Good Job | ಇಲಿ ಹಿಡಿಯಲು ‘ ರಕ್ತದಾಹಿ ‘ ನಿರ್ದೇಶಕರು ಬೇಕಾಗಿದ್ದಾರೆ ಸಂಬಳ 1.38 ಕೋಟಿ !

ಇಲಿ ಹಿಡಿಯಲು ಜನ ಬೇಕಾಗಿದೆ ಎಂದು ಗಮನ ಸೆಳೆದಿದೆ. ಅಷ್ಟೇ ಅಲ್ಲದೇ ಇಲಿ ಹಿಡಿದು ಕೊಳ್ಳಲು ‘ ಡೈರೆಕ್ಟರ್ ‘ ಲೆವೆಲ್ ನ ಜನರ ಹುಡುಕಾಟ ನಡೆಯುತ್ತಿದೆ. ಹೀಗೊಂದು ಜಾಹೀರಾತು ಈಗ ವಿಶ್ವದಾದ್ಯಂತ ಜನರನ್ನು ಆಕರ್ಷಿಸಿದೆ.

ಗುರಿಯನ್ನು ತಲುಪಬಲ್ಲ ದೃಢ ನಿರ್ಧಾರ, ಕೈಗೊಳ್ಳುವ ಕಾರ್ಯದಲ್ಲಿ ಚಾಣಾಕ್ಷತನ ಮತ್ತು ‘ ಕಿಲ್ಲರ್ ಇನ್ ಸ್ಟಿಂಕ್ಟ್ ‘ ಉಳ್ಳವರು ಸಂಪರ್ಕಿಸಿ ಎಂದು ಕೋರಲಾಗಿದೆ. ಇಲಿ ಹಿಡಿಯಲು ಡೈರೆಕ್ಟರ್ ಯಾಕೆ ಬೇಕು ಎಂದು ನೀವು ಕೇಳಬಹುದು. ಯಾಕೆಂದರೆ, ನಾವು ಅಂದುಕೊಂಡಷ್ಟು ಸುಲಭವಿಲ್ಲ ಇಲಿ ಹಿಡಿಯುವ ಕೆಲಸ. ನಿರ್ಧರಿಸಿದ ಗುರಿ ಸಾಧಿಸಬಲ್ಲ ‘ ರಕ್ತ ದಾಹಿ ‘ ಇಲಿ ಪಂಡಿತನಿಗೆ ಸ್ವಾಗತ ಎಂದಿದೆ ಅಲ್ಲಿನ ಮೇಯರ್ ಹೊರಡಿಸಿದ ಜಾಹೀರಾತು.

ಅಂದ ಹಾಗೆ ಈ ಜಾಬ್ ಕಾಲ್ ಆಫರ್ ಬಂದಿದ್ದು ಅಮೆರಿಕಾದ ನ್ಯೂಯಾರ್ಕ್ ನಗರದಿಂದ. ನಗರದಲ್ಲಿ ಸುಮಾರು 1.8 ಕೋಟಿ ಇಲಿಗಳು ಇವೆ ಇದ್ದು, 2020 ರಿಂದ ಇವುಗಳ ಸಂಖ್ಯೆ 71% ನಷ್ಟು ಅಧಿಕವಾಗಿದೆ. ಈ ಇಲಿಗಳನ್ನು ಕೊಲ್ಲಲು ನಿರ್ದೇಶಕರು ಬೇಕಾಗಿದ್ದಾರೆ ಎಂಬ ಜಾಹೀರಾತು ಇದಾಗಿದೆ.  ಇದಾದ ಬಳಿಕ, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಇಲಿಯನ್ನು ಕೊಲ್ಲಲುವವರಿಗೆ ಸಂಬಳವನ್ನು ನಿಗದಿ ಪಡಿಸಿದ್ದಾರೆ. ಅವರು ಕೊಟ್ಟ ಜಾಹೀರಾತು ಕುತೂಹಲ ಮೂಡಿಸುತ್ತಿದೆ.

ಇಲಿಯನ್ನು ಸಾಯಿಸಲು ಚಾಣಾಕ್ಷ್ಯತನವನ್ನು ಹೊಂದಿರಬೇಕು. ಆಯ್ಕೆಯಾದ ಸಿಬ್ಬಂದಿ ದಿನದ 24 ಗಂಟೆಗಳೂ ಕೆಲಸ ಮಾಡಲು ಸಿದ್ಧವಿದ್ದು ಗುರಿ ಸಾಧಿಸಲು ಸಿದ್ಧರಿರಬೇಕು. ನ್ಯೂಯಾರ್ಕ್ ನಗರದ ವಿವಿಧ ಸರ್ಕಾರಿ ತಂಡಗಳೊಂದಿಗೆ ಮತ್ತು ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಉತ್ಸಾಹದಿಂದ ಕೆಲಸ ಮಾಡಬೇಕು. ಇದರಿಂದ 80 ಲಕ್ಷ ನಿವಾಸಿಗಳು ಇಲಿಗಳ ಸಮಸ್ಯೆಯಿಂದ ಪಾರಾಗಬಹುದು. ಯಶಸ್ವಿ ‘ ಇಲಿ ನಿರ್ದೇಶಕನಿಗೆ ‘ ಬರೋಬ್ಬರಿ 1,38,41,663 ರೂ. ಸಂಬಳ ನೀಡುವುದಾಗಿ ತಿಳಿಸಿದ್ದಾರೆ.

Leave A Reply

Your email address will not be published.