ಶಬರಿಮಲೆಯ ಅಯ್ಯಪ್ಪ ದರ್ಶನ ಸಮಯದಲ್ಲಿ ಬದಲಾವಣೆ!!!

ಈಗಾಗಲೇ ಪ್ರಸಿದ್ಧಿ ಪಡೆದಿರುವ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಂಡಲ ಪೂಜೆ ಆರಂಭ ಆಗಿದೆ ಮತ್ತು ಕೆಲವು ದಿನಗಳ ಹಿಂದಷ್ಟೇ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎರಡು ತಿಂಗಳ ಮಟ್ಟಿಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿದ್ದು ಶಬರಿಮಲೆ ಯಾತ್ರೆಗೆ ಚಾಲನೆ ಸಹ ನೀಡಲಾಗಿದೆ.

ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಾರ ಪ್ರಸ್ತುತ ಶಬರಿಮಲೆ ಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆಯೇ ಅಲ್ಲಿ ಜನಸಾಗರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ದರ್ಶನದ ವೇಳಾಪಟ್ಟಿಯನ್ನು ಬದಲಾಯಿಸಲು ನಿರ್ಧರಿಸಿದೆ.

ಸಮಗ್ರ ವೇಳಾಪಟ್ಟಿಯ ಪ್ರಕಾರ, ಪ್ರಸಕ್ತ ವರ್ಷದ ಮೊದಲ ಹಂತ ಡಿಸೆಂಬರ್ 27ಕ್ಕೆ ಅಂತ್ಯಗೊಳ್ಳುತ್ತದೆ. ಮತ್ತು ಡಿಸೆಂಬರ್ 30ಕ್ಕೆ ಎರಡನೇ ಹಂತ ಪ್ರಾರಂಭವಾಗುತ್ತದೆ.

ಅದಲ್ಲದೆ ಧಾರ್ಮಿಕ ಆಚರಣೆಗಳು ಜನವರಿ 14ಕ್ಕೆ ಮುಗಿಯುತ್ತವೆ. ಅಂದು ‘ಮಕರ ವಿಳಕ್ಕು’ (ಆಕಾಶದಲ್ಲಿ ಬೆಳಕು) ಮಕರ ಜ್ಯೋತಿ ಯು ಸೂರ್ಯಾಸ್ತದ ನಂತರ ಮೂರು ಬಾರಿ ದಿಗಂತದಲ್ಲಿ ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಕರ ಬೆಳಕಿನ ಜತೆ ಬೆಟ್ಟದ ತುದಿಯಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ನಿನಾದ ಪ್ರತಿಧ್ವನಿಸುತ್ತದೆ.

ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು ದರ್ಶನ ಸಮಯದಲ್ಲಿ ಬದಲಾವಣೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಮಧ್ಯಾಹ್ನ 3 ರಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 11ರವರೆಗೂ ದರ್ಶನ ಪಡೆಯಬಹುದಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ನೀಡಿದೆ.

Leave A Reply

Your email address will not be published.