15 ವರ್ಷಗಳ ಶ್ರಮಕ್ಕೆ ದೊರೆತ ಮನ್ನಣೆ, ನಿರಂತರ ಶ್ರಮ ಬಹಳ ಮುಖ್ಯ – ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಕುರಿತು ರವಿಚಂದ್ರನ್‌ ಮಾತು

ಕಾಂತಾರ ಸಿನೆಮಾದ ಎಲ್ಲೆಡೆ ಪ್ರಖ್ಯಾತಿ ಪಡೆದದ್ದಲ್ಲದೆ, ತನ್ನ ಹವಾ ಎಷ್ಟರಮಟ್ಟಿಗೆ ಕಾಯ್ದುಕೊಂಡಿದೆ ಎಂಬುದಕ್ಕೆ ಜೀವಂತ ದೃಷ್ಟಾಂತ ಎಂಬಂತೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಜಗತ್ತಿನ ಹೆಮ್ಮೆಯ ಗರಿಯನ್ನು ತನ್ನತ್ತ ಬಾಚಿಕೊಂಡಿದೆ.

ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಕಾಂತಾರ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ, ಅಷ್ಟು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಅಲ್ಲು ಅರ್ಜುನ್ ಅವರ ಪುಷ್ಪ ದಿ ರೈಸ್, ಯಶ್ ಅವರ ಕೆಜಿಎಫ್ 2 ಮತ್ತು ಇತರ ಬ್ಲಾಕ್‌ಬಸ್ಟರ್ ಹಿಟ್‌ಗಳ ದಾಖಲೆಗಳನ್ನು ಕೂಡ ಪುಡಿ ಮಾಡಿದ್ದು ಗೊತ್ತಿರುವ ವಿಚಾರವೇ!!!

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಸಿನಿಮಾಗಳ ಇತಿಹಾಸ ಸೃಷ್ಟಿಸಿದ ನಟ, ನಿರ್ದೇಶಕ, ನಿರ್ಮಾಪಕ ವಿ. ರವಿಚಂದ್ರನ್. 90ರ ದಶಕದಲ್ಲೇ ‘ಶಾಂತಿ ಕ್ರಾಂತಿ’ ಪ್ರಯೋಗ ಜೊತೆಗೆ ಪ್ರೇಮ ಲೋಕ ಎಂಬ ಹಿಟ್ ಸಿನಿಮಾದ ಬಳಿಕ ಸಾಲು ಸಾಲು ಚಿತ್ರಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ಇದೀಗ, ಕನ್ನಡದ ಎರಡೂ ಸೂಪರ್ ಹಿಟ್ ಸಿನಿಮಾಗಳ ಬಗ್ಗೆ ಕ್ರೇಜಿಸ್ಟಾರ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಹೌದು!! ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಬಗ್ಗೆ ಮಾತಾಡುವ ಶೈಲಿ ಯಲ್ಲಿ ಕಾಂತಾರ ಪ್ರಖ್ಯಾತಿ ಪಡೆದಿದೆ. ಕೆ ಜಿ ಎಫ್ – 2ಸಿನಿಮಾ ಕೂಡ ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ಕನ್ನಡ ಚಿತ್ರರಂಗ ಕಂಡ ಕನಸುಗಾರ ಎರಡು ಸಿನಿಮಾಗಳ ಸಕ್ಸಸ್ ಬಗ್ಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಕೂಡ ತಮ್ಮ ಅಭಿಪ್ರಾಯ ಬಿಚ್ಚಿಟ್ಟಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾ ಪ್ರೀ ರಿಲೀಸ್ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ರವಿಚಂದ್ರನ್ ಆಗಮಿಸಿದ್ದ ಸಂದರ್ಭದಲ್ಲಿ ಕನ್ನಡ ಸಿನಿಮಾಗಳ ಸಾಧನೆ ಬಗ್ಗೆ ಹೆಮ್ಮೆ ಪಟ್ಟುಕೊಂಡು , ‘KGF’ ಕಾನ್ಫಿಡೆನ್ಸ್ ಅನ್ನು ವ್ಯಕ್ತಪಡಿಸಿದರೆ, ‘ಕಾಂತಾರ’ ಒಂದು ಎಮೋಷನ್ ಎಂದು ಹೇಳಿದ್ದಾರೆ. ಇದರ ಜೊತೆಗೆ ಒಳ್ಳೆ ಸಿನಿಮಾಗಳಿಗೆ ಎಂದೂ ಸೋಲಿಲ್ಲ ಹಾಗೂ ಪ್ರಯತ್ನ ಒಳ್ಳೆಯದಾಗಿದ್ದರೆ ಗೆಲುವು ನಿಶ್ಚಿತ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದಲ್ಲದೆ, ಒಳ್ಳೆಯ ಸಿನಿಮಾದ ಜೊತೆಗೆ ಅದೇ ರೀತಿ ಕಠಿಣ ಪರಿಶ್ರಮವೂ ಅಗತ್ಯವಾಗಿದೆ ಹಾಗಾಗಿ, ಈ ವಿಚಾರದಲ್ಲಿ ಯಶ್ ಮತ್ತು ರಿಷಬ್ ಶೆಟ್ಟಿ ಇಬ್ಬರ ಪ್ರಯತ್ನಕ್ಕೆ ಹಾಗೂ ಯಶಸ್ಸಿಗೆ ಕನಸುಗಾರ ರವಿಚಂದ್ರನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷ.’ರೇಮೊ’ ಸಿನಿಮಾ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಮಾತನಾಡುತ್ತಾ “ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆ ಸ್ಥಿತಿಯಲ್ಲಿದ್ದು, ಶುಕ್ರದೆಸೆ ಬಂದಿದೆ ಅಲ್ಲದೆ, ರಿಷಬ್ ಶೆಟ್ಟಿಗೆ ಗಜಕೇಸರಿ ಯೋಗ ಬಂದಿದೆ ಎನ್ನುತ್ತಿದ್ದು, ನಮ್ಮ ಸಿನಿಮಾಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

ಇಂತಹ ಸಮಯದಲ್ಲಿ ಸಿ. ಆರ್ ಮನೋಹರ್‌ರಂತಹ ನಿರ್ಮಾಪಕರು ಬೇಕಾಗಿದ್ದು, ಸಂತೋಷ ದಿಂದ ಸಿನಿಮಾ ಮಾಡುವವರು ಬೇಕಾಗಿದ್ದು, ನಿರ್ಮಾಪಕರು ಎಷ್ಟು ಖುಷಿಯಿಂದ ಸಿನಿಮಾ ಮಾಡಿದರೆ ಅಷ್ಟು ಒಳ್ಳೆ ಸಿನಿಮಾ ಆಗುತ್ತದೆ ಎಂಬ ಅಭಿಪ್ರಾಯ ನೀಡಿದ್ದಾರೆ.’KGF’ ಕಾನ್ಫಿಡೆನ್ಸ್, ‘ಕಾಂತಾರ’ ಎಮೋಷನ್”ಕನ್ನಡ ಚಿತ್ರರಂಗಕ್ಕೆ ಎನ್ನುವುದು ಒಂದು ‘KGF’ ಕಾನ್ಫಿಡೆನ್ಸ್. ಆ ಸಿನಿಮಾ ಕಾನ್ಫಿಡೆನ್ಸ್ ನೀಡಿದ್ದು, ನಾವು ಎಷ್ಟು ಶ್ರಮ ವ್ಯಯಿಸಿದರೆ ಅಷ್ಟು ಪ್ರತಿಫಲ ಬರುತ್ತದೆ ಎಂದು ಯಶ್ ತೋರಿಸಿಕೊಟ್ಟಿದೆ.

‘ಕಾಂತಾರ’ ಅನ್ನುವುದು ಒಂದು ಎಮೋಷನ್ ಆಗಿದ್ದು, ಅದು ಹೃದಯದಲ್ಲಿ ಸ್ಥಾನ ಪಡೆದು ಗೆಲುವಿನ ಪಯಣದಲ್ಲಿ ಸಾಗುತ್ತಿದೆ. ಎರಡು ಸಿನಿಮಾ ಬಜೆಟ್‌ನಲ್ಲಿ ವ್ಯತ್ಯಾಸವಿದೆ. ‘KGF’ ತಂಡ ದೊಡ್ಡ ಗುರಿಯೊಂದಿಗೆ ಗೆದ್ದಿದ್ದಾರೆ, ‘ಕಾಂತಾರ’ ಗುರಿ ಇಲ್ಲದೇ ಗೆದ್ದು ನಿಂತಿದೆ.ಸಿನಿಮಾ ಮಾಡುವ ಪ್ರಾಮಾಣಿಕತೆ ಬಹಳ ಮುಖ್ಯವಾಗಿದ್ದು. ರಿಷಬ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನಗೆ ಗೊತ್ತಿರುವಂತೆ ರಿಷಬ್ 15 ವರ್ಷಗಳಿಂದ ಚಿತ್ರರಂಗದಲ್ಲಿ ನಿರಂತರ ಶ್ರಮ ವಹಿಸುತ್ತಿದ್ದಾರೆ.

ಇದು ಬರೀ ಒಂದು ‘ಕಾಂತಾರ’ದಿಂದ ಸಿಕ್ಕಿದ ಗೆಲುವಲ್ಲ. ಇದು ಸುದೀರ್ಘ 15 ವರ್ಷಗಳ ಶ್ರಮಕ್ಕೆ ತಕ್ಕ ಮನ್ನಣೆ . ನಿರಂತರ ಶ್ರಮ ಬಹಳ ಮುಖ್ಯವಾಗಿದ್ದು, ಸಕ್ಸಸ್ ಗುರಿ ಆಗುವುದಿಲ್ಲ ಬದಲಿಗೆ, ನಿಮ್ಮ ಕೆಲಸವೇ ಗುರಿಯಾಗಿರಬೇಕು.ಒಳ್ಳೆ ಕೆಲಸಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.

ಈ ನಡುವೆ ಮತ್ತೊಂದು ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿ ‘ರೇಮೊ’ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರಲಿದ್ದು, ಸಿ. ಆರ್ ಮನೋಹರ್ ನಿರ್ಮಾಣದ ಈ ಅದ್ಧೂರಿ ಚಿತ್ರದಲ್ಲಿ ಇಶಾನ್, ಆಶಿಕಾ ರಂಗನಾಥ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದ್ದು, ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.