ಸರಕಾರಿ ಆಸ್ಪತ್ರೆಯಲ್ಲೊಂದು ರೋಬೋ ಡಾಕ್ಟರ್ | ರೋಗಿ ಸ್ಥಿತಿ ಥಟ್ ಅಂತ ಹೇಳುತ್ತೆ!!!

ಸರ್ಕಾರಿ ಆಸ್ಪತ್ರೆಗಳೆಂದರೆ ಅಲ್ಲಿ ಸರಿಯಾಗಿ ಡಾಕ್ಟರ್ ಇರುವುದಿಲ್ಲ, ರೋಗಿಗಳನ್ನು ಗಮನಿಸುವುದಿಲ್ಲ, ಅಂತ ನೂರಾರು ಕಂಪ್ಲೇಂಟ್ ಮಾಡುವುದಲ್ಲದೆ ಸರ್ಕಾರಿ ಆಸ್ಪತ್ರೆ ಜನರಿಗೆ ಯೋಗ್ಯ ಅಲ್ಲ ಎಂಬ ಅಭಿಪ್ರಾಯ ಹೆಚ್ಚಿನವರಲ್ಲಿ ಇದೆ. ಆದರೆ ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆ ಇದೆಲ್ಲದಕ್ಕೂ ಮೀರಿದ ಒಂದು ಬದಲಾವಣೆ ಮಾಡಿಕೊಂಡಿದೆ.

ಹೌದು ಟೆಕ್ನಾಲಜಿ ಬೆಳೆದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಂತೂ ದಿನನಿತ್ಯ ಲೇಟೆಸ್ಟ್ ಟೆಕ್ನಾಲಜಿ ಪರಿಚಯ ಆಗ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳು ಮಾತ್ರ ಆದ್ಯಾವಾಗ ಈ ಎಲ್ಲಾ ಸೌಲಭ್ಯಗಳನ್ನ ತಂದು ಬಡವರ ಕಷ್ಟಕ್ಕೆ ಆಗುತ್ತವೆ ಅನ್ನೋ ಕೊರಗು ಸಾಮಾನ್ಯರಿಗೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ವೈದ್ಯಕೀಯ ವಲಯದಲ್ಲಿರುವ ಕಾಂಪಿಟೇಶನ್ ತಕ್ಕಂತೆ ಇದೀಗ ಆರೋಗ್ಯ ಇಲಾಖೆ ಕೂಡ ಹೆಜ್ಜೆ ಹಾಕಲು ಪ್ರಯತ್ನಿಸಿದೆ. ಇದರ ಭಾಗವಾಗಿ ಇದೇ ಮೊದಲ ಬಾರಿಗೆ ಬೆಂಗಳೂರು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರೋಬೋಟಿಕ್ ಟೆಕ್ನಾಲಜಿ ಪರಿಚಯ ಮಾಡಿದೆ.

ರಾಜೀವ್ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ನಾಗರಾಜ ಅವರ ಮಾಹಿತಿ ಪ್ರಕಾರ ಆಸ್ಪತ್ರೆಯ ಐಸಿಯು ನಲ್ಲಿ ಈ ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದ್ದು, ಒಂದೇ ರೂಮಿನಲ್ಲಿ ಕುಳಿತು ಹಿರಿಯ ವೈದ್ಯರು ರೋಗಿಗೆ ಸಂಬಂಧಿಸಿದ ಚಿಕಿತ್ಸೆ ನೀಡಬಹುದಾಗಿದೆ. ಜೊತೆಗೆ ಒಂದೇ ರೂಂನಲ್ಲಿ ಕುಳಿತು ಇಡೀ ಐಸಿಯುನಲ್ಲಿರುವ ರೋಗಿಗಳ ಸ್ಥಿತಿಗತಿಗಳನ್ನ ತಿಳಿಯಬಹುದಾಗಿದೆ. ಅಲ್ಲದೇ ಕೆಲವೊಮ್ಮೆ ಇತರರಿಂದ ಐಸಿಯುನಲ್ಲಿರುವ ರೋಗಿಗಳು ಇನ್ಪೆಕ್ಷನ್ ಗೆ ತುತ್ತಾಗುವ ಸಾಧ್ಯತೆಯನ್ನ ತಪ್ಪಿಸಬಹುದಾಗಿದ್ದು, ಇತರ ಎಕ್ಸ್ ಪರ್ಟ್ ವೈದ್ಯರಿಂದ ಕುಳಿತಲ್ಲೇ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಮಾಹಿತಿ ನಿಡಿದ್ದಾರೆ.

ಮುಖ್ಯವಾಗಿ ಇದರಿಂದಾಗಿ ಹಲವರು ಪ್ರಯೋಜನಗಳಿವೆ. ಇನ್ಫೆಕ್ಷನ್ ರೇಟ್ ಕಡಿಮೆಯಾಗಲಿದೆ, ವೈದ್ಯರಿಗೆ ಶಸ್ತ್ರಚಿಕಿತ್ಸೆ ವೇಳೆ ವೇಳೆ ರೋಬೋಟೆಕ್ ಟೆಕ್ನಾಲಜಿ ತುಂಬಾ ನೆರವಾಗಲಿದೆ. ಬಹುಬೇಗ ಸರ್ಜರಿ ಮಾಡಲು ರೋಬೊಟೆಕ್ ಟೆಕ್ನಾಲಜಿ, ಸಹಾಯಕಾರಿಯಾಗಲಿದೆ. ತುರ್ತು ಚಿಕಿತ್ಸೆ ವೇಳೆ ಹೆಚ್ಚಿನ ಅನುಕೂಲ. ರೋಗಿಯ ಸ್ಥಿತಿಗತಿ ಬಗ್ಗೆ ರೋಬೊ ಶೀಘ್ರದಲ್ಲಿ ಮಾಹಿತಿ ಕೊಡುತ್ತೆ. ಮುಖ್ಯವಾಗಿ ನೇರ ಸಂಪರ್ಕ ಇಲ್ಲದೆ ರೋಗಿಯ ಜೊತೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗಿದೆ.

ಡಾ.ಸಿ.ಎನ್ ನಾಗರಾಜ್ ಪ್ರಕಾರ ಮೊದಲ ಹಂತದಲ್ಲಿ ಒಟ್ಟು 28 ಬೆಡ್‍ಗಳಿಗೆ ರೋಬೋಟೆಕ್ ಡಾಕ್ಟರ್ ವ್ಯವಸ್ಥೆ ಮಾಡಲಾಗಿದ್ದು ಕೆಲವೇ ದಿನಗಳಲ್ಲಿ ಈ ಹೊಸ ಮಾದರಿಯ ಸೇವೆ ಉದ್ಘಾಟನೆಯಾದ ನಂತರ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

ಪ್ರಸ್ತುತ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಈ ಟೆಕ್ನಾಲಜಿ ಬಳಕೆ ಮಾಡುತ್ತಿರುವ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಸರಿಗೆ ಸಹ ಪಾತ್ರವಾಗಲಿದೆ.

Leave A Reply

Your email address will not be published.