IPhone 15 Series: ಹೊರಬಿದ್ದಿರುವ ಐಫೋನ್​ನ 15 ಸೀರಿಸ್​ನ ಫೀಚರ್ಸ್​ ! ಮೊಬೈಲ್ ನೋಡಿದ್ರೆ ನೀವು ಖಂಡಿತಾ ಫಿದಾ ಆಗ್ತೀರಾ!!!

ಆ್ಯಪಲ್‌ ಮೊಬೈಲ್‌ಗಳು ನವೀನ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟು ತಮ್ಮದೇ ಬ್ರಾಂಡ್ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೆ, ಅದರ ಬೆಲೆ ದುಬಾರಿಯಾದರೂ ಕೂಡ ಆ್ಯಪಲ್ ಕಂಪನಿಯ ಮೊಬೈಲ್ ಕೊಳ್ಳುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ವರ್ಷದಿಂದ ವರ್ಷ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಸ್ಮಾರ್ಟ್​ಫೋನ್​ ಅನ್ನು ಆ್ಯಪಲ್ ಕಂಪೆನಿ ಬಿಡುಗಡೆ ಮಾಡುತ್ತಿದ್ದು, ಐಫೋನ್ 13 ಅನ್ನು ಕಳೆದ ವರ್ಷ ಪರಿಚಯಿಸಿದ್ದು, ಅದೇ ರೀತಿ ಈ ಬಾರಿ ಐಫೋನ್ 14 ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಎರಡು ಮೊಬೈಲ್​ಗಳು ಬಹು ಬೇಡಿಕೆಯನ್ನು ಪಡೆದುಕೊಂಡಿವೆ. ಇದರ ಬೆನ್ನಲ್ಲೆ ಹೊಸ ವರ್ಷದ ಹೊಸ್ತಿಲಲ್ಲೇ ಐಫೋನ್ 15 ಸೀರಿಸ್​ ಅನ್ನು ಬಿಡುಗಡೆ ಮಾಡುವ ಕುರಿತು ಪ್ರಸ್ತಾಪ ಮಾಡಲಾಗಿತ್ತು.

ಐಫೋನ್ ಪ್ರಿಯರಿಗಾಗಿ, ಇದೀಗ ಆ್ಯಪಲ್ 15 ಸೀರಿಸ್​ನ ಕೆಲವೊಂದು ಫೀಚರ್ಸ್ಗಳ ಮಾಹಿತಿ ಗಳು ಲಭ್ಯವಾಗಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿ ಜೀವನದ ಅವಿಭಾಜ್ಯ ಭಾಗದಂತೆ ಆಗಿಬಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ವಿಶೇಷ ತೆಯನ್ನೊಳಗೊಂಡ ದಿನಕ್ಕೊಂದು ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಗ್ರಾಹಕರಿಗೆ ಅನೇಕ ಬ್ರಾಂಡ್ಗಳ ಆಯ್ಕೆಯು ದೊರೆಯುತ್ತಿದ್ದು ಅದರಲ್ಲೂ ಕೂಡ ಆ್ಯಪಲ್ ಫೋನ್ ಗಳೆಂದರೆ ಹೆಚ್ಚಿನವರಿಗೆ ಅಗಾಧವಾದ ಪ್ರೀತಿ.

ಪ್ರತಿ ಬಾರಿ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡುವಾಗ ಐಫೋನ್ ಗ್ರಾಹಕರಿಗೆ ಕೊಡುಗೆಯ ರೀತಿಯಲ್ಲಿ ಅದಕ್ಕೆ ವಿಶೇಷ ಫೀಚರ್​ಗಳನ್ನು ನೀಡುತ್ತಾ ಬಂದಿದೆ . ಈ ವರ್ಷದ ಐಫೋನ್ 14 ಸೀರಿಸ್​ನಲ್ಲಿ ಆಕರ್ಷಕವಾದ 48 ಮೆಗಾಫಿಕ್ಸೆಲ್ ಕ್ಯಾಮೆರಾ, ಸ್ಯಾಟಲೈಟ್ ಕನೆಕ್ಟಿವಿಟಿ, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಒಂದಿಷ್ಟು ಗ್ರಾಹಕರಿಗೆ ಅನುಕೂಲವಾಗುವಂತೆ ಫೀಚರ್ಸ್ ಅನ್ನು ಪರಿಚಯಿಸಲಾಗಿತ್ತು. ಇದೀಗ , ಹೊಸ ವರ್ಷಕ್ಕೆ 2023 ರಲ್ಲಿ ಲಗ್ಗೆ ಇಡುವ ಐಫೋನ್ 15 ಪ್ರೊ ಐಫೋನ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜರ್‌ ಅನ್ನು ಅಳವಡಿಸಲು ಸಿದ್ದವಾಗಿದ್ದು, ಇದರಿಂದ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ ಎಂದು ಆ್ಯಪಲ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಗ್ರೆಗ್ ಜೋಸ್ವಿಯಾಕ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಯುರೋಪಿಯನ್ ಕಮಿಷನ್ ಇತ್ತೀಚಿನ ದಿನಗಳಲ್ಲಿ ಒಂದು ನಿಯಮನ್ನು ಪ್ರಸ್ತಾಪಿಸಿದೆ ಎನ್ನಲಾಗಿದ್ದು, ಈ ನಿಯಮದ ಅನ್ವಯ ಯುರೋಪ್​ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಫೋನ್​ಗಳು 2024ರ ವೇಳೆಯಲ್ಲಿ ಟೈಪ್ ಸಿ ,ಚಾರ್ಜರ್ ಅನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.

ಈ ನಿಯಮವನ್ನು ಪಾಲಿಸುವ ನಿಟ್ಟಿನಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್ 15 ನಲ್ಲಿ ಟೈಪ್ ಸಿ ಚಾರ್ಜರ್ ಹೊಂದಿದ ಸ್ಮಾರ್ಟ್​ಫೊನ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.ಹೊಸ ಐಫೋನ್‌ನ ಕಾರ್ಯವೈಖರಿಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಅಲ್ಲದೆ,ವೇಗವಾಗಿ ಸ್ಮಾರ್ಟ್​ಫೋನ್ ಕಾರ್ಯನಿರ್ವಹಿಸುವಂತೆ ಮಾಡಲು ಮುಂಬರುವ iPhone 15 Pro ನಲ್ಲಿ A17 ಬಯೋನಿಕ್ ಚಿಪ್‌ಸೆಟ್ ಅಳವಡಿಸಲಾಗುತ್ತದೆ ಎಂಬ ಸುದ್ದಿಯೂ ಕೂಡ ಹರಿದಾಡುತ್ತಿದೆ.

ಆ್ಯಪಲ್ ಐಫೋನ್ 15 ಮತ್ತು 15 ಪ್ರೊ ಮ್ಯಾಕ್ಸ್ ಮಾದರಿಗಳ ಫೀಚರ್ಸ್​ ನಡುವೆ ಬಹಳಷ್ಟು ಅಂತರವಿರುವುದರಿಂದ ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಯಂತೆ ಐಫೋನ್‌ 15 ಸರಣಿಯಲ್ಲಿ ಕಾಣುವುದು ಸಂದೇಹ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಪ್ರೊ ಮ್ಯಾಕ್ಸ್ ಬದಲಿಗೆ ಐಫೋನ್ 15 ಅಲ್ಟ್ರಾವನ್ನು ಕಂಪೆನಿ ಬಿಡುಗಡೆ ಮಾಡಲಿದೆ ಎಂದು ಊಹಿಸಲಾಗಿದೆ.

ಇದರ ಜೊತೆಗೆ , ಈ ಹಿಂದೆ iPhone 15 Pro ಮಾದರಿಗಳು 8P ಲೆನ್ಸ್ ಕ್ಯಾಮೆರಾವನ್ನು ಹೊಂದಿರಲಿವೆ ಎನ್ನಲಾಗಿದ್ದು, ಆದರೀಗ iPhone 15 Pro ಮಾದರಿಗಳು 8P ಲೆನ್ಸ್ ಕ್ಯಾಮೆರಾವನ್ನು ಹೊಂದಿರುವುದಿಲ್ಲ ಎಂದು ವರದಿಯಾಗಿದೆ. ಹಾಗಾದರೆ, ಮೊಬೈಲ್ ಹೊಸ ವೈಶಿಷ್ಟ್ಯ ಹೇಗಿರಲಿದೆ ಎಂಬ ಕೌತುಕ ಸಾಮಾನ್ಯರ ನಡುವೆ ಸಹಜವಾಗಿ ಮನೆ ಮಾಡಿದೆ.

Leave A Reply

Your email address will not be published.