ಇಂಡೋನೇಷ್ಯಾ ಪ್ರಬಲ ಭೂಕಂಪ : 20 ಜನ ಸಾವು, ಕನಿಷ್ಠ 300 ಮಂದಿಗೆ ಗಾಯ

ಇಂಡೋನೇಷ್ಯಾದ ಪಶ್ಚಿಮ ಜಾವಾದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಜನರು ಗಾಯಗೊಂಡಿದ್ದಾರೆ.

“ಸದ್ಯಕ್ಕೆ ದೊರೆತ ಮಾಹಿತಿ ಪ್ರಕಾರ, ಈ ಆಸ್ಪತ್ರೆಯೊಂದರಲ್ಲೇ ಸುಮಾರು 20 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಟ್ಟಡಗಳ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ” ಎಂದು ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ತಿಳಿಸಿದರು.

ವರದಿಗಳ ಪ್ರಕಾರ, ಭೂಕಂಪದ ತೀವ್ರತೆ 5.6 ರಿಕ್ಟರ್ ಮಾಪಕದಲ್ಲಿತ್ತು. ಭೂಕಂಪವು ಎಷ್ಟು ಪ್ರಬಲವಾಗಿದೆಯೆಂದ್ರೆ, ಜನರು ಅಪಾರ್ಟ್ಮೆಂಟ್‍ಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಪಶ್ಚಿಮ ಜಾವಾದ ಸಿಯಾಂಜೂರ್ನಲ್ಲಿ 10 ಕಿ.ಮೀ (6.21 ಮೈಲಿ) ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ಬಿಎಂಕೆಜಿ ತಿಳಿಸಿದೆ.

Leave A Reply