KCET 2022: ಸೀಟು ಹಂಚುವಿಕೆಯ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಯೋಗ ನ್ಯಾಚುರೋಪತಿ ಮುಂತಾದ ಕೋರ್ಸ್‌ಗಳಿಗೆ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2022ನೇ ಸಾಲಿನಲ್ಲಿ ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಸರ್ಕಾರದ ನಿರ್ದೇಶನದ ಅನುಸಾರ ಪಿಯುಸಿ ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಪಡೆದು ಅರ್ಹತೆಯನ್ನು ಪಡೆದು ಸಿಇಟಿ-2022ಕ್ಕೆ ಹಾಜರಾಗಿರುವ ಅಭ್ಯರ್ಥಿಗಳಿಗೆ ಬಾಕಿ ಉಳಿದಿರುವ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಾಕಿ ಉಳಿದಿರುವ ಇಂಜಿನಿಯರಿಂಗ್ / ಆರ್ಕಿಟೆಕ್ಚರ್ ಸೀಟುಗಳನ್ನು ಪೂರಕ ಪರೀಕ್ಷೆಯ ಅರ್ಹ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗಲಿದ್ದು, ಇದಕ್ಕಾಗಿ, ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅವಶ್ಯಕತೆ ಇಲ್ಲ.


2022ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರಿಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ನೇರವಾಗಿ ಇಲಾಖೆಯಿಂದ ಸ್ವೀಕರಿಸಲಾಗುತ್ತದೆ.
ಇದನ್ನು ಹೊರತು ಪಡಿಸಿ ಉಳಿದ ಇತರೆ ಬೋರ್ಡ್‌ಗಳಿಂದ ಸಿಬಿಎಸ್‌ಇ, ಸಿಐಎಸ್‌ಸಿಇ, 10+2 ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಯನ್ನು ಸಿಇಟಿ 2022ರ ಪ್ರವೇಶ ಪತ್ರದೊಂದಿಗೆ ಪ್ರಾಧಿಕಾರಕ್ಕೆ ದಿನಾಂಕ 26-11-2022 ರೊಳಗೆ ಸಲ್ಲಿಸಬೇಕಾಗುತ್ತದೆ.

ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಸಹ ಅಭ್ಯರ್ಥಿಗಳಿಗೆ ಆದ್ಯತೆಗಳನ್ನು ಬದಲಾಯಿಸಲು / ಮಾರ್ಪಡಿಸಲು / ಸೇರಿಸಲು ಸಲಹೆ ಮಾಡಲಾಗಿದೆ. ಯಾಕೆಂದರೆ ಸೀಟು ಹಂಚಿಕೆಯ ಕಾರ್ಯದಲ್ಲಿ ಉದ್ಭವಿಸುವ ಸೀಟುಗಳನ್ನು ಸಹ ಹಂಚಿಕೆ ಮಾಡುವುದರಿಂದ ಅಭ್ಯರ್ಥಿಗಳು ಆಯ್ಕೆಗಳನ್ನು ನಮೂದಿಸಿದ್ದಲ್ಲಿ ಅಂತಹ ಸೀಟುಗಳನ್ನು ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಮೊದಲನೇ ಸುತ್ತಿನಲ್ಲಿ ಅಥವಾ ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟು 28-11-2022ರಂದುರದ್ದುಪಡಿಸಿಕೊಳ್ಳ ಬಹುದಾಗಿದೆ.ಈ ಅಭ್ಯರ್ಥಿಗಳಿಗೆ ಐದು ಸಾವಿರ ರೂ.ಗಳನ್ನು ಕಡಿತ ಮಾಡಿಕೊಂಡು ಉಳಿದ ಮೊತ್ತವನ್ನು ಹಿಂದುರಿಗಿಸಲಾಗುತ್ತದೆ .


ಸಿಇಟಿ 2022 ಎರಡನೇ ಮುಂದುವರಿದ ಸುತ್ತಿನ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು,
ಸೀಟ್‌ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ಕುರಿತಾದ ಅಧಿಕೃತ ಮಾಹಿತಿಯನ್ನು 26-11-2022 ರಂದು ಪ್ರಕಟಣೆ ಮಾಡಲಾಗಿದೆ.26-11-2022 ರಿಂದ 28-11-2022ರ ವರೆಗೆ ಅಭ್ಯರ್ಥಿಗಳ ಇಚ್ಚೆಯ ಅನುಸಾರ, ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಾಯಿಸಬಹುದು ಅಥವಾ ಸೇರಿಸಬಹುದು ಇಲ್ಲವೇ ಅಳಿಸಬಹುದಾಗಿದೆ. ಇದಲ್ಲದೇ, 30-11-2022 ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕವಾಗಿದೆ .

ಇನ್ನೂ ಎರಡನೇ ಮುಂದುವರೆದ ಸೀಟು ಹಂಚಿಕೆಯ ಕುರಿತ ಫಲಿತಾಂಶ ಪ್ರಕಟಣೆಯನ್ನು 29-11-2022 ರಂದು ಮಾಡಲಾಗಿದೆ. ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವ ಜೊತೆಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇದರ ಜೊತೆಗೆ ಹಿಂದಿನ ಸುತ್ತಿನಲ್ಲಿ ಶುಲ್ಕವನ್ನು ಪಾವತಿಸದೆ ಇದ್ದಲ್ಲಿ ಈ ಸುತ್ತಿನಲ್ಲಿ 29-11-2022 ರಿಂದ 30-11-2022ರ ವರೆಗೆ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಲಾಗುತ್ತದೆ.

Leave A Reply

Your email address will not be published.