ನಿಮ್ಮ ಹಣ ಈ ಮೂರು ಬ್ಯಾಂಕ್‌ಗಳಲ್ಲಿ ಸುರಕ್ಷಿತ – ಆರ್‌ಬಿಐ

ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ.

ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ.

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಇದೀಗ, ಬ್ಯಾಂಕ್‌ಗಳಿಗೆ ಸಂಬಂಧಪಟ್ಟಂತೆ ಅತಿ ಮುಖ್ಯ ಮಾಹಿತಿಯನ್ನು ರಿಸರ್ವ್ ಬ್ಯಾಂಕ್ ಬಹಿರಂಗಪಡಿಸಿದ್ದು, ಈ ಬಗ್ಗೆ ಗ್ರಾಹಕರು ತಿಳಿದುಕೊಳ್ಳುವುದು ಉತ್ತಮ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮುಂಚಿನ ಹಾಗೆ ವ್ಯಾಲೆಟ್ ನಲ್ಲಿದ್ದ ನಗದಿನ ಜಾಗವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಭದ್ರ ಪಡಿಸಿಕೊಂಡು ಬಿಟ್ಟಿದ್ದು, ಮೊಬೈಲ್ ಎಂಬ ಮಾಯಾವಿಯ ಬಳಕೆಯ ಬಳಿಕ ಎಲ್ಲ ಆನ್‌ಲೈನ್ ಬ್ಯಾಂಕ್​ ವಹಿವಾಟುಗಳನ್ನು ಮಾಡುವವರ ಪ್ರಮಾಣವೂ ಕೂಡ ಏರಿಕೆ ಕಂಡಿದೆ. ಭಾರತದಲ್ಲಿ ಅನೇಕ ಬ್ಯಾಂಕುಗಳಿದ್ದು, ಆ ಬ್ಯಾಂಕುಗಳಲ್ಲಿ ಕೋಟ್ಯಂತರ ಗ್ರಾಹಕರು ಖಾತೆ ಯನ್ನೊಳಗೊಂಡಿದ್ದಾರೆ.

ಸರ್ಕಾರಿ ಬ್ಯಾಂಕ್ ಗಳಿಂದ ಹಿಡಿದು, ಖಾಸಗಿ ಬ್ಯಾಂಕ್ ಗಳವರೆಗೆ ಅನೇಕ ಬ್ಯಾಂಕ್ ಗಳು ಜನರಿಗೆ ನೆರವಾಗುತ್ತಿವೆ. ಆದರೆ ಈ ನಡುವೆ ಬ್ಯಾಂಕ್ ಗಳ ಬಗ್ಗೆ ರಿಸರ್ವ್ ಬ್ಯಾಂಕ್ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಗ್ರಾಹಕರು ಠೇವಣಿ ಇಟ್ಟ ಹಣ ಯಾವ ಬ್ಯಾಂಕ್ ನಲ್ಲಿ ಸುರಕ್ಷಿತವಾಗಿದೆ ಜೊತೆಗೆ ಯಾವ ಬ್ಯಾಂಕ್‌ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿಲ್ಲ ಎಂಬ ಮಾಹಿತಿ ಆರ್ ಬಿಐ ಹೊರಹಾಕಿದೆ.

ಈ ಪಟ್ಟಿಯನ್ನು 2015 ರಿಂದ, ಆರ್ ಬಿಐ ಬಿಡುಗಡೆ ಮಾಡುತ್ತಿದ್ದು, ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆಗೆ ಅತ್ಯಂತ ಮುಖ್ಯವಾದ ಬ್ಯಾಂಕ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಆರ್‌ಬಿಐ ಅವುಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತದೆ. ಬ್ಯಾಂಕ್‌ಗಳಿಗೆ ಆರ್‌ಬಿಐ ರೇಟಿಂಗ್‌ಗಳನ್ನು ಸಹ ನೀಡಲಿದ್ದು, ಆ ಬಳಿಕ ಈ ಪ್ರಮುಖ ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ, ಈ ಪಟ್ಟಿಯಲ್ಲಿ 3 ಬ್ಯಾಂಕ್‌ಗಳ ಹೆಸರುಗಳನ್ನು ಸೇರಿಸಲಾಗಿದೆ.

ಆರ್‌ಬಿಐ ನೀಡಿದ ಮಾಹಿತಿಯ ಅನುಸಾರ, 2022 ರ ಈ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹೊರತುಪಡಿಸಿ, ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. ಇದರ ಜೊತೆಗೆ ಈ ಪಟ್ಟಿಯಲ್ಲಿ ನಷ್ಟದಲ್ಲಿರುವ ಬ್ಯಾಂಕ್ ಹಾಗೂ ಅವುಗಳ ನಷ್ಟದಿಂದಾಗಿ ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಲ್ಲ ಬ್ಯಾಂಕ್ ಗಳ ಹೆಸರುಗಳನ್ನು ಕೂಡ ಸೇರಿಸಲಾಗಿದೆ.

ರಿಸರ್ವ್ ಬ್ಯಾಂಕ್ ಈಗಾಗಲೇ ಡೊಮ್ಯಾಸ್ಟಿಕ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್ (D-SIBs) 2022ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಒಂದು ಸರ್ಕಾರಿ ಮತ್ತು 2 ಖಾಸಗಿ ಬ್ಯಾಂಕ್‌ಗಳ ಹೆಸರುಗಳನ್ನು ಕೂಡ ಸೇರಿಸಿದೆ.

ಇದರೊಂದಿಗೆ ಕಳೆದ ವರ್ಷ ಸೇರ್ಪಡೆಯಾದ ಬ್ಯಾಂಕ್‌ಗಳ ಹೆಸರನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಬರುವ ಬ್ಯಾಂಕುಗಳ ಮೇಲೆ ಕಟ್ಟುನಿಟ್ಟಿನ ಗಮನ ಹರಿಸಲಾಗಿದೆ. ಆರ್‌ಬಿಐ ಪಟ್ಟಿಯ ಅನುಸಾರ, ಎಸ್‌ಬಿಐನ ರಿಸ್ಕ್ ವೆಯ್ಟೆಡ್ ಅಸೆಟ್ ನ ಶೇಕಡಾ 0.60 ಅನ್ನು ಟೈರ್-1 ಆಗಿ ಇರಿಸಲಾಗಿದ್ದು ಇನ್ನು ICICI ಮತ್ತು HDFCಯ ರಿಸ್ಕ್ ವೆಯ್ಟೆಡ್ ಅಸೆಟ್ 0.20 ಪ್ರತಿಶತ ಎನ್ನಲಾಗಿದೆ.

Leave A Reply

Your email address will not be published.