7.3kg ತೂಕದ ಎರಡು ಅಡಿ ಎತ್ತರದ ಮಗುವಿಗೆ ಜನ್ಮನೀಡಿದ ತಾಯಿ..!?

Share the Article

ಸಾಮಾನ್ಯವಾಗಿ ನವಜಾತ ಶಿಶು 2.5 ಕೆಜಿಯಿಂದ 3.5 ಕೆಜಿ ಇರುತ್ತೆ. ದಷ್ಟಪುಷ್ಟವಾಗಿ ಬೆಳೆದಿದ್ರೆ 5 ಕೆಜಿ ಇರಬಹುದು. ಆದ್ರೆ ಬ್ರೆಜಿಲ್​ನ ಮಹಾತಾಯಿಯೊಬ್ಬಳು 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ದೈತ್ಯ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.ಪಾರಿಂಟಿನ್ಸ್‌ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದು, ಆ್ಯಂಗರ್‌ಸನ್ ಸ್ಯಾಂಟೋಸ್ ಎಂದು ಹೆಸರಿಡಲಾಗಿದೆ.

2016ರಲ್ಲಿ ಜನಿಸಿದ 6.8 ಕೆ.ಜಿ ತೂಕದ ಮಗು, ಬ್ರೆಜಿಲ್‌ನಲ್ಲಿ ಈವರೆಗೆ ಜನಿಸಿದ ಅತ್ಯಂತ ತೂಕದ ಮಗು ಎಂಬ ದಾಖಲೆ ಹೊಂದಿತ್ತು.ವಿಶ್ವದಲ್ಲಿ ಇದಕ್ಕಿಂತ ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ ತೂಕದ ಮಗು ಜನಿಸಿತ್ತು. ಜನನದ ಸಮಯದಲ್ಲಿ ಸಾಮಾನ್ಯವಾಗಿ ಗಂಡು ಮಗುವಿನ ತೂಕ 3.3 ಕೆ.ಜಿ ಮತ್ತು ಹೆಣ್ಣು ಮಗುವಿನ ತೂಕ 3.2 ಕೆ.ಜಿವರೆಗೆ ಇರುತ್ತದೆ. ಅಧಿಕ ತೂಕದ ದೈತ್ಯ ಶಿಶುಗಳನ್ನು ಮ್ಯಾಕ್ರೋಸೋಮಿಯಾ ಶಿಶುಗಳು ಎಂದು ಹೇಳಲಾಗುತ್ತದೆ. 4 ಕೆಜಿಗಿಂತ ಹೆಚ್ಚು ತೂಕವಿರುವ ಯಾವುದೇ ಮಗುವನ್ನು ಹೀಗೆ ಕರೆಯಲಾಗುತ್ತದೆ.

ಜಗತ್ತಿನಲ್ಲಿ ಮ್ಯಾಕ್ರೋಸೋಮಿಯಾ ಶಿಶುಗಳ ಜನನ ಶೇಕಡ 12ರಷ್ಟಿದೆ. ತಾಯಂದಿರಲ್ಲಿ ಗರ್ಭಾವಸ್ಥೆಯ ಮಧುಮೇಹ ಸಮಸ್ಯೆಯಿಂದಾಗಿ ಈ ರೀತಿಯ ಮಕ್ಕಳ ಜನನದ ಸಾಧ್ಯತೆ ಶೇಕಡ 15ರಿಂದ 45ರಷ್ಟು ಹೆಚ್ಚಾಗುತ್ತದೆ. ಸ್ಥೂಲಕಾಯದ ತಾಯಂದಿರು ಮ್ಯಾಕ್ರೋಸೋಮಿಯಾ ಶಿಶುವಿಗೆ ಜನ್ಮ ನೀಡುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ವೈದ್ಯರು ಹೇಳುತ್ತಾರೆ.

Leave A Reply

Your email address will not be published.