ಕೈ ಕೊಟ್ಟ ಪ್ರೇಯಸಿಯ ಹೆಸರಲ್ಲೇ ಓಪನ್ ಆಯ್ತು ಟೀ ಶಾಪ್ | ಪ್ರೀತಿಯಲ್ಲಿ ವಂಚಿತರಿಗೆ 50% ಡಿಸ್ಕೌಂಟ್ ಆಫರ್ ಬೇರೆ!

ಪ್ರೀತಿಯಲ್ಲಿ ಕಹಿ ಉಂಡ ವ್ಯಕ್ತಿಯೊಬ್ಬ ಕೈಕೊಟ್ಟ ಪ್ರಿಯತಮೆಯ ನೆನಪಿಗಾಗಿ ಅವಳದೇ ಹೆಸರಿನಲ್ಲಿ ಚಹಾದಂಗಡಿಯನ್ನು ತೆರೆದು ಇತರರ ಬಾಯಿ ಸಿಹಿ ಮಾಡಲು ಹೊರಟಿದ್ದಾನೆ !

ಅಲ್ಲದೆ ಆತನ ಟೀ ಶಾಪ್ ನಲ್ಲಿ ಪ್ರೇಯಸಿಯಿಂದ ಮೋಸ ಹೋದವರಿಗೆ ಡಿಸ್ಕೌಂಟ್ ಬೆಲೆಯಲ್ಲಿ ಚಹಾ ನೀಡಲಾಗುತ್ತದೆ.

ಮಧ್ಯಪ್ರದೇಶದ ರಾಜಗಢ ಮೂಲದ ಅಂತ‌ರ್ ಗುಜ್ಜ‌ರ್’ ಎಂಬ ಯುವಕನೇ ಕೈಕೊಟ್ಟ ತನ್ನ ಪ್ರಿಯತಮೆಯ ಹೆಸರಿನಲ್ಲಿ ಚಹಾದಂಗಡಿ ತೆರೆದ ವ್ಯಕ್ತಿ. 

‘ಎಂ ಬೇವಾಫಾ ಚಾಯಿವಾಲಾ’ ಎಂಬ ಹೆಸರಿನ ಈ ಚಹಾದಂಗಡಿಯಲ್ಲಿ ಜೋಡಿಗಳಿಗೆ ಒಂದು ಕಪ್ ಚಹಾ ಬೆಲೆ 10 ರೂ.ಗಳಾದರೆ, ಪ್ರೇಯಸಿಯಿಂದ ಮೋಸ ಹೋದವರಿಗೆ 5 ರೂ.ಗಳಿಗೆ ಒಂದು ಕಪ್ ಚಹಾ ನೀಡಲಾಗುತ್ತದೆ, ಉಳಿದ ಜನರಿಗೆ ಬೇರೆಯೇ ಬೆಲೆ ನಿಗದಿ ಮಾಡಲಾಗಿದೆ. ಎಂ ಎಂದರೆ ಅಂತರ್ ನ ಪ್ರೇಯಸಿಯ ಹೆಸರಿನ ಮೊದಲ ಅಕ್ಷರವಂತೆ

ಬಿಎ ಅಂತಿಮ ವರ್ಷದಲ್ಲಿ ಓದುತ್ತಿರುವ ಅಂತರ್ ಮತ್ತು ಆತನ ‘ ಎಂ’  ಅವರ ಸಂಬಂಧಿಕರ ಮದುವೆಯಲ್ಲಿ ಭೇಟಿಯಾಗಿದ್ದರು. ಬಳಿಕ ಸ್ನೇಹಿತರಾಗಿ, ಪ್ರೀತಿ ಮೊಗ್ಗು ಅರಳಿತ್ತು. ಕಳೆದೈದು ವರ್ಷದ ಹಿಂದೆ ಹಾಗೆ ಪ್ರೀತಿಸಿದ ಆಕೆ, ಎರಡು ವರ್ಷ ಕಳೆದ ಬಳಿಕ ಆಕೆ ಆತನನ್ನು ಬಿಟ್ಟು ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಳು. ಕಾರಣ ಗಂಡ ‘ ಉಳ್ಳವನು’ !

” ಆತನ ಗಂಡನ ಬಳಿ ಎಲ್ಲವೂ ಇದೆ. ನಾನು ಆಕೆಯನ್ನು ನಂಬಿ ನಿರುದ್ಯೋಗಿಯಾಗಿಯೇ ಉಳಿದೆ. ಜೀವನವೇ ಬೇಡ ಎಂದು ಕೊಂಡಿದ್ದೆ ನಾನು. ಆಗ ನನ್ನ ಸ್ನೇಹಿತ ಸಲಹೆ ನೀಡಿದಂತೆ, ಆಕೆಯನ್ನು ಅಣಕಿಸುವಂತೆ ಚಹಾದಂಗಡಿ ತೆರೆದು ಅದಕ್ಕೆ ಆಕೆಯ ಹೆಸರಿಟ್ಟಿದ್ದೇನೆ.” ಎಂದಿದ್ದಾನೆ ಪ್ರೀತಿಯಲ್ಲಿ ಮೋಸ ಹೋದ ಹುಡುಗ !

Leave A Reply