ಪಾನಿಪೂರಿ ತಿನ್ನೋ ಮುನ್ನ ಹುಷಾರ್‌ ! ತೆಲಂಗಾಣದಲ್ಲಿ ಪಾನಿಪೂರಿಯಿಂದ 2,700 ಜನರಿಗೆ ಟೈಫಾಯಿಡ್ ಅಟ್ಯಾಕ್‌ |

ಹೊಸ ಕನ್ನಡ :ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಅಂತ ಹಲವು ಮಂದಿಗೆ ಗೊತ್ತಿದ್ದರೂ, ಚುಮುಚುಮು ಚಳಿಗೆ ಮತ್ತೆ ಮತ್ತೆ ತಿನ್ನುವುದನ್ನು ಬಿಡುವುದಿಲ್ಲ. ಇದೀಗ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿ ತಿನ್ನೋ ಮುನ್ನ ಹುಷಾರಾಗಿರಬೇಕಾಗಿದೆ. ಯಾಕೆಂದ್ರೆ ತೆಲಂಗಾಣದಲ್ಲಿ ಪಾನಿಪೂರಿಯಿಂದ 2,700 ಜನರಿಗೆ ಟೈಫಾಯಿಡ್ ಅಟ್ಯಾಕ್‌ಎಂಬ ಮಾಹಿತಿ ಲಭ್ಯವಾಗಿದೆ
ಈ ನಡುವೆ ತೆಲಂಗಾಣದಲ್ಲಿ ಪಾನಿಪೂರಿಯಿಂದಾಗಿ ಸುಮಾರು 2,700 ಟೈಫಾಯಿಡ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ. ಟೈಫಾಯಿಡ್ ಗೆ ‘ಪಾನಿಪುರಿ ರೋಗ’ ಎಂದು ಹೆಸರಿಡಲಾಗಿದೆ. ಕಾಮಾಲೆ ಮತ್ತು ಕರುಳಿನಲ್ಲಿ ಉರಿಯೂತಕ್ಕೆ ಕಾರಣವಾಗುವ ಪಾನಿಪೂರಿಯನ್ನು ಹೆಚ್ಚು ಸೇವಿಸದಿರುವುದು ಉತ್ತಮ ಎಂದು ಆರೋಗ್ಯ ನಿರ್ದೇಶಕ ಶ್ರೀನಿವಾಸ್ ಸಲಹೆ ನೀಡಿದ್ದಾರೆ.

ಪಾನಿ ಪೂರಿಯನ್ನು ಅತಿಯಾಗಿ ತಿನ್ನುವುದು ಜೀರ್ಣಕ್ರಿಯೆಯಲ್ಲಿ ಅನೇಕ ಅಡೆತಡೆಗಳಿಗೆ ಕಾರಣವಾಗಬಹುದು. ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಕರುಳಿನಲ್ಲಿ ಉರಿಯೂತವೂ ಉಂಟಾಗಬಹುದು. ಅದನ್ನು ತಿನ್ನುವುದರಿಂದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ, ಆದ್ದರಿಂದಲೇ ಆರೋಗ್ಯ ತಜ್ಞರು ಚಳಿಗಾಲ ಮತ್ತು ಮಳೆಗಾಲದಲ್ಲಿ ಪಾನಿಪುರಿ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.

ಇವು ಟೈಫಾಯಿಡ್ ಮಾತ್ರವಲ್ಲದೆ, ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. . ಅತಿಯಾದ ಸೇವನೆಯಿಂದಾಗಿ ಅತಿಸಾರ ಉಂಟಾಗುವ ಅಪಾಯವು ತುಂಬಾ ಹೆಚ್ಚಾಗಿರುತ್ತದೆ. ಮಕ್ಕಳು ಹೆಚ್ಚು ತೆಗೆದುಕೊಂಡರೆ ಅದು ಖಂಡಿತವಾಗಿಯೂ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.

Leave A Reply

Your email address will not be published.