿತ್ತು. ಶ್ರೀಮಂತಿಕೆಗೆ ತಕ್ಕಂತೆ ಅನಾಮಿಕಾ ದೇವಿಯದ್ದೂ ಲಕ್ಸುರಿ ಜೀವನವಾಗಿತ್ತು. ಅಶೋಕಾ ಹೋಟೆಲ್ ನಲ್ಲಿ ತಿಂಡಿ ತಿಂದು ಮಸಾಲೆ ಟೀ ಕುಡಿಯಲು ಒಬೆರಾಯ್ ಹೋಟೆಲ್ ಗೆ ಹೋಗುತ್ತಿದ್ದಳು. ಅಲ್ಲದೆ ಈಕೆಯ ಮದುವೆ ಮದುವೆ ಜೆಮ್ಸ್ ಫೋರ್ಡ್ ಕ್ಲಬ್ ನಲ್ಲಿ ಆಗಿತ್ತು. ಈ ವೈಭವದ ಮದುವೆಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಬಂದಿದ್ದರಂತೆ.
ಹೇರ್ ಸ್ಟೈಲ್ ಇಂದಿರಾ ಗಾಂಧಿಯನ್ನು ಹೋಲುತ್ತಿದ್ದುದರಿಂದ ಈಕೆಯನ್ನು ಸಹ ಎಷ್ಟೋ ಜನ ಹಾಗೆಯೇ ಕರೆಯುತ್ತಿದ್ದರು. ಬದುಕು ಹೀಗೆ ಸಾಗಿರುವಾಗ ಅನಾಮಿಕಾ ದೇವಿಯ ಕುಟುಂಬದಲ್ಲಿ ಮಹತ್ತರ ತಿರುವು ಬಂತು. ಸ್ಮಗ್ಲರ್ ಕುಟುಂಬವಾಗಿದ್ದರಿಂದ ಈಕೆಯ ಅತ್ತೆಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲಿಗೆ ಹಾಕಲಾಯಿತು. ಅಲ್ಲಿಂದ ಬಂದ ಬಳಿಕ ಈಕೆಯ ಅತ್ತೆ ಮನೆಯಿಂದ ಸೊಸೆಯನ್ನು ಹೊರಹಾಕಿದಳು. ಏಕಾಏಕಿ ಲಕ್ಸುರಿ ಜೀವನದಿಂದ ದೂರವಾದ ಅನಾಮಿಕಾ ದೇವಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸಾಯಿತು. ಆದರೆ, ಸಾಧ್ಯವಾಗಲಿಲ್ಲ. ಹೀಗೆ ಅಲ್ಲಿ ಇಲ್ಲಿ ಜೀವನ ಸವೆಸುವುದನ್ನು ಕಲಿತಳು. ಒಮ್ಮೆ, ಅಘೋರಿ ಸಾಧುಗಳೊಂದಿಗೆ ಹೃಷಿಕೇಶದಲ್ಲಿ ಸ್ವಲ್ಪ ಸಮಯ ನೆಲೆಸಿ ದೆಹಲಿಗೆ ಮರಳಿದಳು. ವೈಶ್ಯೆಯಾಗಲು ಜಿಬಿ ರಸ್ತೆಗೆ ಸಾಗಿದಳು. ಆದರೆ, ಅದಕ್ಕೂ ಮನಸ್ಸು ಒಪ್ಪಲಿಲ್ಲ.
ಕೊನೆಗೆ ದೆಹಲಿಯ ಬೀದಿಯಲ್ಲಿ ಪುಸ್ತಕ ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಏನನ್ನೂ ಉಳಿತಾಯ ಮಾಡುವುದಿಲ್ಲ. ಕೆಲವೊಮ್ಮೆ ಉಚಿತವಾಗಿಯೂ ನೀಡಿ ಕಳುಹಿಸುತ್ತಾಳೆ. ಕೇಳಿದರೆ ‘ಹಣದಿಂದ ಏನು ಮಾಡಲು ಸಾಧ್ಯ? ನನಗೇಕೆ ಹಣ?’ ಎಂದು ಪ್ರಶ್ನಿಸುತ್ತಾಳೆ. ಈ ಅಜ್ಜಿಯ ಮಕ್ಕಳು ಈಗ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ. ಈಕೆಗೆ ಯಾರೊಂದಿಗೂ ಹೋಗಿರಲು ಮನಸ್ಸು ಒಪ್ಪದು. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ಮೇಲೆ ಮತ್ತೆ ಪಡೆದು ಏನೂ ಪ್ರಯೋಜನವಿಲ್ಲ. ಇರುವುದರಲ್ಲೇ ನೆಮ್ಮದಿಯಿಂದ ಬದುಕುತ್ತೇನೆ ಎಂದು ಹೇಳತ್ತಾಳೆ ಒಂದು ಕಾಲದ ಶ್ರೀಮಂತ ಮುದುಕಿ.