SHOCKING NEWS : 5 ತಿಂಗಳ ಹಸುಗೂಸನ್ನು ಕಾಲುವೆಗೆ ಎಸೆದ್ರು ಈ ದಂಪತಿ | ಕಾರಣ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!
ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಅನ್ನೋ ಮಾತು ಹೆಚ್ಚು ಜನಪ್ರಿಯ. ಕುರುಡು ಕಾಂಚಾಣದ ಮಹಿಮೆಗೆ ಇದ್ದವರನ್ನು ಇಲ್ಲವಾಗಿಸುವ, ಸತ್ತವರನ್ನು ಮರು ಸೃಷ್ಟಿಸುವ ಹೀಗೆ ನಾನಾ ಪ್ರಯೋಗಗಳನ್ನು ತಮ್ಮ ಬತ್ತಳಿಕೆಯಿಂದ ಪ್ರಯೋಗಿಸುವ ಅನೇಕ ಮಂದಿಯನ್ನು ನಾವು ನೋಡಿರುತ್ತೇವೆ. ಆದರೆ, ಕೆಲ ಘಟನೆಗಳ ಬಗ್ಗೆ ತಿಳಿದಾಗ ಅಚ್ಚರಿಯಾಗೋದು ಖಚಿತ. ಈಗ ವರದಿಯಾದ ಘಟನೆ ಕೇಳಿದರೆ, ಕಲ್ಲು ಬಂಡೆಗಳ ರೀತಿಯ ಕಟುಕ ಮನೋಭಾವಾದವರು ಇರಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.
ರಾಜಸ್ಥಾನದ ಬಿಕಾನೇರ್ನಲ್ಲಿ ಸರ್ಕಾರಿ ನೌಕರಿ ಉಳಿಸಿಕೊಳ್ಳುವ ಹಂಬಲದಿಂದ ದಂಪತಿಗಳು ತಮ್ಮ ಐದು ತಿಂಗಳ ಹೆಣ್ಣು ಮಗುವನ್ನು ಕಾಲುವೆಗೆ ಎಸೆದು ಕೊಂದಿರುವ ಘಟನೆ ವರದಿಯಾಗಿದೆ. ಆರೋಪಿ ತಂದೆಯನ್ನು ಜನ್ವರ್ಲಾಲ್ ಎಂದು ಗುರುತಿಸಲಾಗಿದ್ದು, ಜನ್ವರ್ಲಾಲ್ ಚಂದಾಸರ್ ಗ್ರಾಮದಲ್ಲಿ ಶಾಲಾ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಜನ್ವರ್ಲಾಲ್ ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ಪ್ರಮಾಣ ಪತ್ರ ನೀಡಿದ್ದು, ಈ ಹಿನ್ನೆಲೆ ಪೊಲೀಸರ ಅಂದಾಜಿನ ಅನುಸಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವುದರಿಂದ ತನ್ನ ಸರ್ಕಾರಿ ನೌಕರಿಗೆ ಕತ್ತರಿ ಬೀಳುವ ಅಥವಾ ಕೆಲಸ ಕಳೆದುಕೊಳ್ಳುವ ಆತಂಕದಿಂದ ಜನ್ವರ್ಲಾಲ್, ಕೆಲಸ ಕಳೆದುಕೊಳ್ಳಬಾರದು ಎಂಬ ದೆಸೆಯಿಂದ, ಜನ್ವರ್ಲಾಲ್ ತನ್ನ ಒಂದು ಹೆಣ್ಣು ಮಗುವನ್ನು ಸಾಯಿಸುವ ನಿರ್ಧಾರ ಮಾಡಿ, ಆತನ ಹೆಂಡತಿಯೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಆರೋಪಿಗಳು ತಾವು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದು, ಹೀಗಾಗಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.