ಡಿಜೆ, ಬ್ಯಾಂಡ್‌ ಮದುವೆಗಳಲ್ಲಿ ಬಳಸಬೇಡಿ – ಮುಸ್ಲಿಂ ಮಹಾ ಸಭಾ ಎಚ್ಚರಿಕೆ

Share the Article

ಭಾರತದಲ್ಲಿ ಮದುವೆಗೆ ತನ್ನದೇ ಆದ ವಿಶೇಷತೆ ಇದೆ. ಮದುವೆಯನ್ನು ಬಹಳ ಅದ್ದೂರಿಯಾಗಿ ನಡೆಸುವುದಲ್ಲದೆ ಸಮಾರಂಭದಲ್ಲಿ ಡಿಜೆ ಸಂಗೀತ ಅಥವಾ ಬ್ಯಾಂಡ್ ನುಡಿಸುತ್ತಾ ಸಂಭ್ರಮ ಆಚರಿಸುತ್ತಾರೆ. ಆದರೆ ಇನ್ನುಮುಂದೆ ಮದುವೆ ಸಮಾರಂಭದಲ್ಲಿ ಡಿಜೆ ಸಂಗೀತ ಅಥವಾ ಬ್ಯಾಂಡ್ ನುಡಿಸಿದರೆ ‘ನಿಖಾ’ ಮಾಡಬೇಡಿ ಎಂದು ಉತ್ತರ ಪ್ರದೇಶದ ಮುಸ್ಲಿಂ ಮಹಾ ಸಭಾ ಧರ್ಮಗುರುಗಳಿಗೆ ಘಾಜಿಯಾಬಾದ್ ಮುಸ್ಲಿಂ ಸಂಘಟನೆ ಸೂಚನೆ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.

ಭವಿಷ್ಯದಲ್ಲಿ ಡಿಜೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಲಿಖಿತ ಭರವಸೆಯನ್ನು ಕುಟುಂಬಗಳಿಂದ ತೆಗೆದುಕೊಳ್ಳಬೇಕು ಎಂದು ಘಾಜಿಯಾಬಾದ್ ಮುಸ್ಲಿಂ ಸಂಘಟನೆ ಮನವಿ ಮಾಡಿದೆ.

ಪಿಟಿಐ ಪ್ರಕಾರ, ವಿವಾಹ ಸಮಾರಂಭಗಳನ್ನು ಸರಳವಾಗಿ ನಡೆಸಲು ಸಮುದಾಯಗಳನ್ನು ಮನವೊಲಿಸಲು ಧರ್ಮಗುರುಗಳ ಸಹಕಾರವನ್ನು ಕೋರಿ ಸಂಸ್ಥೆ ಹೇಳಿಕೆ ನೀಡಿದೆ. ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ಸಂಸ್ಥೆ ವಿರೋಧಿಸುವುದನ್ನು ಮುಂದುವರಿಸಲಿದೆ ಎಂದು ಹೇಳಿಕೆ ನೀಡಲಾಗಿದೆ.

Leave A Reply

Your email address will not be published.