ಮಂಗಳೂರು ರಿಕ್ಷಾ ಬ್ಲಾಸ್ಟ್‌ ಪ್ರಕರಣ : ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಅರೆಸ್ಟ್ | ರಾಜಧಾನಿಯಲ್ಲಿ ಕೃತ್ಯಕ್ಕೆ ಪ್ಲ್ಯಾನ್?

ಮಂಗಳೂರಿನ ಜನತೆಯನ್ನು ಬೆಚ್ಚಿಸಿದ ನಾಗೂರಿನ (Naguru, Mangaluru) ಬಳಿ ಆಟೋದಲ್ಲಿ ಸಂಭವಿಸಿದ (Auto Blast) ಕುಕ್ಕರ್ ಬಾಂಬ್ ಬ್ಲಾಸ್ಟ್ ನಿಗೂಢ ಸ್ಫೋಟದ ಹಿಂದೆ ಉಗ್ರರ ಕೈವಾಡ ಇರುವ ಅನುಮಾನ ದಟ್ಟವಾಗಿದ್ದು, ಉಗ್ರರ ಕೃತ್ಯದ ಕುರುಹುಗಳು ಬೆಳಕಿಗೆ ಬರುತ್ತಿವೆ. ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದ ಬಳಿಕ ಇದೀಗ ಆರೋಪಿ ಶಾರೀಕ್ ಎಂಬ ಮಾಹಿತಿ ದೃಢವಾಗಿದೆ.

ಇದೀಗ, ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ (Cooker Bomb Explosion) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶಂಕಿತನೋರ್ವನನ್ನು (Suspect) ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಮಹಮದ್ ರುಹುಲ್ಲಾ​ ಎಂಬಾತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಮಹಮದ್ ರುಹುಲ್ಲಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ (Inquiry) ನಡೆಸಿದ್ದು, ಶಾರೀಕ್​ ಬಗ್ಗೆ ಕೂಡ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಕೆ ಜಿ ಹಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಒಂದಕ್ಕೆ ಅಗಮಿಸಿದ್ದ ಮಹಮದ್ ರುಹುಲ್ಲಾ, ಶಾಹಿರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಮಹಮದ್ ರುಹುಲ್ಲಾಗಾಗಿ ನಿನ್ನೆಯೇ ಮೈಸೂರು ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ.

ಮಹಮದ್ ರುಹುಲ್ಲಾ ಬಗ್ಗೆ ಪೂರ್ವ ವಿಭಾಗ ಪೊಲೀಸರಿಗೆ ಮೈಸೂರು ಪೊಲೀಸರು ಮಾಹಿತಿ ನೀಡಿದ್ದು ಈ ಬಳಿಕ ಳಿಕ ಕೆ.ಜಿ ಹಳ್ಳಿಯಲ್ಲಿ ಮಹಮದ್ ರುಹುಲ್ಲಾನನ್ನು ಪೊಲೀಸರು ವಶಕ್ಕೆ ಪಡೆದು ಮೈಸೂರು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಮಹಮದ್ ರುಹುಲ್ಲಾನನ್ನು ವಿಚಾರಣೆಯ ನಿಮಿತ್ತ ಮಂಗಳೂರಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

ಬಂಧನದ ಬೆನ್ನಲ್ಲೆ, ಮಹಮದ್ ರುಹುಲ್ಲಾ ಬೆಂಗಳೂರಿಗೆ ಬಂದಿರುವ ಉದ್ದೇಶವೇನು?? ಎಂಬ ಪ್ರಶ್ನೆ ಖಾಕಿ ಪಡೆಯನ್ನು ಕಾಡುತ್ತಿದೆ. ಇದರ ನಡುವೆಯೇನಾದರು ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಮಾಡಲು ಪ್ಲ್ಯಾನ್ ಮಾಡಿದ್ದಾನಾ ಎನ್ನುವ ಅನುಮಾನ ದಟ್ಟವಾಗಿ ಕಾಡುತ್ತಿದೆ.ಮಹಮದ್ ರುಹುಲ್ಲಾ ಯಾರನ್ನ ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾನೆ , ಅಲ್ಲದೆ, ಶಾರೀಕ್ ಗೂ ರುಹುಲ್ಲಾಗೂ ಏನ್ ಸಂಬಂಧ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ರುಹುಲ್ಲಾ ಬ್ಯಾಗ್ರೌಂಡ್, ಮನೆ ವಿಳಾಸ ಸೇರಿ ಹಲವು ಮಾಹಿತಿಗಳನ್ನು ಮೈಸೂರಿನಲ್ಲಿ ವಿಶೇಷ ತಂಡ ಮಾಹಿತಿ ಕಲೆ ಹಾಕಿದೆ.

ಪೊಲೀಸರು ಈತನನ್ನು ವಶಕ್ಕೆ ಪಡೆದ ವೇಳೆ ಯಾವುದೋ ಕಾರ್ಯಕ್ರಮ ಇತ್ತು ಹಾಗಾಗಿ ಬಂದಿದ್ದೇ ಅಂದಿದ್ದಾನೆ. ಆದ್ರೆ ಪೊಲೀಸರು ಈ ಕುರಿತು ಚೆಕ್ ಮಾಡಿದಾಗ ಯಾವ ಕಾರ್ಯಕ್ರಮವೂ ಇರಲಿಲ್ಲ, ಹೀಗಾಗಿ ಪೊಲೀಸರಲ್ಲಿ ಹಲವು ಅನುಮಾನ ಮೂಡಿದೆ.

ಇತ್ತ ಮೈಸೂರಿನಲ್ಲಿಯೂ ಕಮಿಷನರ್ ತನಿಖೆ ಕೈಗೊಂಡಿದ್ದರು. ಶಿವಮೊಗ್ಗದಲ್ಲಿ ನಡೆದ ಗಲಾಟೆಯಲ್ಲಿ ಜಬಿವುಲ್ಲಾ ಎಂಬಾತನನ್ನು ಅರೆಸ್ಟ್ ಮಾಡಲಾಗಿದ್ದು, ಈ ವೇಳೆ ತಪ್ಪಿಸಿಕೊಂಡಿದ್ದ ಶಾರೀಕ್ ಕೊಯಂಬತ್ತೂರು ಮತ್ತು ಮೈಸೂರಿನಲ್ಲಿ ವಾಸವಾಗಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

2020ರಲ್ಲಿ ಈಸ್ಟ್ ಪೊಲೀಸ್ ಮತ್ತು ನಾರ್ತ್ ಪೊಲೀಸ್ ನಲ್ಲೂ ಕೇಸ್ ದಾಖಲಾಗಿತ್ತು. ಶಾರೀಕ್, ಮಾಜ್ ,ಯಾಸಿನ್, ಅರಾಫತ್ ಎಂಬುವರ ವಿರುದ್ಧ ಕೇಸ್ ಆಗಿದ್ದು. ಅರಾಫತ್ ಸದ್ಯ ದುಬೈನಲ್ಲಿದ್ದರೆ, ಮೈಸೂರು ಮನೆಯಲ್ಲಿಯೇ ಸ್ಫೋಟಕ ತಯಾರಿಕೆ ಮಾಡಿಕೊಂಡು ಬ್ಲಾಸ್ಟ್​ ಮಾಡಲು ಸಂಚು ರೂಪಿಸಿದ್ದ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಆದರೆ, ಈ ಯಾವ ವಿಚಾರ ಮನೆ ಮಾಲೀಕ ಮೋಹನ್​ಗೆ ಗೊತ್ತಿರಲಿಲ್ಲ ಅಲ್ಲದೆ, ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಮೈಸೂರಿನಿಂದ ಮಡಿಕೇರಿ ಮೂಲಕ ಮಂಗಳೂರಿಗೆ ಒಂದು ವಾರದ ಹಿಂದೆ ಬಂದು ತಿರುಗಾಡಿದ್ದಾನೆ ಎನ್ನಲಾಗಿದೆ. ಪೊಲೀಸ್ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಆರೋಪಿಗಳ ವಿಚಾರಣೆಯ ಬಳಿಕವಷ್ಟೆ ಸತ್ಯ ಬಯಲಾಗಬೇಕಾಗಿದೆ.

Leave A Reply

Your email address will not be published.