Transfer RC Online: ಇನ್ಮುಂದೆ ವಾಹನ ನೋಂದಣಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಈ ರೀತಿ ವರ್ಗಾವಣೆ ಮಾಡಿ

ಇಂದು ಜನರ ಅಗತ್ಯಕ್ಕೆ ತಕ್ಕಂತೆ ಯಾವುದಾದರೂ ಒಂದು ವಾಹನವನ್ನು ಸಂಚಾರಕ್ಕಾಗಿ ಇಟ್ಟುಕೊಳ್ಳುವುದು ವಾಡಿಕೆ. ಹಾಗೆಯೇ ವಾಹನ ನೋಂದಣಿ ಪ್ರಮಾಣಪತ್ರವನ್ನು ವರ್ಗಾಯಿಸಲು ಹಿಂದಿನಂತೆ ದೀರ್ಘ ಅವಧಿಯವರೆಗೆ ಓಡಾಡಬೇಕಾಗಿಲ್ಲ. ಸುಲಭವಾಗಿ ಆನ್ಲೈನ್ ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರವನ್ನು(Transfer RC Online) ಆನ್‌ಲೈನ್‌ನಲ್ಲಿ ಈ ರೀತಿ ವರ್ಗಾಯಿಸಬಹುದು.


Transfer RC Online: ಈ ಹಿಂದೆ ವಾಹನವನ್ನು ಮಾರಾಟ ಮಾಡಿದ ನಂತರ ನೋಂದಣಿ ಪ್ರಮಾಣಪತ್ರವನ್ನು (RC) ವರ್ಗಾಯಿಸಲು ದೀರ್ಘವಾದ ಪ್ರಕ್ರಿಯೆಯನ್ನು ಒಳಗೊಂಡಿತ್ತು. ಆದರೆ ಇದೀಗ, ಆನ್‌ಲೈನ್ ವರ್ಗಾವಣೆಯನ್ನು ಸರಳವಾಗಿ ಮಾಡಬಹುದಾಗಿದ್ದು, ವಾಹನವನ್ನು ಖರೀದಿಸುವಾಗ, ಅದನ್ನು ನೋಂದಾಯಿಸಬೇಕಾಗುತ್ತದೆ.


ಕೆಲವು ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಅಗತ್ಯ ಹೆಚ್ಚಾಗಿ ಬರುವುದಿಲ್ಲ ಆದರೆ ಬಹುತೇಕ ಎಲ್ಲ ವಾಹನಗಳಿಗೂ ನೋಂದಣಿ ಮಾಡುವುದು ಮಾತ್ರ ಕಡ್ಡಾಯ. ನೋಂದಣಿ ಪೂರ್ಣಗೊಂಡ ನಂತರ RTO ನಿಂದ ನೋಂದಣಿ ಪ್ರಮಾಣಪತ್ರ (RC) ಪಡೆಯಬಹುದಾಗಿದ್ದು, ಯಾವುದೇ ವಾಹನವೆ ಆದರೂ ಕೂಡ ನೋಂದಣಿ ಪ್ರಮಾಣಪತ್ರ ಬಹಳ ಮುಖ್ಯವಾಗಿದೆ. ವಾಹನವನ್ನು ಮಾರಾಟ ಮಾಡುವಾಗ ಆರ್‌ಸಿಯನ್ನು ಸಹ ವರ್ಗಾಯಿಸಬೇಕಾಗುತ್ತದೆ.


ಹಾಗಾದ್ರೆ , ವಾಹನದ ಆರ್‌ಸಿಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಹಲವರಲ್ಲಿ ಮೂಡಿರುತ್ತದೆ. ಈ ಬಗ್ಗೆ ವಾಹನ ಚಾಲಕರಲ್ಲಿ ಸಂದೇಹಗಳಿರಬಹುದು. ಅದಕ್ಕೆ ಉತ್ತರ ನಾವು ಕೊಡ್ತೀವಿ ನೋಡಿ!!


ವಾಹನವನ್ನು ಮಾರಾಟ ಮಾಡುವಾಗ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲಿಯೂ ಆರ್‌ಸಿ ವರ್ಗಾವಣೆ ಮಾಡಬೇಕಾಗುತ್ತದೆ. ವಾಹನವನ್ನು ಒಬ್ಬ ಕುಟುಂಬದ ಸದಸ್ಯರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ವರ್ಗಾಯಿಸಿದಾಗ ಆರ್‌ಸಿ ವರ್ಗಾವಣೆ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅವರ ಹೆಸರಿನಲ್ಲಿರುವ ವಾಹನವನ್ನು ಅದೇ ಕುಟುಂಬದ ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ವರ್ಗಾವಣೆ ಮಾಡಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಆರ್‌ಸಿಯನ್ನು ಸಹ ವರ್ಗಾಯಿಸಬೇಕು.

ಸರಳ ವಿಧಾನದ ಮೂಲಕ RC ಅನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದಾಗಿದ್ದು, ಆನ್‌ಲೈನ್ ಆರ್‌ಸಿ ವರ್ಗಾವಣೆಗೆ ಕೆಲವು ದಾಖಲೆಗಳು ಬಹು ಮುಖ್ಯವಾಗಿವೆ.
ಫಾರ್ಮ್ 29, ಫಾರ್ಮ್ 30, ಫಾರ್ಮ್ I, ವಾಹನಗಳ ಮಾರಾಟಕ್ಕೆ ನಮೂನೆ II, ವಾಹನದ ಮಾಲೀಕರು ಸತ್ತರೆ ನಮೂನೆ 31, ಹರಾಜಿನಲ್ಲಿ ವಾಹನ ಮಾರಾಟಕ್ಕೆ ನಮೂನೆ 32, ಮೂಲ RC, ವಿಮೆ, ನಿಗಾ ಸಂಸ್ಥೆ, ಖಾತ್ರಿ ಸಂಖ್ಯೆ ವಾಹನ ಖರೀದಿದಾರರ ದಿನಾಂಕ ಜನನದ ಪುರಾವೆ, ವಿಳಾಸ ಪುರಾವೆ, ಖರೀದಿದಾರನ ಅಂಡರ್ಟೇಕಿಂಗ್, ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ, ಅಗತ್ಯವಾಗಿದ್ದು,ಯಾವುದೇ ಆಕ್ಷೇಪಣೆ ಪ್ರಮಾಣಪತ್ರದ ಅಗತ್ಯ ಬರುವುದಿಲ್ಲ .

ವಾಹನ್ ಪರಿವಾಹನ್ ಪೋರ್ಟಲ್ ಆನ್‌ಲೈನ್‌ನಲ್ಲಿ ಆರ್‌ಸಿ ವರ್ಗಾವಣೆಗಾಗಿ ಮೊದಲು https://vahan.parivahan.gov.in/ ವೆಬ್ ಸೈಟ್ ಅನ್ನು ತೆರೆಯಬೇಕು. ಈ ಬಳಿಕ, ವಾಹನ ಸಂಬಂಧಿತ ಸೇವೆಗಳನ್ನು ತೆರೆದು, ಅದರ ನಂತರ ರಾಜ್ಯದ ಹೆಸರನ್ನು ಆಯ್ಕೆಮಾಡಬೇಕು. ಈ ಪ್ರಕ್ರಿಯೆಯ ಬಳಿಕ ನೀವು ನಿಮ್ಮ ವಿವರಗಳೊಂದಿಗೆ ಲಾಗಿನ್ ಮಾಡಬೇಕಾಗುತ್ತದೆ. ಅಥವಾ ಮೊದಲು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ನಿಮ್ಮ ವಾಹನ ಸಂಖ್ಯೆಯನ್ನು ನಮೂದಿಸಬೇಕು ನಿಮ್ಮ ರಾಜ್ಯದ RTO ಆಯ್ಕೆಮಾಡಿಕೊಂಡು ಮಾಲೀಕತ್ವದ ವರ್ಗಾವಣೆಯ ಮೇಲೆ ಕ್ಲಿಕ್ ಮಾಡಬೇಕು.
ನಿಮ್ಮ ವಾಹನ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ನಮೂದಿಸಿದಾಗ ವಾಹನದ ಬಗ್ಗೆ ಮಾಹಿತಿ ದೊರೆಯುತ್ತದೆ. ವರ್ಗಾವಣೆ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ಶುಲ್ಕವನ್ನು ಪಾವತಿಸಬೇಕು.

ಈ ಬಳಿಕ ದೃಢೀಕರಣದ ಮೇಲೆ ಕ್ಲಿಕ್ ಮಾಡಬೇಕು. ಕೊನೆಗೆ ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ ಎಲ್ಲಾ ದಾಖಲೆಗಳಿಗೆ ಸಹಿ ಮಾಡಿ ಆರ್‌ಟಿಒಗೆ ಸಲ್ಲಿಸಬೇಕಾಗುತ್ತದೆ. ಮೇಲೆ ಹೇಳಿದ ಸರಳ ವಿಧಾನ ಅನುಸರಿಸಿ, ವಾಹನ ನೋಂದಣಿ ಪ್ರಮಾಣ ಪತ್ರ ವರ್ಗಾವಣೆಯನ್ನು ಆನ್ಲೈನ್ ನಲ್ಲಿ ಮಾಡಬಹುದಾಗಿದೆ.

Leave A Reply

Your email address will not be published.