ದಕ್ಷಿಣ ಕನ್ನಡ; ಎಪಿಎಲ್ ಕಾರ್ಡ್ ದಾರರಿಗೆ 3 ತಿಂಗಳಿಂದ ಲಭ್ಯವಾಗದ ಅಕ್ಕಿ!! ಸದ್ಯದಲ್ಲೇ ಸಮಸ್ಯೆ ಬಗೆಹರಿಯುವ ಭರವಸೆ!!

ರಾಜ್ಯದ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ.

ಉಡುಪಿ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಎಪಿಎಲ್‌ ಕಾರ್ಡ್‌ದಾರರಿಗೆ ನಿರ್ದಿಷ್ಟ ದರ ಪಡೆದು ವಿತರಿಸಲಾಗುತ್ತಿದ್ದ ಅಕ್ಕಿ ಎರಡು ಮೂರು ತಿಂಗಳುಗಳಿಂದ ವಿತರಣೆಯಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ಏಕವ್ಯಕ್ತಿ ಬಿಪಿಎಲ್‌ ಕಾರ್ಡ್‌ಗೆ ತಿಂಗಳಿಗೆ 5 ಕೆ.ಜಿ. ಅಲ್ಲದೆ ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕಾರ್ಡ್‌ಗೆ ಪ್ರತಿ ತಿಂಗಳಿಗೆ 10 ಕೆ.ಜಿ. ಅಕ್ಕಿ ಯನ್ನು ಕೆ.ಜಿ.ಗೆ 15 ರೂ.ಗಳಂತೆ ನೀಡಲಾಗುತ್ತದೆ.

ಅಷ್ಟೆ ಅಲ್ಲದೆ, ಸೆಪ್ಟಂಬರ್‌ನಿಂದ ಸರಿಯಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿವೆ.
ಸದ್ಯ ಉಡುಪಿಯಲ್ಲಿ 1,12,931 ಎಪಿಎಲ್‌ ಕಾರ್ಡ್‌ದಾರರಿದ್ದು, ಅದೆ ರೀತಿ ದ.ಕ.ದಲ್ಲಿ 1,71,699 ಎಪಿಎಲ್ ಕಾರ್ಡ್ ದಾರರಿದ್ದಾರೆ. ಇದರಲ್ಲಿ ಶೇ. 40 ರಿಂದ ಶೇ.60ರಷ್ಟು ಕಾರ್ಡ್‌ದಾರರು ತಿಂಗಳ ರೇಷನ್‌ ಪಡೆಯುತ್ತಿದ್ದು, ಇಲಾಖೆಯ ಸಮಸ್ಯೆಯಿಂದ ಅವರಿಗೀಗ ಅಕ್ಕಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಎಪಿಎಲ್‌ ಕಾರ್ಡ್‌ಗೆ ಅಕ್ಕಿ ಸ್ಥಗಿತವಾಗಿರುವ ಬಗ್ಗೆ ನ್ಯಾಯ ಬೆಲೆ ಅಂಗಡಿಯಿಂದ ಸರಿಯಾದ ಮಾಹಿತಿ ಕೂಡ ಲಭ್ಯವಾಗುತಿಲ್ಲ ಜೊತೆಗೆ ಮುಂದಿನ ತಿಂಗಳು ಬಾಕಿ ಉಳಿದಿರುವ ಅಕ್ಕಿ ವಿತರಣೆ ಒಟ್ಟಿಗೆ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ .

ಕೇಂದ್ರ ಸರಕಾರ ಈ ಹಿಂದೆ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೆ ಜೊತೆಯಾಗಿ ಕೇಂದ್ರ ಆಹಾರ ನಿಗಮದ ಮೂಲಕ ಅಕ್ಕಿ ಪೂರೈಕೆ ಮಾಡುತ್ತಿತ್ತು. ಈಗ ಬಿಪಿಎಲ್‌ ಕಾರ್ಡ್‌ದಾರರಿಂದ ಎರಡು ಒಟಿಪಿ ಪಡೆದುಕೊಂಡ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲನ್ನು ಪ್ರತ್ಯೇಕವಾಗಿ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರದಿಂದ ಬಿಪಿಎಲ್‌ ಕಾರ್ಡ್‌ಗೆ ಎಷ್ಟು ಅಕ್ಕಿ ವಿತರಣೆ ಮಾಡಲಾಗುತ್ತದೋ ಅಷ್ಟು ಮಾತ್ರ ಲಭ್ಯವಾಗುತ್ತಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ರಾಜ್ಯ ಸರಕಾರ ಪ್ರತ್ಯೇಕವಾಗಿ ಖರೀದಿಸಬೇಕಾಗಿದ್ದು, ಹೀಗಾಗಿ ಎರಡು ಮೂರು ತಿಂಗಳುಗಳಿಂದ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಆಹಾರ, ನಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಮೂಲಗಳು ಹೇಳಿಕೊಂಡಿವೆ.

ಎಪಿಎಲ್‌ ಕಾರ್ಡ್‌ ಮಾಹಿತಿ ಹೀಗಿದೆ:

ತಾಲೂಕು ಕಾರ್ಡ್‌
ಬೆಳ್ತಂಗಡಿ 15,346
ಬಂಟ್ವಾಳ 22,943
ಮಂಗಳೂರು 91,015
ಪುತ್ತೂರು 29,792
ಸುಳ್ಯ 12,603
ಕಾರ್ಕಳ 16,600
ಕುಂದಾಪುರ 16,883
ಉಡುಪಿ 38,666
ಕಾಪು 17,380
ಬ್ರಹ್ಮಾವರ 14,714
ಬೈಂದೂರು 5,506
ಹೆಬ್ರಿ 3,182

ಭತ್ತ ಖರೀದಿ ಕೇಂದ್ರದಲ್ಲಿ ಕೂಡ ರೈತರ ನೋಂದಣಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎನ್ನಲಾಗಿದೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಡಿ.6ರ ಅಂತ್ಯಕ್ಕೆ 37 ರೈತರು ನೋಂದಣಿ ಮಾಡಿಕೊಂಡಿದ್ದು, ಸುಮಾರು 940 ಕ್ವಿಂಟಾಲ್‌ ಭತ್ತ ಸಿಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಕೇವಲ 4 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಸುಮಾರು 80 ಕ್ವಿಂಟಾಲ್‌ ಭತ್ತ ಸಿಗುವ ನಿರೀಕ್ಷೆಯಿದೆ. ರೈತರು ಭತ್ತವನ್ನು ಬೆಂಬಲ ಬೆಲೆಯಡಿ ನೀಡಲು ನೋಂದಣಿ ಮಾಡಿಸಿಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ಆಹಾರ, ನಾಗರಿಕ ಸರಬ ರಾಜು ನಿಗಮದ ಉಡುಪಿ, ದ.ಕ. ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ ರವರು ಮಾಹಿತಿ ನೀಡಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ರಾಜ್ಯ ಮಟ್ಟ ದಲ್ಲಿ ಎಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲು ಪ್ರತ್ಯೇಕ ಟೆಂಡರ್‌ ಆಗಿರುವುದರಿಂದ ಕೆಲವೇ ದಿನಗಳಲ್ಲಿ ಮೊದಲಿನಂತೆ ಅಕ್ಕಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.