BMTC ಹೊಸ ಆ್ಯಪ್! ಇನ್ನು ಮುಂದೆ ಬಸ್ ಪ್ರಯಾಣ ಇನ್ನಷ್ಟು ಸುಲಭ‌, ಆರಾಮದಾಯಕ

ಹೊಸ ತಿಂಗಳ ಹೊಸ್ತಿಲಲ್ಲಿ ಬೆಂಗಳೂರು ಜನತೆಗೆ ಗುಡ್ ನ್ಯೂಸ್ ಒಂದು ದೊರೆತಿದೆ. ಹೌದು!!.BMTC ಹೊಸ ಆ್ಯಪ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದ್ದು, ಸದ್ಯದಲ್ಲೇ ಬೆಂಗಳೂರಿನಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಈ ಯೋಜನೆ ರೂಪಿಸಲಾಗಿದ್ದು, ಪ್ರಯಾಣಿಕರಿಗೆ ನೆರವಾಗುವುದು ಪಕ್ಕಾ ಎನ್ನಲಾಗುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಡಿಸೆಂಬರ್ ತಿಂಗಳಿನಲ್ಲಿ ಹೊಸ ಅಪ್ಲಿಕೇಶನ್ ‘Nimmabus’ ಅನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಹಾಗಾಗಿ, BMTC ಡಿಸೆಂಬರ್ 15 ಮತ್ತು 31 ರ ನಡುವಿನಲ್ಲೇ ಹೊಸ ಅಪ್ಲಿಕೇಶನ್ Android ಮತ್ತು iOS ಎರಡೂ ಆವೃತ್ತಿಗಳಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ.

ಇದರ ಜೊತೆಗೆ ಬಿಎಂಟಿಸಿ ಮುಂದಿನ ವರ್ಷದಿಂದ ಯುಪಿಐ ಆಧಾರಿತ ಟಿಕೆಟಿಂಗ್ ಅನ್ನು ಕೂಡ ಪರಿಚಯಿಸುವ ಯೋಜನೆ ರೂಪಿಸಿದೆ. 2016 ರಲ್ಲಿ ಇದು ಬಿಎಂಟಿಸಿ ರೀತಿಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದು, ಆದರೆ ನಾನಾ ತಾಂತ್ರಿಕ ದೋಷಗಳಿಂದಾಗಿ ಅದು ಸ್ಥಗಿತಗೊಂಡಿತ್ತು.

ಸದ್ಯ ಇದು, ಬಿಎಂಟಿಸಿ ಬಿಡುಗಡೆ ಮಾಡುತ್ತಿರುವ ಮೂರನೇ ಆ್ಯಪ್ ಆಗಿದ್ದು, ಬೆಂಗಳೂರಿನಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಈ ಯೋಜನೆ ರೂಪಿಸಲಾಗಿದೆ.ಈ ಯೋಜನೆ ಅನುಸಾರ ಮೊದಲ ಹಂತದಲ್ಲಿ ಪ್ರಯಾಣಿಕರು ಸುಮಾರು 4,000 ಬಸ್​ಗಳಲ್ಲಿ ರಿಯಲ್ ಟೈಮ್ ಆಧಾರದ ಮೇಲೆ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.

ಸದ್ಯ ಆ್ಯಪ್ ಬಿಡುಗಡೆ ಮಾಡಲು ಪೂರ್ವ ತಯಾರಿಯಾಗಿ ಪರೀಕ್ಷಾ ಹಂತದಲ್ಲಿದ್ದು, ಕೆಲವು ಪ್ರಯಾಣಿಕರ ಜೊತೆ ಪರೀಕ್ಷಾರ್ಥವಾಗಿ ಬಳಕೆ ಕೂಡ ಮಾಡಲಾಗುತ್ತದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

2019 ರಲ್ಲಿ ‘MyBMTC’ ಎಂಬ ಹೆಸರಿನ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು ಕೂಡ ಕೆಲವು ದೋಷಗಳಿಂದಾಗಿ ಇದು ಕೂಡ ಸ್ಥಗಿತಗೊಂಡಿದ್ದು, ಆದರೆ, ಈ ಹೊಸ ಅಪ್ಲಿಕೇಶನ್ ಮೂಲಕ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್​ಗಳನ್ನು ಸುಲಭಗೊಳಿಸಲು ಖಾಸಗಿ ಸಂಸ್ಥೆಯೊಂದಿಗೆ ಬಿಎಂಟಿಸಿ ಕೆಲಸ ಮಾಡಲಿದೆ ಎನ್ನಲಾಗುತ್ತಿದೆ.ಆದರೆ ಈ ಆ್ಯಪ್ ಮೂಲಕ ಪ್ರತಿದಿನದ ಟಿಕೆಟ್ಗಳನ್ನು ಖರೀದಿಸಲು ಮಾತ್ರ ತುಂಬಾ ಸಮಯ ಕಾಯ ಬೇಕಾಗಿದೆ ಎನ್ನಲಾಗುತ್ತಿದೆ.

ಇದಲ್ಲದೆ ಮುಂದಿನ ವರ್ಷದಿಂದ ಯುಪಿಐ ಆಧಾರಿತ ಟಿಕೆಟಿಂಗ್ ಅನ್ನು ಪರಿಚಯಿಸಲು ಬಿಎಂಟಿಸಿ ಯೋಜನೆ ರೂಪಿಸಿದ್ದು, ಬೆಂಗಳೂರಿನ ಪ್ರಯಾಣಿಕರಿಗೆ ಎಷ್ಟರ ಮಟ್ಟಿಗೆ ನೆರವಾಗಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.