KVS Recruitment 2022: ಕೇಂದ್ರೀಯ ವಿದ್ಯಾಲಯದಲ್ಲಿ ನೇಮಕಾತಿ | ಬರೋಬ್ಬರಿ 13,404 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ

KVS Recruitment 2022: ಕೇಂದ್ರೀಯ ವಿದ್ಯಾಲಯ ಸಂಘಟನೆ(Kendriya Vidyalaya Sangathan)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಭರ್ಜರಿ 13,404 ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಸಲ್ಲಿಸಬಹುದು. ಯಾರಿಗಾದರೂ ಸರ್ಕಾರಿ ಕೆಲಸ ಬೇಕು ಎಂದಾದರೆ ಅಂತಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ.

ಈ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ಇದೀಗ ದಿನಾಂಕ ವಿಸ್ತರಣೆ ಮಾಡಲಾಗಿದೆ. ಅಧಿಸೂಚಿಸಿದ ವೇಳೆ ಡಿಸೆಂಬರ್ 26 ರವರೆಗೆ ಅರ್ಜಿಗೆ ಅವಕಾಶ ನೀಡಿತ್ತು. ಇದೀಗ ಅವಧಿ ವಿಸ್ತರಣೆ ಮಾಡಿ ದಿನಾಂಕ 02-01-2023 ರ ರಾತ್ರಿ 11-59 ಗಂಟೆವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 05/12/2022
ಅರ್ಜಿ ಸಲ್ಲಿಸಲು ಕೊನೆ ದಿನ- 02/01/2023

ಸಂಸ್ಥೆ : ಕೇಂದ್ರೀಯ ವಿದ್ಯಾಲಯ ಸಂಘಟನೆ
ಹುದ್ದೆಗಳ ಹೆಸರು : ಪ್ರಾಂಶುಪಾಲ, ಅಸಿಸ್ಟೆಂಟ್ ಎಂಜಿನಿಯರ್
ಒಟ್ಟು ಹುದ್ದೆ: 13,404
ಉದ್ಯೋಗದ ಸ್ಥಳ :ಭಾರತದಲ್ಲಿ ಎಲ್ಲಿ ಬೇಕಾದರೂ

ಹುದ್ದೆಗಳ ವಿವರ ಈ ರೀತಿ ಇದೆ : ಪ್ರಾಥಮಿಕ ಶಿಕ್ಷಕರು (PRT)-6414
ಸಹಾಯಕ ಆಯುಕ್ತರು- 52
ಪ್ರಾಂಶುಪಾಲರು- 239
ಉಪ ಪ್ರಾಂಶುಪಾಲರು- 203
ಸ್ನಾತಕೋತ್ತರ ಶಿಕ್ಷಕರು (PGT)- 1409
ತರಬೇತಿ ಪಡೆದ ಪದವೀಧರ ಶಿಕ್ಷಕರು (ಟಿಜಿಟಿ)- 3176
ಗ್ರಂಥಪಾಲಕ- 355
PRT (ಸಂಗೀತ)- 303
ಹಣಕಾಸು ಅಧಿಕಾರಿ-6
ಸಹಾಯಕ ಇಂಜಿನಿಯರ್ (ಸಿವಿಲ್)-2
ಸಹಾಯಕ ವಿಭಾಗ ಅಧಿಕಾರಿ (ASO)- 156
ಹಿಂದಿ ಅನುವಾದಕ-11
ಹಿರಿಯ ಕಾರ್ಯದರ್ಶಿ ಸಹಾಯಕ (UDC)- 322
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (LDC)- 702
ಸ್ಟೆನೋಗ್ರಾಫರ್ ಗ್ರೇಡ್-II – 54

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.