Karnataka Petrol-Diesel Price Today: ಮಂಗಳೂರು ಹಾಗೂ ಹಲವು ಜಿಲ್ಲೆಗಳಲ್ಲಿ ತೈಲ ದರ ಇಳಿಕೆ | ದರ ಪಟ್ಟಿ ಹೀಗಿದೆ ನೋಡಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಲೇ ಇದೆ . ಅದಲ್ಲದೆ ವಾಹನಗಳ ಬಳಕೆ ಮತ್ತು ಇಂಧನಗಳ ಬಳಕೆ ಸಹ ಹೆಚ್ಚಾಗುತ್ತಲೇ ಇದೆ. ಇಂಧನ ಪೂರೈಕೆಯಲ್ಲಿ ಇಳಿಕೆಯಾಗುತ್ತಿರುವುದು ಸಹ ಕಾಣಬಹುದಾಗಿದೆ. ಅದಲ್ಲದೆ ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸವೇ ನಿತ್ಯವೂ ಇಂಧನ ಬೆಲೆಗಳಲ್ಲುಂಟಾಗುವ ಏರಿಳಿತಗಳಿಗೆ ಕಾರಣವಾಗಿದೆ. ಅಲ್ಲದೆ, ಸದ್ಯ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿಯೂ ಇಂಧನ ಬೆಲೆಯಲ್ಲಿ ಪ್ರಭಾವ ಉಂಟಾಗುತ್ತಿದೆ.

ಪ್ರಸ್ತುತ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ.

ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಕಾಣಬಹುದು.

ರಾಜ್ಯದ ಎರಡು ನಗರಗಳಲ್ಲಿ ಒಂದು ರೂ. ಗಿಂತ ಹೆಚ್ಚು ವ್ಯತ್ಯಾಸ ಇರುವುದನ್ನು ಗಮನಿಸಬಹುದಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಉತ್ತರ ಕನ್ನಡದಲ್ಲಿ (Uttara Kannada) ಪೆಟ್ರೋಲ್ ಬೆಲೆ 1 ರೂ. 42 ಪೈಸೆಗಳಷ್ಟು ಇಳಿಕೆಯಾಗಿದ್ದರೆ ಶಿವಮೊಗ್ಗದಲ್ಲಿ (Shivamogga) 1 ರೂ. 2 ಪೈಸೆಗಳಷ್ಟು ಏರಿಕೆಯಾಗಿದೆ.

ಅದಲ್ಲದೆ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.86, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.46, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

 • ಮೈಸೂರು – ರೂ. 101.68 (18 ಪೈಸೆ ಏರಿಕೆ)
 • ರಾಯಚೂರು – ರೂ. 102.71 (87 ಪೈಸೆ ಏರಿಕೆ)
 • ರಾಮನಗರ – ರೂ. 102.50 (11 ಪೈಸೆ ಏರಿಕೆ)
 • ಶಿವಮೊಗ್ಗ – ರೂ. 103.78 (1 ರೂ. 2 ಪೈಸೆ ಏರಿಕೆ)
 • ತುಮಕೂರು – ರೂ. 102.45 (36 ಪೈಸೆ ಇಳಿಕೆ)
 • ಉಡುಪಿ – ರೂ. 101.70 (32 ಪೈಸೆ ಇಳಿಕೆ)
 • ಉತ್ತರ ಕನ್ನಡ – ರೂ. 102.37 (1 ರೂ. 42 ಪೈಸೆ ಇಳಿಕೆ)
 • ಯಾದಗಿರಿ – ರೂ. 102.43 (00)
 • ಬಾಗಲಕೋಟೆ – ರೂ. 102.62 (14 ಪೈಸೆ ಏರಿಕೆ)
 • ಬೆಂಗಳೂರು – ರೂ. 101.94 (00)
 • ಬೆಂಗಳೂರು ಗ್ರಾಮಾಂತರ – ರೂ. 101.58 (00)
 • ಬೆಳಗಾವಿ – ರೂ. 102.91 (57 ಪೈಸೆ ಏರಿಕೆ)
 • ಬಳ್ಳಾರಿ – ರೂ. 103.20 (41 ಪೈಸೆ ಇಳಿಕೆ)
 • ಬೀದರ್ – ರೂ. 102.52 (24 ಪೈಸೆ ಏರಿಕೆ)
 • ವಿಜಯಪುರ – ರೂ. 102.02 (22 ಪೈಸೆ ಇಳಿಕೆ)
 • ಚಾಮರಾಜನಗರ – ರೂ. 102.07 (3 ಪೈಸೆ ಇಳಿಕೆ)
 • ಚಿಕ್ಕಬಳ್ಳಾಪುರ – ರೂ. 101.94 (00)
 • ಚಿಕ್ಕಮಗಳೂರು – ರೂ. 103.65 (64 ಪೈಸೆ ಇಳಿಕೆ)
 • ಚಿತ್ರದುರ್ಗ – ರೂ. 103.47 (36 ಪೈಸೆ ಏರಿಕೆ)
 • ದಕ್ಷಿಣ ಕನ್ನಡ – ರೂ. 101.26 (22 ಪೈಸೆ ಇಳಿಕೆ)
 • ದಾವಣಗೆರೆ – ರೂ. 103.57 (22 ಪೈಸೆ ಏರಿಕೆ)
 • ಧಾರವಾಡ – ರೂ. 101.71 (00)
 • ಗದಗ – ರೂ. 102.79 (41 ಪೈಸೆ ಏರಿಕೆ)
 • ಕಲಬುರಗಿ – ರೂ. 102 (44 ಪೈಸೆ ಇಳಿಕೆ)
 • ಹಾಸನ – ರೂ. 101.88 (00)
 • ಹಾವೇರಿ – ರೂ. 102.58 (17 ಪೈಸೆ ಏರಿಕೆ)
 • ಕೊಡಗು – ರೂ. 103.28 (00)
 • ಕೋಲಾರ – ರೂ. 102.16 (35 ಪೈಸೆ ಏರಿಕೆ)
 • ಕೊಪ್ಪಳ – ರೂ. 102.86 (00)
 • ಮಂಡ್ಯ – ರೂ. 101.94 (00)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

 • ಮೈಸೂರು – ರೂ. 87.66
 • ರಾಯಚೂರು – ರೂ. 88.63
 • ರಾಮನಗರ – ರೂ. 88.40
 • ಶಿವಮೊಗ್ಗ – 89.45
 • ತುಮಕೂರು – ರೂ. 88.36
 • ಉಡುಪಿ – ರೂ. 87.64
 • ಉತ್ತರ ಕನ್ನಡ – ರೂ. 88.25
  •ಯಾದಗಿರಿ – ರೂ. 88.36
 • ಬಾಗಲಕೋಟೆ – ರೂ. 88.53
 • ಬೆಂಗಳೂರು – ರೂ. 87.89
 • ಬೆಂಗಳೂರು ಗ್ರಾಮಾಂತರ – ರೂ. 87.57
 • ಬೆಳಗಾವಿ – ರೂ. 88.79
 • ಬಳ್ಳಾರಿ – ರೂ. 89.05
 • ಬೀದರ್ – ರೂ. 88.44
 • ವಿಜಯಪುರ – ರೂ. 87.99
 • ಚಾಮರಾಜನಗರ – ರೂ. 88.01
 • ಚಿಕ್ಕಬಳ್ಳಾಪುರ – ರೂ. 87.89
 • ಚಿಕ್ಕಮಗಳೂರು – ರೂ. 89.32
 • ಚಿತ್ರದುರ್ಗ – ರೂ. 89.10
 • ದಕ್ಷಿಣ ಕನ್ನಡ – ರೂ. 87.25
 • ದಾವಣಗೆರೆ – ರೂ. 89.20
 • ಧಾರವಾಡ – ರೂ. 87.71
 • ಗದಗ – ರೂ. 88.68
 • ಕಲಬುರಗಿ – ರೂ. 87.97
 • ಹಾಸನ – ರೂ. 87.67
 • ಹಾವೇರಿ – ರೂ. 88.49
 • ಕೊಡಗು – ರೂ. 88.94
 • ಕೋಲಾರ – ರೂ. 88.09
 • ಕೊಪ್ಪಳ – ರೂ. 88.75
 • ಮಂಡ್ಯ – ರೂ. 87.89

ಈ ರೀತಿಯಾಗಿ ಹಲವು ಕಾರಣಾಂತರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇತ್ತೀಚಿಗೆ ಏರಿಳಿತಗಳು ಕಂಡು ಬರುತ್ತಲೇ ಇದೆ .

Leave A Reply