ಇನ್ನು ಮುಂದೆ ಬಸ್ ನಲ್ಲಿ ಗೂಗಲ್ ಪೇ, ಪೋನ್ ಪೇ ಮೂಲಕ ಟಿಕೆಟ್ ಖರೀದಿ !

ನೀವು ಇನ್ನು ಮುಂದೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ಪಡೆಯಲು ಕ್ಯಾಶ್ ಚಿಂತೆ ಮಾಡಬೇಕಾಗಿಲ್ಲ ಹೌದು ಇನ್ನುಮುಂದೆ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ನೀಡಿ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಂತೆ ವ್ಯವಸ್ಥೆ ಜಾರಿಗೆ ಬಂದಿದೆ.

ಕೊರೋನಾ ಹೆಚ್ಚಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಿರ್ವಾಹಕರಿಗೆ ಕ್ಯುಆರ್‌ಡ್ ನೀಡಲಾಗಿತ್ತು. ಆದರೆ, ಬ್ಯಾಂಕ್‌ಗಳ ತಾಂತ್ರಿಕ ದೋಷದ ಹಿನ್ನೆಲೆ 2021 ಅಕ್ಟೋಬರ್‌ನಲ್ಲಿ ಸ್ಥಗಿತಗೊಳಿಸಲಾಯಿತು. ಆ ಬಳಿಕ ಬಿಎಂಟಿಸಿ ಆಪ್ ಆರಂಭಿಸಿ ದಿನದ, ತಿಂಗಳ ಪಾಸ್‌ಗಳು ಮಾತ್ರ ಸಿಗುತ್ತಿತ್ತು. ಈಗ ಮತ್ತೆ ಟಿಕೆಟ್ ನೀಡುವ ಯಂತ್ರದಲ್ಲಿಯೇ ಕ್ಯುಆರ್‌ಡ್ ಲಭ್ಯವಾಗುತ್ತಿದೆ.

ಇನ್ನು ಮುಂದೆ ಬಿಎಂಟಿಸಿ ಬಸ್ ನಿರ್ವಾಹಕರಿಗೆ ಆ್ಯಂಡ್ರಾಯ್ಡ್ ಸೌಲಭ್ಯದ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ) ನೀಡಲಾಗುತ್ತಿದ್ದು, ಇದರಲ್ಲಿ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಅಳವಡಿಸಿದ್ದು, ಪ್ರಯಾಣಿಕರು ಗೂಗಲ್ ಪೇ, ಫೋನ್ ಪೇ ಸೇರಿದಂತೆ ಆನ್‌ಲೈನ್ ಪಾವತಿ ಮಾಡಿ ಟಿಕೆಟ್ ಪಡೆಯಬಹುದು ಎಂದು ಮಾಹಿತಿ ನೀಡಲಾಗಿದೆ.

ಈ ಮೊದಲು ಬಿಎಂಟಿಸಿ ಬಸ್ ನಿರ್ವಾಹಕ ಬಳಿ ಇರುವ ಇಟಿಎಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು ಕೆಲ ಸಂದರ್ಭದಲ್ಲಿ ಸ್ಥಗಿತವಾಗುತ್ತಿದ್ದವು. ಈ ಸಮಸ್ಯೆ ಪರಿಹಾರಕ್ಕೆ ಹೊಸದಾಗಿ ಎಂಟು ಸಾವಿರ ಇಟಿಎಂ ಖರೀದಿಸಲಾಗುತ್ತಿದೆ.

ಬಿಎಂಟಿಸಿ ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ ಈಗಾಗಲೇ ಬಿಎಂಟಿಸಿ 5500 ಬಸ್‌ಗಳು ನಗರದಲ್ಲಿ ಸಂಚಾರ ನಡೆಸುತ್ತಿದ್ದು, ಪ್ರತಿ ದಿನ ಸುಮಾರು 20 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ. ಡಿಜಿಟಲ್ ಪೇಮೆಂಟ್‌ನಿಂದ ಅನುಕೂಲವಾಗಲಿದೆ. ಡಿಜಿಟಲ್ ಪಾವತಿ ವಿಧಾನದಿಂದ ನಿರ್ವಾಹಕರು ಚಿಲ್ಲರೆಗಾಗಿ ತಡಕಾಟ ತಪ್ಪಲಿದೆ. ಚಿಲ್ಲರೆಗಾಗಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಜಗಳ ನಿವಾರಣೆಯಾಗಲಿದೆ. ಡಿಸೆಂಬರ್ 10ರೊಳಗೆ ವಿತರಣೆ ಈಗಾಗಲೇ ಪ್ರಯೋಗಿಕವಾಗಿ ಆಯಂಡ್ರಾಯ್ಡ್ ತಂತ್ರಜ್ಞಾನದ 1500 ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲಾಗಿದೆ.
ಹೊಸ ಎಂಟು ಸಾವಿರ ಆಯಂಡ್ರಾಯ್ಡ್ ತಂತ್ರಜ್ಞಾನದ ಇಟಿಎಂಗಳನ್ನು ಡಿಸೆಂಬರ್ 10ರೊಳಗೆ ಎಲ್ಲ ಬಸ್‌ಗಳ ನಿರ್ವಾಹಕರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ

ಸದ್ಯ ಸ್ಮಾರ್ಟ್‌ ಮೊಬೈಲ್‌ನಂತಿರುವ ಹೊಸ ಯಂತ್ರ ಆ್ಯಂಡ್ರಾಯ್ ಆಗಿದೆ. ಬಟನ್ ಬದಲಾಗಿ ಟಚ್ ಸ್ಟೀನ್ ಇರಲಿದೆ. ಟಿಕೆಟ್ ಕೊಡುವುದು ಮಾತ್ರವಲ್ಲದೆ ವೈಫೈ ಕನೆಕ್ಟ್, ಯುಪಿಐ ಕ್ಯುಆರ್‌ಕೋಡ್ ಪ್ರದರ್ಶನ ಸೌಲಭ್ಯವನ್ನು ಒಳಗೊಂಡಿದೆ. ನಿರ್ವಾಹಕರು ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ನಿಲ್ದಾಣ ನಮೂದಿಸಿದರೆ ದರ ತೋರಿಸಿ ಕ್ಯಾಶ್, ಯುಪಿಐ ಪಾವತಿ ವಿಧಾನ ಆಯ್ಕೆ ತೋರಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ. ಯುಪಿಐ ಆಯ್ಕೆ ಮಾಡಿದರೆ ಸೈರನ್‌ಮೇಲೆ ಬಾರ್‌ಡ್ ಬರಲಿದ್ದು, ಪ್ರಯಾಣಿಕರು ಸಾಯನ್ ಮಾಡಿ ಪಾವತಿಸಬಹುದು. ಯಶಸ್ವಿ ಪಾವತಿಯಾದ ಬಳಿಕ ಟಿಕೆಟ್ ಬರಲಿದೆ.

ಈ ಮೇಲಿನ ಆನ್ ಲೈನ್ ಪೇಮೆಂಟಿನಿಂದ ಸುಲಭವಾಗಿ ಕೈಯಲ್ಲಿ ಕ್ಯಾಶ್ ಇಲ್ಲದೆ ಇದ್ದರೂ ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.