ರಾತ್ರೋರಾತ್ರಿ ಮಸಣದಲ್ಲಿ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ| ಗ್ರಾಮಸ್ಥರಲ್ಲಿ ಆವರಿಸಿದ ಭೀತಿ| ಕಾರಣ ಕೇಳಿದರೆ ಬೆಚ್ಚಿಬೀಳುತ್ತೀರಾ!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ರಾತ್ರೋರಾತ್ರಿ ಮಸಣದಲ್ಲಿ ಒಬ್ಬಳು ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ ನಡೆದಿದೆ. ಇನ್ನೂ ಈ ಕೃತ್ಯ ಏಕೆ ನಡೆದಿರಬಹುದು? ಕಾರಣವೇನು?

ಆ ಊರಿನ ಗ್ರಾಮಸ್ಥರೆಲ್ಲ ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಒಂದು ದಿನ ಏಕಾಏಕಿ ಆ ಗ್ರಾಮಕ್ಕೆ ಗ್ಯಾಂಗ್ ಒಂದು ಎಂಟ್ರಿ ಕೊಟ್ಟಿದೆ. ಅದಷ್ಟೇ ಅಲ್ಲದೆ ಈ ಗ್ಯಾಂಗ್ ಮಧ್ಯರಾತ್ರಿ ಮಾಡುತ್ತಿದ್ದ ಕೃತ್ಯ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಊರಿನ ಜನರು ಮನೆಯಿಂದ ಹೊರಗಡೆ ಬರುವುದಕ್ಕೂ ಭಯ ಪಡುತ್ತಿದ್ದಾರೆ.

ಇನ್ನೂ ಈ ಗ್ಯಾಂಗ್ ಮಾಡುತ್ತಿದ್ದ ನಿಗೂಢ ಕೃತ್ಯವೇನೆಂದರೆ, ಸುತ್ತಲೂ ಅರಿಶಿನ ಕುಂಕುಮ, ಜತೆಗೆ ರಂಗೋಲಿ, ತೆಂಗಿನಕಾಯಿ, ಎಲೆ, ಅಡಿಕೆ, ಕಡ್ಡಿ, ಕರ್ಪೂರ, ಹಾಗೂ ಇದೆಲ್ಲದರ ಪಕ್ಕದಲ್ಲಿ ಬರೆದಿರುವ ವಿವಿಧ ಬರಹಗಳು. ಅಷ್ಟೇ ಅಲ್ಲದೆ ಇದರ ಜೊತೆಗೆ ಸುಂದರ ಯುವತಿಯ ಫೋಟೋ ಕೂಡ ಇಟ್ಟಿದ್ದಾರೆ. ಇದಂತೂ ನೋಡುವುದಕ್ಕೆ ಭಯಾನಕವಾಗಿದ್ದು, ಇನ್ನು ಇಲ್ಲಿ ಪೂಜೆ ಯಾರು ಮಾಡಿದ್ದಾರೆ ಎಂದು ಅದರ ಸಮೀಪಕ್ಕೆ ಹೋಗಿ ನೋಡಿದ ಗ್ರಾಮಸ್ಥರಿಗೆ ಸುಂದರ ಯುವತಿಯ ಫೋಟೋ ಕಾಣಿಸಿದೆ. ಅದನ್ನು ನೋಡಿ ಗ್ರಾಮಸ್ಥರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.

ಈ ರೀತಿ ಸುಂದರ ಯುವತಿಯ ಫೋಟೋವೊಂದನ್ನು ಇಟ್ಟು ವಶೀಕರಣದ ವಾಮಾಚಾರ ಮಾಡಿರುವುದು ಬೇರೆ ಎಲ್ಲೂ ಅಲ್ಲಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಸ್ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಎಂದು ತಿಳಿದುಬಂದಿದೆ. ಈ ಗ್ರಾಮಕ್ಕೆ ಎರಡು ದಿನಗಳ ಹಿಂದೆ ಎಂಟ್ರಿ ಕೊಟ್ಟಿದ್ದ ಕೆಲ ಕಿಡಿಗೇಡಿಗಳ ಗ್ಯಾಂಗ್ ಹೊರವಲಯದಲ್ಲಿರುವ ಸ್ಮಶಾನದ ಬಳಿ ಈ ರೀತಿಯಾಗಿ ವಾಮಾಚಾರ ಮಾಡಿ ಕಾಲ್ಕಿತ್ತಿದ್ದಾರೆ.

ಬೆಳಗ್ಗೆ ಜನರು ಆ ಪ್ರದೇಶಕ್ಕೆ ಕುರಿ ಮೇಯಿಸಲು ಹೋದಾಗ ಅಲ್ಲಿ ಅರಿಶಿನ ಕುಂಕುಮದ ಜೊತೆಗೆ ಸುಂದರ ಯುವತಿಯ ಫೋಟೊ ಇಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದೆ. ಇನ್ನೂ ಆ ಯುವತಿ ಯಾರು ಅಂತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಳಿದಾಗ ಆಕೆಯ ಬಗ್ಗೆ ಏನೊಂದೂ ವಿಚಾರ ತಿಳಿದಿಲ್ಲ. ಅಷ್ಟೇ ಅಲ್ಲದೆ, ಕಿಡಿಗೇಡಿಗಳು ವಾಮಾಚಾರ ಮಾಡಿರುವ ಸ್ಥಳದಲ್ಲಿ ವಶೀಕರಣ ಎಂದು ಬರಹದ ಜೊತೆಗೆ ರಂಗೋಲಿ ಹಾಕಿ ಹೋಗಿದ್ದಾರೆ.

ಇನ್ನೂ ಇದೇ ಗ್ರಾಮದ ಮಂಜುನಾಥ್ ಎಂಬುವವರ ಮನೆಯಲ್ಲಿ ಮೂರು ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದರು. ಇತ್ತೀಚೆಗಷ್ಟೆ ಮೃತಪಟ್ಟಿದ್ದ ಅವರ ಸಮಾಧಿ ಬಳಿ ಈ ವಾಮಾಚಾರ ಕೃತ್ಯ ನಡೆದಿದೆ. ಹೀಗಾಗಿ ಆ ಕುಟುಂಬಸ್ಥರಿಗೆ ಈ ವಾಮಾಚಾರದ ಬಗ್ಗೆ ತಿಳಿದು ಭಯಭೀತರಾಗಿದ್ದಾರೆ. ಈ ಕೃತ್ಯದಿಂದ ಊರಿನ ಪೂರ್ತಿ ಆತಂಕದ ಛಾಯೆ ಆವರಿಸಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒತ್ತಾಯಿಸಲಾಗಿದೆ

Leave A Reply