ಮಾಯಾಂಗನೆಯ ಮೋಹದ ಜಾಲಕ್ಕೆ ಬಿದ್ದ ವೃದ್ಧ | ಈ ವೃದ್ಧ ಕಳೆದುಕೊಂಡ ಹಣ ಎಷ್ಟೆಂದರೆ…ಖಂಡಿತ ಬೆರಗಾಗ್ತೀರಾ!

ಹನಿಟ್ರ್ಯಾಪ್ ಗೆ ಬಿದ್ದು ಅದೆಷ್ಟೋ ಜನರು ಲಕ್ಷ, ಕೋಟಿ ಎನ್ನದೆ ಹಣ ಕಳೆದು ಕೊಂಡಿದ್ದಾರೆ. ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಜನಪ್ರಿಯರಾಗಿದ್ದ ವ್ಲಾಗರ್‌ ದಂಪತಿಗಳನ್ನು ಹನಿಟ್ರ್ಯಾಪ್ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಟ್ರ್ಯಾಪ್ಡಿಯೋ ಪೋಸ್ಟ್ ಮಾಡುತ್ತಿದ್ದ, ಬ್ಲಾಗರ್ ರಶೀದಾ (28) ಮತ್ತು ಆಕೆಯ ಪತಿ ನಿಶಾದ್ ಬಂಧಿತ ಆರೋಪಿಗಳು. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಲಾಗಿದೆ.

ಬ್ಲಾಗರ್ ಆಗಿರುವ ರಶೀದಾ ಕಣ್ಣುಕುಕ್ಕುವಂತಹ ಉಡುಗೆ ತೊಟ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಳು. ಆಕೆಯ ವಿಡಿಯೋ ನೋಡಿದವರು ಸುಲಭವಾಗಿ ಆಕೆಯ ಬಲೆಗೆ ಬೀಳುತ್ತಿದ್ದರು. ಹನಿಟ್ರ್ಯಾಪ್ ಮಾಡಲು ಆಕೆಯ ಪತಿ ನಿಶಾದ್ ಸಹಾಯ ಮಾಡುತ್ತಿದ್ದ. 68 ವರ್ಷದ ಸಂತ್ರಸ್ತನನ್ನು ಪರಿಚಯಿಸಿಕೊಂಡಿದ್ದ ರಶೀದಾ, ಆಗಾಗ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಒಂದು ದಿನ ಪತಿಗೆ ಬಿಸಿನೆಸ್ ಮಾಡಲು ಹಣ ಬೇಕು ಎಂದು ಕೇಳಿದ್ದರಿಂದ, ರಶೀದಾನ ಮಾತು ನಂಬಿ ಸಂತ್ರಸ್ತ ಆಕೆಗೆ ಹಣ ನೀಡಿದ್ದನು. ಕೆಲವು ದಿನಗಳ ಬಳಿಕ ಹಣ ವಾಪಸ್ ಕೇಳಿದಾಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ.

ಸಂತ್ರಸ್ತನ ಮನೆಯವರಿಗೆ ಹನಿಟ್ರ್ಯಾಪ್‌ನಿಂದ ಹಣ ಕಳೆದುಕೊಂಡಿರುವ ವಿಚಾರ ಗೊತ್ತಾದ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆತನಿಗೆ 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ದಂಪತಿ ವಿರುದ್ಧದ ಪ್ರಕರಣ ದಾಖಲಾಗಿದ್ದೂ, ದೂರಿನ ಆಧಾರದ ಮೇಲೆ ರಶೀದಾ ಮತ್ತು ಆಕೆಯ ಗಂಡನನ್ನು ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ರಶೀದಾ ಅವರು ಎರಡು ಶಿಶುಗಳಿಗೆ ತಾಯಿಯಾಗಿರುವುದರಿಂದ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.

Leave A Reply

Your email address will not be published.