Kitchen Hacks : ಗೃಹಿಣಿಯರೇ ನಿಮಗೊಂದು ಸುಲಭ ಟ್ರಿಕ್ | ಸೊಪ್ಪು ಬೇಗ ಹಾಳಾಗಬಾರದೇ ಈ ಹ್ಯಾಕ್ಸ್ ಒಮ್ಮೆ ಟ್ರೈ ಮಾಡಿ!

ದಿನನಿತ್ಯ ತರಕಾರಿಗಳು, ಸೊಪ್ಪುಗಳ ಸೇವನೆ ಉತ್ತಮ. ಹಲವಾರು ಮಂದಿಗೆ ಸಮಯ ಸಿಗದೇ ತರಕಾರಿ ತಂದು ಮನೆಯಲ್ಲಿ ಇಡುತ್ತಾರೆ. ಆದರೆ ಇದು ಒಂದು ಅಥವಾ ಎರಡು ದಿನಗಳ ನಂತರ ಹಾಳಾಗಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಹಸಿರು ಮತ್ತು ಎಲೆಗಳ ತರಕಾರಿಗಳು ಹೇರಳವಾಗಿ ಲಭ್ಯವಿದ್ದೂ, ಚಳಿಗಾಲದಲ್ಲಿ ಸೊಪ್ಪುಗಳನ್ನು ಹಾಳಾಗದಂತೆ ಕಾಪಾಡಲು ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಅವುಗಳನ್ನು ಸಂಗ್ರಹಿಸಲು ಕೆಲವು ವಿಧಾನಗಳನ್ನು ಪ್ರಯತ್ನಿಸುವುದರಿಂದ ಸೊಪ್ಪು ಬೇಗನೆ ಹಾಳಾಗದಂತೆ ನೋಡಿಕೊಳ್ಳಬಹುದು. ಸೊಪ್ಪುಗಳು ದೀರ್ಘಕಾಲದವರೆಗೆ ತಾಜಾ ಮತ್ತು ಹಸಿರಾಗಿರುವಂತೆ ಮಾಡಲು ನಾವು ಹೇಳುವ ಈ ಸಿಂಪಲ್ ಟ್ರಿಕ್ಸನ್ನೊಮ್ಮೆ ಟ್ರೈ ಮಾಡಿ.

ಕೆಲವು ಜನರು ಎಲ್ಲಾ ರೀತಿಯ ತರಕಾರಿಗಳನ್ನು ತೊಳೆದ ನಂತರ ಮಾತ್ರ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ, ಒದ್ದೆಯಾದ ತರಕಾರಿಗಳನ್ನು ಇಡುವುದರಿಂದ ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ತರಕಾರಿಗಳಲ್ಲಿ ನೀರಿನಾಂಶ ಉಳಿದಿದ್ದರೆ, ಅವುಗಳನ್ನು ರೆಫ್ರಿಜರೇಟರ್ನಲ್ಲಿ ಇಡುವ ಮೊದಲು ಒರೆಸಿ ಒಣಗಿಸಿಕೊಳ್ಳಿ. ಆದರೆ ಸೊಪ್ಪುಗಳನ್ನು ತೊಳೆದು ರೆಫ್ರಿಜರೇಟರ್ನಲ್ಲಿ ಇಡಬೇಡಿ ಹಾಗೆಯೇ ಇಡಿ. ಏಕೆಂದರೆ ಹೀಗೆ ಮಾಡುವುದರಿಂದ ಅವು ಬೇಗನೆ ಕೊಳೆಯುತ್ತವೆ.

ಹಸಿರು ಸಿಲಾಂಟ್ರೋ ಅಥವಾ ಲೆಟಿಸ್ ಎಲೆಗಳನ್ನು ಪ್ಲಾಸ್ಟಿಕ್ ಚೀಲ ಅಥವಾ ಗಾಳಿಯಾಡದ ಪೆಟ್ಟಿಗೆಯಲ್ಲಿ ಇರಿಸುವುದರಿಂದ ಸೊಪ್ಪುಗಳು 10 ರಿಂದ 15 ದಿನಗಳವರೆಗೆ ಉಳಿಯುತ್ತವೆ ಮತ್ತು ಬೇಗನೆ ಕೆಡುವುದಿಲ್ಲ. ನೀವು ಸಂಗ್ರಹಿಸಿಡಲು ಉಪಯೋಗಿಸುವ ಕಂಟೇನರ್ ತೇವವಾಗಿರಬಾರದು ಎಂಬುವುದು ನೆನಪಿರಲಿ. ಇಲ್ಲದಿದ್ದರೆ ಈ ಎಲೆಗಳು ಒಳಗಿನಿಂದ ಕೊಳೆಯುತ್ತವೆ.

ತರಕಾರಿಗಳನ್ನು ಫ್ರಿಜ್ನಲ್ಲಿ ಇಡುವ ಮೊದಲು ಅವುಗಳನ್ನು ಪೇಪರ್ನಲ್ಲಿ ಸುತ್ತಿ ಅಥವಾ ಫ್ರಿಜ್ನೊಳಗೆ ಪೇಪರ್ ಹರಡಿ, ಅದರ ಮೇಲೆ ಸೊಪ್ಪು ಮತ್ತು ತರಕಾರಿಗಳನ್ನು ಇಡಿ. ಇದರಿಂದ ಹೆಚ್ಚುಕಾಲ ಬಾಳಿಕೆ ಬರುತ್ತದೆ.

ದಿನನಿತ್ಯ ಅಥವಾ ವಾರದಲ್ಲಿ ಎರಡು ಅಥವಾ ಮೂರು ದಿನ ತರಕಾರಿಯನ್ನು ತರುವುದು ಉತ್ತಮವಾದರೂ, ಅನಿವಾರ್ಯದ ಸಂದರ್ಭದಲ್ಲಿ ಒಮ್ಮೆಲೇ ತರಕಾರಿಗಳನ್ನು ತರಬೇಕಾಗುತ್ತದೆ. ಆಗ ಈ ಸಲಹೆಗಳನ್ನು ಪಾಲಿಸುವುದರಿಂದ ಹಣ ಹಾಗೂ ತರಕಾರಿ ಎರಡು ಉಳಿತಾಯವಾಗುತ್ತದೆ.

Leave A Reply

Your email address will not be published.