ಹೆತ್ತವರನ್ನೇ ಕೊಲೆ ಮಾಡಲು ಸುಪಾರಿ ನೀಡಿದ ಮಗ |ಆದರೆ ಅದೇ ಕಿಲ್ಲರ್ ನಿಂದ ಚಾಕು ಇರಿತಕ್ಕೊಳಗಾದ ಮಗ, ಯಾಕೆ ಗೊತ್ತಾ?
ಇಂದಿನ ಜಗತ್ತು ಹೇಗೆ ಬದಲಾಗುತ್ತಿದೆ ಎಂದರೆ, ಕ್ಷುಲ್ಲಕ ಕಾರಣಕ್ಕೂ ಕೊಲೆ ಮಾಡುತ್ತಿದ್ದಾರೆ. ಅಂತಹ ಎಷ್ಟೋ ಪ್ರಕರಣಗಳು ಇದೀಗ ದಾಖಲಾಗಿದ್ದೂ, ಅಂತಹದೇ ಘಟನೆಯೊಂದು ಕೊಪ್ಪಳದಲ್ಲಿ ವರದಿಯಾಗಿದೆ. ತನ್ನ ತಂದೆ-ತಾಯಿಯನ್ನೇ ಕೊಲ್ಲಲು ಸುಪಾರಿಕೊಟ್ಟಿದ್ದ ಮಗನ ಮೇಲೆ ಹಲ್ಲೆ ನಡೆಸಿ, ಕಿಲ್ಲರ್ ಗಳು ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಜಯ ನಗರದ ನಿವಾಸಿಯಾದ ಯೋಗೇಶ್ ದೇಸಾಯಿ ವೃತ್ತಿಯಲ್ಲಿ ವಕೀಲನಾಗಿದ್ದ. ಆಸ್ತಿ ವಿಚಾರಕ್ಕೆ ಮಲತಾಯಿ ಹಾಗೂ ತಂದೆಯನ್ನು ಕೊಲೆ ಮಾಡಲು ಯೋಗೇಶ್ ಬೆಂಗಳೂರಿನಿಂದ ಇಬ್ಬರನ್ನು ಕರೆ ತಂದಿದ್ದ. ಹಣಕಾಸಿನ ವಿಚಾರಕ್ಕೆ ಕಿಲ್ಲರ್ ಮತ್ತು ಯೋಗೇಶ ನಡುವೆ ಗಲಾಟೆಯಾಗಿದ್ದೂ, ಈ ವೇಳೆ ಸುಪಾರಿ ಕೊಟ್ಟ ಯೋಗೇಶ್ ದೇಸಾಯಿಗೆ ಚಾಕು ಇರಿದು ಕಿಲ್ಲರ್ಗಳು ಪರಾರಿಯಾಗಿದ್ದಾರೆ.
ಯೋಗೇಶ್ನ ಈ ಪ್ಲಾನ್ಗೆ ತಂಗಿ ರೂಪ ಮತ್ತು ಅಳಿಯ ಆನಂದ ಸಹಾಯ ಮಾಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೋಗೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.