ಮಾರುಕಟ್ಟೆಗೆ ಬಂತು ನೋಡಿ ಅತೀ ಕಡಿಮೆ ಬೆಲೆಯ ವಾಷಿಂಗ್‌ ಮೆಷಿನ್‌ | ಇದರ ವೈಶಿಷ್ಟ್ಯಗಳು ಕೂಡಾ ವಾಹ್…‌

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಹೌದು!! ಇದೀಗ ಮಾರುಕಟ್ಟೆಗೆ ಕಾಲಿಟ್ಟಿದೆ 7 ಸಾವಿರ ರೂಪಾಯಿ ಬೆಲೆಯ ವಾಷಿಂಗ್ ಮೆಷಿನ್ !! ಅದರ ವಿಶೇಷತೆ ಕೇಳಿದರೆ ಅಚ್ಚರಿಯಾಗೋದು ಗ್ಯಾರಂಟಿ.

ಚುಮು ಚುಮು ಚಳಿಯಲ್ಲಿ ತಣ್ಣೀರನ್ನು ಮುಟ್ಟಿದರೆ ಸಾಕು ಮೈ ಜುಮ್ ಎನಿಸೋದು ಪಕ್ಕಾ!! ಈ ಚಳಿಗೆ ನೀರು ಮುಟ್ಟಿ ಬಿಟ್ಟರೆ ಐಸ್ ಕ್ಯೂಬ್ ಮುಟ್ಟಿದ ಹಾಗೇ ಅಷ್ಟು ಕೂಲ್ ಕೂಲ್ ಆಗಿರುತ್ತೆ. ಹೀಗಿರುವಾಗ ಚಳಿಗಾಲದಲ್ಲಿ ತಣ್ಣೀರಿಗೆ ಕೈ ಹಾಕಿ ಕೆಲಸ ಮಾಡುವುದು ಸ್ವಲ್ಪ ಕಷ್ಟವೇ ಸರಿ. ಅದರ ಜೊತೆಗೆ ತಣ್ಣೀರಲ್ಲಿ ಬಟ್ಟೆಯನ್ನು ಕೈಯ್ಯಲ್ಲಿ ತೊಳೆಯುವುದು ಕಷ್ಟವೇ!!. ಈಗ ಪ್ರತಿ ಕೆಲಸ ಸರಳ ಮಾಡುವ ನಿಟ್ಟಿನಲ್ಲಿ ಅನ್ವೇಷಣೆ ಆವಿಷ್ಕಾರ ಆಗಿರುವಾಗ ಚಿಂತಿಸುವ ಪ್ರಮೇಯವೇ ಇಲ್ಲ. ಹೇಳಿ ಕೇಳಿ ಇದು ಕಲಿ ಯುಗ. ಫ್ರಿಜ್, ವಾಷಿಂಗ್ ಮೆಷಿನ್ , ಫ್ಯಾನ್ ಎಲ್ಲದರಲ್ಲಿ ಕೂಡ ವೈಶಿಷ್ಟ್ಯತೆ ಯ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.

ಹಾಗೆಂದ ಮಾತ್ರಕ್ಕೆ ಎಲ್ಲರ ಮನೆಯಲ್ಲಿ ಎಲ್ಲ ಸೌಕರ್ಯ ಇರಲು ಸಾಧ್ಯವಿಲ್ಲ. ಎಲ್ಲರ ಮನೆಯಲ್ಲಿ ಕೂಡ ವಾಷಿಂಗ್ ಮೆಷಿನ್ ಇರಲು ಸಾಧ್ಯವಿಲ್ಲ. ಈಗ ಪ್ರತಿಯೊಂದು ಮನೆಯೂ ವಾಷಿಂಗ್ ಮೆಷಿನ್ ಕೊಂಡುಕೊಳ್ಳಬಹುದು.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಅರೇ.. ಇದು ಹೇಗಪ್ಪಾ?? ಅಂತೀರಾ?? ಅತಿ ಕಡಿಮೆ ಬೆಲೆಗೆ ಕೈ ಗೆ ಎಟಕುವ ದರದಲ್ಲಿ ವಾಷಿಂಗ್ ಮೆಷಿನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಉನ್ನತ ವೈಶಿಷ್ಟ್ಯಗಳನ್ನು ಹೊಂದಿರುವ ಸೆಮಿ ಆಟೋಮ್ಯಾಟಿಕ್ ವಾಶಿಂಗ್ ಮೆಷಿನ್ ಮಾರುಕಟ್ಟೆಯಲ್ಲಿದೆ. ಅಮೆರಿಕದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ವೈಟ್ ವೆಸ್ಟಿಂಗ್ಹೌಸ್ ವಾಷಿಂಗ್ ಮೆಷಿನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಡಿಸೆಂಬರ್ 23 ರಂದು ಅಂದರೆ ನಾಳೆ ಫ್ಲಿಪ್ಕಾರ್ಟ್ನಲ್ಲಿ 3 ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ಗಳನ್ನು ಮಾರಾಟಕ್ಕೆ ಬಿಡಲಿದೆ.

ವೈಟ್ ವೆಸ್ಟಿಂಗ್ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ವೈಶಿಷ್ಟ್ಯಗಳು :

ವೈಟ್ ವೆಸ್ಟಿಂಗ್ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ನಲ್ಲಿ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಡಬಲ್ ಇನ್ಲೆಟ್, ಡಬಲ್ ವಾಟರ್ ಫಾಲ್, ಮ್ಯಾಜಿಕ್ ಫಿಲ್ಟರ್, ಕಾಲರ್ ಸ್ಕ್ರಬ್ಬರ್ ಮತ್ತು ಏರ್-ಡ್ರೈ ಫೀಚರ್ನಂತಹ ವೈಶಿಷ್ಟ್ಯಗಳೊಂದಿಗೆ ಈ ಮೆಷಿನ್ ಅನ್ನು ಅಣಿಗೊಳಿಸಲಾಗಿದೆ. ಈ ಮೆಷಿನ್ ರಸ್ಟ್ ಫ್ರೀ ಪ್ಲಾಸ್ಟಿಕ್ ಬಾಡಿ ಮತ್ತು ಶಕ್ತಿಯುತ ಇನ್ಸುಲೇಟೆಡ್ ಮೋಟಾರ್ನೊಂದಿಗೆ ಬರುತ್ತವೆ.

ವೈಟ್ ವೆಸ್ಟಿಂಗ್ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಬೆಲೆ :

ವೈಟ್ ವೆಸ್ಟಿಂಗ್ಹೌಸ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ನ ಮೂರು ಮಾದರಿಗಳಲ್ಲಿ (6KG, 8.5KG ಮತ್ತು 9.5KG) ದೊರೆಯಲಿದೆ. ಇವುಗಳ ಬೆಲೆ ಕ್ರಮವಾಗಿ 7190, 8999 ಮತ್ತು 10499 ರೂ. ವಾಷಿಂಗ್ ಮೆಷಿನ್ ಅನ್ನು ಫ್ಲಿಪ್ಕಾರ್ಟ್ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಎಲ್ಲಾ ಮೂರು ಮಾದರಿಗಳು ಡಿಸೆಂಬರ್ 23 ರಿಂದ ಗ್ರಾಹಕರಿಗೆ ಲಭ್ಯವಿರುತ್ತವೆ.

Leave A Reply

Your email address will not be published.