ಮದುವೆಯ ಮಂಟಪದಲ್ಲಿ ವರ ವಧುವಿಗೆ ನೀಡಿದ ‘ಕಿಸ್’ | ಕಿಸ್ ನಿಂದಾಗಿ ಮದುವೆ ಕ್ಯಾನ್ಸಲ್ ಎಂದ ವಧು! ದಂಗಾದ ವರ!

‘ಮದುವೆ’ ಅನ್ನೋ ಮೂರು ಅಕ್ಷರದ ಪದ ಎರಡು ಸಂಬಂಧಗಳನ್ನು ಬೆಸೆಯುವ ಶುಭಕಾರ್ಯ. ಆದರೆ ಈಗ ಸಣ್ಣ ಪುಟ್ಟ ವಿಷಯಗಳಿಗೂ ಜಗಳವಾಡಿ ಮದುವೆಯನ್ನೇ ನಿಲ್ಲಿಸುತ್ತಾರೆ. ಇಂದಿನವರಿಗೆ, ಮುಂಚಿನವರಂತೆ ತಾಳ್ಮೆ, ಸಮಾಧಾನ ಇಲ್ಲವೇ ಇಲ್ಲಾ. ಕೆಲವೊಂದು ಗಂಭೀರ ಕಾರಣಗಳಿಗೆ ಮದುವೆಯನ್ನು ನಿಲ್ಲಿಸಿದರೆ ಕೆಲವೊಂದು ತೀರಾ ಹಾಸ್ಯಾಸ್ಪದ ಎನ್ನೋ ವಿಷಯಗಳಿಗೂ ಮದುವೆಯನ್ನು ನಿಲ್ಲಿಸಿದ ನಿದರ್ಶನಗಳಿವೆ. ವರ ಮುತ್ತು ಕೊಟ್ಟನೆಂದು ವಧು ಮದುವೆಯನ್ನೇ ನಿಲ್ಲಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನವೆಂಬರ್ 26ರಂದು ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಬದೌನ್‌ನ ಬಿಲ್ಲಿ ನಿವಾಸಿ ಯುವಕ, ಬಹೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಡುಗಿಯನ್ನು ವಿವಾಹವಾಗಿದ್ದರು. ನಂತರ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಮಂಗಳವಾರ ವರ ಹಾಗೂ ಕುಟುಂಬಸ್ಥರು ಮೆರವಣಿಗೆ ಮೂಲಕ ವಧುವಿನ ಗ್ರಾಮಕ್ಕೆ ಆಗಮಿಸಿ, ವಿವಾಹದ ಶಾಸ್ತ್ರೋಸ್ತ್ರಗಳನ್ನು ವಿಧಿವಿಧಾನಗಳಿಂದ ನೆರವೇರಿಸಲಾಯಿತು.

ಹೂವಿನ ಹಾರ ಬದಲಾವಣೆ ವೇಳೆ ಸಾರ್ವಜನಿಕವಾಗಿ ವರ ವಧುವಿಗೆ ಮುತ್ತು ಕೊಟ್ಟಿದ್ದರಿಂದ ವಧು ಮದುವೆಯನ್ನೇ ಮುರಿದಿದ್ದಾಳೆ. ಸಾರ್ವಜನಿಕವಾಗಿ ತನಗೆ ಮುತ್ತು ಕೊಟ್ಟಿದ್ದರಿಂದ ವಧು ಸಿಟ್ಟಾಗಿದ್ದೂ, ಇದೇ ವಿಚಾರವಾಗಿ ವಾಗ್ವಾದ ಸಹ ನಡೆದಿದೆ.

ಆಗ ಗ್ರಾಮದ ಗಣ್ಯರು, ಹಿರಿಯರು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಹುಡುಗಿ ಕಡಾ ಖಂಡಿತವಾಗಿ ನಿರಾಕರಿಸಿ, ಮದುವೆಯ ಇತರ ಆಚರಣೆಗಳನ್ನು ನಿಲ್ಲಿಸಿ ಗಲಾಟೆ ಮಾಡಿದ್ದಾಳೆ. ಇದಾದ ನಂತರ ಗ್ರಾಮದಲ್ಲಿ ಪಂಚಾಯಿತಿ ಏರ್ಪಡಿಸಲಾಗಿತ್ತು. ಆಗ ಕೂಡ ವಧು ವರನೊಂದಿಗೆ ಹೋಗುವುದಿಲ್ಲ ಎಂದು ಸಾರಾಸಗಟಾಗಿ ನಿರಾಕರಿಸಿದ್ದಾಳೆ.

ಅಲ್ಲಿಂದ ಈ ವಿಷಯ ಬಸ್ಟೋಯಿ ಪೊಲೀಸ್ ಠಾಣೆಗೆ ತಲುಪಿದೆ. ಇಲ್ಲಿ ಸಂಧಾನ ನಡೆಸುವ ಯತ್ನವನ್ನೂ ಮಾಡಲಾದರೂ, ಅಲ್ಲಿ ಕೂಡ ವಧು ಒಪ್ಪಿಕೊಂಡಿಲ್ಲ. ಇದರಿಂದ ಪೊಲೀಸರು ಮದುವೆಯ ಎಲ್ಲ ವಿಧಿವಿಧಾನಗಳನ್ನು ರದ್ದುಪಡಿಸಿದ್ದಾರೆ. ತನ್ನ ಆತುರದ ಮುತ್ತು ಮದುವೆಯನ್ನೇ ನಿಲ್ಲಿಸಿ ಬಿಟ್ಟಿದ್ದೂ, ಇದೀಗ ವರನು ಮಾವನ ಮನೆಯಿಂದ ಬರಿಗೈಯಲ್ಲಿ ವಾಪಸ್ ಬರುವಂತಾಗಿದೆ.

Leave A Reply

Your email address will not be published.