Smartwatch: ಎಷ್ಟೇ ವರ್ಷವಾದರೂ ನಿಮ್ಮಲ್ಲಿರುವ ಸ್ಮಾರ್ಟ್​ವಾಚ್​​ ಹಾಳಾಗಬಾರೆಂದಾರೆ ಈ ಟ್ರಿಕ್ಸ್​ ಫಾಲೋ ಮಾಡಿ

ವಿಶ್ವದಲ್ಲಿ ತಂತ್ರಜ್ಞಾನವು ಬಹಳಷ್ಟು ಮುಂದುವರೆದಿದೆ. ಹೇಗೆಂದರೆ ಮೊದಲು ಸ್ಮಾರ್ಟ್ ಫೋನ್ ನ ಬಳಕೆ ಅತಿಯಾಗಿ ಮಾಡುತ್ತಿದ್ದರು. ಆದರೆ ಈಗ ಕೆಲವೊಂದು ವಾಚ್​ಗಳು ಕೂಡ ಸ್ಮಾರ್ಟ್​ಫೋನ್​​ನಂತೆಯೇ ಫೀಚರ್ಸ್ ಅನ್ನು ಒಳಗೊಂಡಿರುವುರಿಂದ ಈಗ ಬಹಳ ಬೇಡಿಕೆಯಲ್ಲಿರುವ ಸಾಧನವಾಗಿದೆ. ಹಾಗೂ ಸ್ಮಾರ್ಟ್​ವಾಚ್​​ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಗಿದೆ.

ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಪೈಪೋಟಿಗಳು ಹೆಚ್ಚಾಗುತ್ತಿದ್ದೂ, ಸ್ಮಾರ್ಟ್‌ವಾಚ್‌ಗಳು ದಿನಕ್ಕೊಂದರಂತೆ ಭಿನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಸ್ಮಾರ್ಟ್‌ವಾಚ್‌ಗಳಿಂದ ನಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇಷ್ಟೆಲ್ಲಾ ಸೇವೆ ಮಾಡುವ ಸ್ಮಾರ್ಟ್‌ವಾಚ್‌ಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು. ಹಾಗಾದರೆ ನಿಮ್ಮ ಸ್ಮಾರ್ಟ್​ವಾಚ್​​ಗಳು ಹೆಚ್ಚು ಬಾಳಿಕೆ ಬರಬೇಕಾದರೆ ಈ ಟಿಪ್ಸ್ ಅನ್ನು ಫಾಲೋ ಮಾಡಿ.

ಗಟ್ಟಿಯಾದ ವಸ್ತುಗಳಿಂದ ದೂರ ಇರಿಸಿ:- ಸ್ಮಾರ್ಟ್​ವಾಚ್​ಗಳ ಡಿಸ್​ಪ್ಲೇಗಳು ಮೊಬೈಲ್​ನಂತೆ ಗಟ್ಟಿಯಾಗಿರುವುದಿಲ್ಲ. ಹಾಗಾಗಿ ಸ್ಮಾರ್ಟ್​ವಾಚ್​​ಗಳ ಸ್ಕ್ರೀನ್​ ಮೇಲೆ ಬೇಗನೆ ಗೀಟುಗಳು ಬೀಳುತ್ತದೆ. ನೆಲಕ್ಕೆ ಬೀಳದಂತೆ ನೋಡಿಕೊಳ್ಳಬೇಕು. ಇನ್ನು ಎಲ್ಲಾದರು ದೊಡ್ಡ ಗಾತ್ರದ ವಸ್ತುಗಳ ಅಡಿಯಲ್ಲಿ ಅಥವಾ ಮೇಲೆ ಇಡುವುದನ್ನು ನಿಲ್ಲಿಸಿ. ಕೆಲವೊಮ್ಮೆ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದ್ದರಿಂದ ಸ್ಮಾರ್ಟ್​ವಾಚ್​ಗಳನ್ನು ನೀವು ಧರಿಸದೇ ಇರುವಾಗ ಎಲ್ಲಾದರು ಸೇಫ್ ಸ್ಥಳದಲ್ಲಿ ಇಡಿ.

ಟೆಂಪರ್ಡ್ ಗ್ಲಾಸ್ ಹಾಕಿಸಿ:- ಸ್ಮಾರ್ಟ್​ವಾಚ್​ಗಳು ಮೊಬೈಲ್​ಗಳಂತೆಯೇ ಕಾರ್ಯನಿರ್ವಹಿಸಿದರೂ, ಸ್ಮಾರ್ಟ್​​ಫೋನ್​ಗಳಷ್ಟು ಗಟ್ಟಿಯ ಡಿಸ್​​ಪ್ಲೇಯನ್ನು ಹೊಂದಿಲ್ಲ. ಮೊಬೈಲ್​​ಗಳ ಸ್ಕ್ರೀನ್​ ಗ್ಲಾಸ್​​ನಂತೆಯೇ ಸ್ಮಾರ್ಟ್​​ವಾಚ್​​ಗಳ ಗ್ಲಾಸ್​​ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ಹಾಕುವುದರಿಂದ ಸ್ಮಾರ್ಟ್​​ವಾಚ್​ ಮೇಲೆ ಆಗುವಂತಹ ಹಾನಿಗಳಿಂದ ತಪ್ಪಿಸಬಹುದಾಗಿದೆ.

ಬಳೆಗಳ ಜೊತೆ ಧರಿಸಬೇಡಿ:- ಸ್ಮಾರ್ಟ್​​ವಾಚ್​​ಗಳನ್ನು ಯಾವುದೇ ಕಾರಣಕ್ಕೂ ಬಳೆಗಳ ಮೇಲೆ ಧರಿಸಬೇಡಿ. ಪುರುಷರಾದರೆ ಕಡಗ ಧರಿಸುವಾಗ ಸ್ಮಾರ್ಟ್​ವಾಚ್​ ಅನ್ನು ಹಾಕಬೇಡಿ. ಈ ರೀತಿ ಹಾಕುವುದರಿಂದ ನಿಮ್ಮ ಸ್ಮಾರ್ಟ್​ವಾಚ್ ಮೇಲೆ ಗೀಟುಗಳು ಬೀಳುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ನೀವು ಇಕ್ಕಟ್ಟಿನ ಸಂದರ್ಭಗಳಲ್ಲಿ ಹೋಗುತ್ತಿರುವಾಗ ನಿಮ್ಮ ವಾಚ್​ನ ಬೆಲ್ಟ್​ ತುಂಡಾಗುವ ಸಾಧ್ಯತೆಗಳಿರುತ್ತವೆ.

ಸ್ವಚ್ಛವಾಗಿಟ್ಟುಕೊಳ್ಳಿ:- ವಾಚ್‌ನಲ್ಲಿ ಕೊಳಕು, ಧೂಳು ಮತ್ತು ಇತರ ಕಣಗಳು ನಿಮ್ಮ ಡಿಸ್‌ಪ್ಲೇ ಸುತ್ತಲೂ ಇರುವ ಸಣ್ಣ ಜಾಗಗಳಲ್ಲಿ ಸಿಲುಕಿರುತ್ತವೆ. ಹಾಗೆಯೇ ಬೆಲ್ಟ್‌ ಸಹ ಬೆವರು ಹಾಗೂ ಇನ್ನಿತರೆ ಕಾರಣಕ್ಕೆ ಕೊಳೆಯಾಗುತ್ತದೆ. ಹೀಗಾಗಿ ನೀವು ಆಗಾಗ್ಗೆ ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಿ. ಇಲ್ಲದಿದ್ದರೆ ಕೆಲವು ಸೋಂಕುಗಳು ನಿಮ್ಮನ್ನು ಆವರಿಸುತ್ತವೆ ಹಾಗೂ ವಾಚ್ ಗಳು ಹಾಳಾಗುತ್ತದೆ.

ಸ್ಮಾರ್ಟ್​ವಾಚ್​​ನ ಬ್ಯಾಟರಿ ಆಗಾಗ ಗಮನಿಸಿ:- ಸ್ಮಾರ್ಟ್ ವಾಚ್ ಏಕಕಾಲದಲ್ಲಿ ಅನೇಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಾರಣಕ್ಕೆ ಸ್ಮಾರ್ಟ್​​​ವಾಚ್‌ನ ಬ್ಯಾಟರಿ ಕಡೆ ಹೆಚ್ಚು ಗಮನಹರಿಸಿ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡದಿದ್ದರೆ, ಅದರ ಬಳಕೆಯ ಸಮಯ ಕಡಿಮೆಯಾಗುತ್ತದೆ. ಹೀಗಾಗಿ ಕೆಲವು ಡೇಟಾಗಳು ಮಿಸ್‌ ಆಗಬಹುದು. ಈ ರೀತಿಯ ಸಂದರ್ಭಗಳು ಪ್ರತೀ ದಿನ ಮುಂದುವರೆದರೆ ನಿಮ್ಮ ವಾಚ್​ನ ಬ್ಯಾಟರಿ ಡೆಡ್ ಆಗಬಹುದು.

Leave A Reply

Your email address will not be published.