LPG Price : ಹೊಸ ವರ್ಷಕ್ಕೆ ಎಲ್‌ಪಿಜಿ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ | ದರ ಹೆಚ್ಚಳ

ಹೊಸ ವರ್ಷ ಪ್ರಾರಂಭ ಆಗುವ ಹೊಸ್ತಿಲಿನಲ್ಲೇ ಜನ ಸಾಮಾನ್ಯರಿಗೆ ಬಿಗ್‌ ಶಾಕಿಂಗ್‌ ನ್ಯೂಸ್.‌ ಅದೇನೆಂದರೆ ಗ್ಯಾಸ್‌ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಲಾಗಿದೆ. ಹೊಸ ವರ್ಷದಿಂದ ಸಿಲಿಂಡರ್‌ ಖರೀದಿ ದುಬಾರಿಯಾಗಿದ್ದು, ಸಿಲಿಂಡರ್‌ ಬೆಲೆಯಲ್ಲಿ ಏರಿಕೆಯಾಗಿದೆ. ಇದು ನಿಜಕ್ಕೂ ಗ್ರಾಹಕರಿಗೆ ನಿಜಕ್ಕೂ ಸಂಕಷ್ಟ ತಂದಿದೆ. ದೆಹಲಿ, ಮುಂಬೈನಿಂದ ಪಾಟ್ನಾವರೆಗಿನ ಎಲ್ಲಾ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ದುಬಾರಿಯಾಗಿದೆ. ಯಾವ ನಗರದಲ್ಲಿ ಸಿಲಿಂಡರ್ ದರ ಎಷ್ಟಿದೆ ಎಂದು ತಿಳಿಯೋಣ.

ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳು ಹೆಚ್ಚಾಗಿದೆ. ದೇಶೀಯ ಗ್ಯಾಸ್ ಸಿಲಿಂಡರ್ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಬರೋಬ್ಬರಿ 25 ರೂ. ಹೆಚ್ಚಳವಾಗಿದೆ.

ದೆಹಲಿಯಲ್ಲಿ 1769 ರೂ., ಮುಂಬೈ – 1721 ರೂ., ಕೊಲ್ಕತ್ತಾ – 1870 ರೂ., ಚೆನ್ನೈ – 1917 ರೂ.,

ದೇಶೀಯ ಸಿಲಿಂಡರ್ ದರಗಳು ಈ ರೀತಿ ಇದೆ. ದೆಹಲಿ – 1053 ರೂ.,ಮುಂಬೈ – 1052.5 ರೂ, ಕೋಲ್ಕತ್ತಾ – 1079 ರೂ., ಚೆನ್ನೈ – 1068.5 ರೂ.
ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ಬೆಲೆ 153.5 ರೂ ಹೆಚ್ಚಳವಾಗಿದೆಯೆಂದೇ ಹೇಳಬಹುದು. 6 ಜುಲೈ 2022 ರಂದು ಗೃಹಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್‌ನ ಬೆಲೆ ಕೊನೆಯ ಬಾರಿಗೆ ಬದಲಾವಣೆ ಮಾಡಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 153.5 ರೂ. ಹೆಚ್ಚಳವಾಗಿದೆ.

2022ರ ಮಾರ್ಚ್ ತಿಂಗಳಿನಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಿಸಲಾಯಿತು. ನಂತರ ಮೇ ತಿಂಗಳಲ್ಲಿ ಮತ್ತೆ 50 ರೂ.ಏರಿಸಲಾಯಿತು. ಆ ಬಳಿಕ ಮತ್ತೊಮ್ಮೆ ಅದೇ ತಿಂಗಳಲ್ಲಿ ಎರಡನೇ ಬಾರಿಗೆ 3.50 ರೂ. ಹೆಚ್ಚಳವಾಯಿತು. ನಂತರ ಜುಲೈನಲ್ಲಿ ಕೊನೆಯ ಬಾರಿಗೆ 50 ರೂ. ಏರಿಕೆ ಮಾಡಲಾಯಿತು.

Leave A Reply

Your email address will not be published.