School Holidays in December: ಈ ತಿಂಗಳು ಎಷ್ಟು ದಿನ ಶಾಲೆಗಳು ಮುಚ್ಚಲ್ಪಡುತ್ತವೆ?

ಡಿಸೆಂಬರ್ ವರ್ಷದ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ.ಇನ್ನೇನೂ ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಎಲ್ಲೆಡೆ ನಡೆಯಲಿದ್ದು, ಕ್ರಿಸ್ಮಸ್ ಹಬ್ಬದ ಸಂಭ್ರಮ ಮುಗಿಯುವ ನಡುವೆ ಹೊಸ ವರ್ಷ ವನ್ನು ಬರಮಾಡಿಕೊಳ್ಳುವ ಜೊತೆಗೆ ಹಬ್ಬದ ವಾತಾವರಣ ಎಲ್ಲೆಡೆ ಸೃಷ್ಟಿಯಾಗುತ್ತದೆ.

ಚುಮು ಚುಮು ಚಳಿಯ ನಡುವೆ ಪ್ರಪಂಚದಾದ್ಯಂತ ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ನಿಟ್ಟಿನಲ್ಲಿ ಕ್ರೈಸ್ತ ಬಾಂಧವರು ಜೊತೆಗೂಡಿ ಕ್ರಿಸ್ಮಸ್ ದಿನದ ಸಂಭ್ರಮವನ್ನು ಆಚರಿಸಲು ದೂರ ದೂರುಗಳಿಂದ ಪ್ರಯಾಣ ಬೆಳೆಸುತ್ತಾರೆ. ಕ್ರಿಸ್‌ಮಸ್ ಹಬ್ಬವು ಯೇಸುಕ್ರಿಸ್ತನ ಜನ್ಮದಿನವನ್ನು ಮಾತ್ರವಲ್ಲದೆ ಎಲ್ಲ ಧರ್ಮಗಳ ಜನರಲ್ಲಿ ಪ್ರೀತಿ ಮತ್ತು ಉದಾರತೆಯನ್ನು ಹರಡುವ ಶುಭ ಗಳಿಗೆಯಾಗಿದೆ .

ಚಳಿಗಾಲ ಎಂದಾಗ ಹಾಸಿಗೆ ಇಂದ ಏಳಲು ಹರಸಾಹಸ ಪಡುವವರು ಹೆಚ್ಚಿನವರಿದ್ದಾರೆ. ಈ ನಡುವೆ ಬೆಳಿಗ್ಗೆ ಎಚ್ಚರಗೊಳ್ಳಲು ಕೂಡ ಪರದಾಡುತ್ತಾರೆ. ಚಿಕ್ಕವರು ಅಥವಾ ದೊಡ್ಡವರು ಎಂಬ ಅಂತರವಿಲ್ಲದೆ ಹೆಚ್ಚಿನ ಜನರಿಗೆ ಹಾಸಿಗೆಯಿಂದ ಹೊರಬರುವುದು ಕಷ್ಟವಾಗಿದ್ದು ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ಚಳಿಗಾಲದ ರಜಾದಿನಗಳು ಬರುತ್ತದೆ.

ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ನಲ್ಲಿ ಶಾಲೆಗಳಲ್ಲಿ ಚಳಿಗಾಲದ ರಜೆಗಳನ್ನು ನೀಡಲಾಗುತ್ತದೆ. ಈ ವರ್ಷ ಕ್ರಿಸ್ಮಸ್ ಭಾನುವಾರ ಬರಲಿದ್ದು, ಕ್ರಿಸ್ಮಸ್ ಮತ್ತು ಸಾಮಾನ್ಯ ವಾರಾಂತ್ಯಗಳನ್ನು ಹೊರತುಪಡಿಸಿ, ಚಳಿಗಾಲದ ರಜೆಯ ಅವಧಿಯಲ್ಲಿ ಶಾಲೆಗಳಿಗೆ ರಜೆ ಇರಲಿದೆ. ಈ ರಜೆಯ ಅವಧಿ ಸುಮಾರು 10-15 ದಿನಗಳವರೆಗೆ ಇರುತ್ತದೆ.

ಪ್ರಮುಖ ದಿನಾಂಕಗಳು ಹೀಗಿವೆ;

ಡಿಸೆಂಬರ್‌ನಲ್ಲಿ ಶನಿವಾರಗಳ ಪಟ್ಟಿ:

1 ನೇ ಶನಿವಾರ – ಡಿಸೆಂಬರ್ 3
2 ನೇ ಶನಿವಾರ – ಡಿಸೆಂಬರ್ 10
3 ನೇ ಶನಿವಾರ – ಡಿಸೆಂಬರ್ 17
4 ನೇ ಶನಿವಾರ – ಡಿಸೆಂಬರ್ 24 (ಕ್ರಿಸ್ಮಸ್ ಮುನ್ನಾದಿನ)
5 ನೇ ಶನಿವಾರ – ಡಿಸೆಂಬರ್ 31

ಅದೆ ರೀತಿ, ಡಿಸೆಂಬರ್‌ನಲ್ಲಿ ಭಾನುವಾರಗಳ ಪಟ್ಟಿ ಹೀಗಿವೆ:


1 ನೇ ಭಾನುವಾರ – ಡಿಸೆಂಬರ್ 4
2 ನೇ ಭಾನುವಾರ – ಡಿಸೆಂಬರ್ 11
3 ನೇ ಭಾನುವಾರ – ಡಿಸೆಂಬರ್ 18
4 ನೇ ಭಾನುವಾರ – ಡಿಸೆಂಬರ್ 25 (ಕ್ರಿಸ್ಮಸ್)


ಹಲವಾರು ಶಾಲೆಗಳು ವಿದ್ಯಾರ್ಥಿಗಳಿಗೆ ಚಳಿಗಾಲದ ರಜೆಯನ್ನು ನೀಡಲಾಗುತ್ತದೆ. ಕೆಲ ಶಾಲೆಗಳಲ್ಲಿ ಡಿಸೆಂಬರ್ ಕೊನೆ ವಾರದಲ್ಲಿ ರಜೆ ನೀಡಿದರೆ ಮತ್ತೆ ಕೆಲ ಶಾಲೆಗಳಲ್ಲಿ ಈ ರಜೆಗಳನ್ನು ಡಿಸೆಂಬರ್ ತಿಂಗಳ ಆರಂಭದಿಂದಲೇ ನೀಡಲಾಗುತ್ತದೆ. ಸಾಮಾನ್ಯವಾಗಿ ಸುಮಾರು 10 ದಿನಗಳವರೆಗೆ ಇರುತ್ತದೆ. ಆದರೆ ಈ ರಜೆಯು ಬೋರ್ಡ್ ಮತ್ತು ಶಾಲೆಯಿಂದ ಶಾಲೆಗೆ ಬದಲಾಗುತ್ತದೆ. ಇನ್ನೂ ಕೆಲ ಶಾಲೆಗಳಲ್ಲಿ ಡಿಸೆಂಬರ್ ಬಳಿಕವೂ ನೀಡಲಾಗುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ತಮ್ಮ ರಜೆಯ ಪ್ರವಾಸವನ್ನು ತಿಂಗಳ ಮುಂಚಿತವಾಗಿ ಯೋಜಿಸಬಹುದಾಗಿದೆ.

ವಿದ್ಯಾರ್ಥಿಗಳು ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ಮುಂಚಿತವಾಗಿ ಎಲ್ಲಾ ವಿಷಯಗಳ ಬಾಕಿ ಉಳಿದಿರುವ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಮೂಲಕ ಈ ತಿಂಗಳ ದೀರ್ಘ ರಜಾದಿನಗಳ ಸದುಪಯೋಗ ಪಡಿಸಿಕೊಳ್ಳಬಹುದು. CBSE ತರಗತಿ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಇದ್ದು, ಇದರ ಜೊತೆಗೆ JEE ಮುಖ್ಯ ನಂತಹ ಪ್ರವೇಶ ಪರೀಕ್ಷೆಗಳ ದಿನಾಂಕಗಳು ಮತ್ತು NEET UG 2023 ಅನ್ನು ಶೀಘ್ರದಲ್ಲೇ ಘೋಷಣೆ ಮಾಡಬಹುದು. ಹೀಗಾಗಿ, ವಿದ್ಯಾರ್ಥಿಗಳು ರಜೆಯ ದಿನಗಳನ್ನು ಸದ್ಭಳಕೆ ಮಾಡಿಕೊಳ್ಳಬಹುದು.

Leave A Reply

Your email address will not be published.