ಶಿವಲಿಂಗದಲ್ಲಿ ಮೂಡಿದ ಮೂರನೇ ಕಣ್ಣು | ದೇವಾಲಯಕ್ಕೆ ಬಂದ ಭಕ್ತಸಾಗರ | ವಿಸ್ಮಯಕ್ಕೆ ಬೆರಗಾದ ಜನ!

ದೇವರು ಇದ್ದಾನೆಂಬ ನಂಬಿಕೆ ಅಚಲ ಶಕ್ತಿ ಎಲ್ಲರಲ್ಲೂ ಇದೆ. ಆದರೆ ಕೆಲವೊಮ್ಮೆ ದೇವರ ಪವಾಡ ಎನ್ನೋ ರೀತಿ ಪವಾಡಗಳು ನಡೆಯುತ್ತಲೇ ಇದೆ.

ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಎಸ್‌ಆರ್‌ಟಿಸಿಬಸ್ ನಿಲ್ದಾಣದಲ್ಲಿ ಬಳಿ ಇರುವ ಉಮಾಮಹೇಶ್ವರಿ ದೇವಸ್ಥಾನದ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದೆ. ಇದನ್ನು ನೋಡಲು ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿದ ಘಟನೆ ನಡೆದಿದೆ.

ಶಿವಲಿಂಗದಲ್ಲಿ ಕಣ್ಣು ತೆರೆದಿರುವ ಚಿತ್ರಗಳು ವೈರಲ್ ಆಗಿದೆ. ಹಾಗಾಗಿ ಜನರು ದೇವಸ್ಥಾನದ ಬಳಿ ತಂಡೋಪಾದಿಯಾಗಿ ಬರುತ್ತಿದ್ದಾರೆ. ಈ ದೇವಸ್ಥಾನ 50 ವರ್ಷ ಹಳೆಯದಾಗಿದ್ದು, ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಉಮಾಮಹೇಶ್ವರಿ ದೇವಸ್ಥಾನವನ್ನು 5 ವರ್ಷದ ಹಿಂದೆ ಜೀರ್ಣೋದ್ದಾರ ಮಾಡಲಾಗಿತ್ತು.

ಅರ್ಚಕರಾದ ರುದ್ರೇಶ್ ಅವರು ಶುಕ್ರವಾರ ದೇವಸ್ಥಾನಕ್ಕೆ ಬಂದಿರಲಿಲ್ಲ. ಅವರ ಸಹೋದರ ಚಂದನ್ ಪೂಜೆ ಮಾಡುತ್ತಿದ್ದರು. ಸಂಜೆ ಹೊತ್ತಿನಲ್ಲಿ ಪಟ್ಟಣದ ಹೊಸಪೇಟೆಯ ನಾಗೇಶ್ ಎಂಬ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ನಂತರ ಫೋಟೋವನ್ನು ಗಮನಿಸಿದಾಗ ಲಿಂಗದಲ್ಲಿರುವ ಕಣ್ಣನ್ನು ಕಂಡು ಅರ್ಚಕ ರುದ್ರೇಶ್‌ಗೆ ತಿಳಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಲಿಂಗದಲ್ಲಿ ಕಣ್ಣು ಮೂಡಿರುವುದು ಕಂಡುಬಂದಿದೆ.

ಈ ಬಗ್ಗೆ ವಸ್ಥಾನದ ಟ್ರಸ್ಟ್ ಅಧ್ಯಕ್ಷ ವಿಜಯಸಿಂಹ ಕೂಡ ಪರೀಕ್ಷೆ ಮಾಡಿಸಿದ್ದು, ಅರ್ಚಕರ ಕೈಯಲ್ಲಿ ಶಿವಲಿಂಗವನ್ನು ಒರೆಸಿದಾಗಲೂ ಬದಲಾವಣೆಯಾಗಿಲ್ಲ. ರಾತ್ರಿ ಆಗುತ್ತಿದ್ದಂತೆ ಕಣ್ಣು ಮುಚ್ಚಿಕೊಂಡ ರೀತಿಯಲ್ಲಿ ಕಾಣಿಸುತ್ತಿದ್ದು, ವಿಸ್ಮಯದ ದರ್ಶನಕ್ಕೆ ಜನರು ಸೇರುತ್ತಿದ್ದಾರೆ. ಈ ವಿಸ್ಮಯಕಾರಿ ಘಟನೆಯಿಂದ ದೇವಸ್ಥಾನದ ಟ್ರಸ್ಟ್ ನವರು ಕೂಡಾ ಅಚ್ಚರಿಗೊಂಡಿದ್ದಾರೆ. ಯಾರು ಬೇಕಾದರೂ ಪರೀಕ್ಷೆ ಮಾಡಿಕೊಳ್ಳಲಿ ಎಂದು ಟ್ರಸ್ಟ್‌ನವರು ತಿಳಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.