ವಿಚಿತ್ರ ಆದರೂ ಸತ್ಯ | ಈ ಗ್ರಾಮದಲ್ಲಿ ಯಾರೂ ನಾನ್ ವೆಜ್ ತಿನ್ನಲ್ಲ | ತಿಂದರೆ ಇದು ಖಂಡಿತ ನಡೆಯುತ್ತೆ!

ಜಗತ್ತು ಎಷ್ಟೇ ಮುಂದುವರಿದರೂ, ಕಾಲ ಬದಲಾದರೂ ಕೂಡ ಜನರು ಇಂದಿಗೂ ವಿಚಿತ್ರ ಮೂಢನಂಬಿಕೆಗಳನ್ನು ಆಚರಿಸುತ್ತಾರೆ ಎಂದರೆ ವಿಪರ್ಯಾಸವೇ ಸರಿ. ಕೆಲವೊಂದು ಆಚರಣೆಗಳು ಸಾಮಾನ್ಯವಾಗಿದ್ದರೆ ಇನ್ನೂ ಕೆಲವು ಅಚ್ಚರಿ ಪಡುವಂತದ್ದಾಗಿದೆ. ಅಂತಹದ್ದೆ ಅಚ್ಚರಿ ಪಡುವ ಆಚರಣೆ ಒಡಿಶಾದ ಗ್ರಾಮವೊಂದರಲ್ಲಿ ನಡೆದುಕೊಂಡು ಬರುತ್ತಿದೆ.

ಇನ್ನು ಈ ಆಚರಣೆ ಏನೆಂದರೆ, ಬೆಂಟಾಸಾಲಿಯಾ ಗ್ರಾಮದಲ್ಲಿ ಯಾರೊಬ್ಬರು ಕೂಡ ಮಾಂಸಾಹಾರ ತಿನ್ನುವುದಿಲ್ಲ. ನಾನ್ ವೆಜ್ ಸೇವಿಸಿದರೆ ದುರಾದೃಷ್ಟ ಬೆನ್ನಿಗಂಟುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ನಾನ್ ವೆಜ್ ಸೇವಿಸಿದ್ದಲ್ಲಿ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ ಅಥವಾ ಒಂದು ನಿರ್ದಿಷ್ಟ ಅವಧಿಯವರೆಗೆ ಕೆಟ್ಟ ಸಮಯವನ್ನು ಎದುರಿಸಬೇಕಾಗುತ್ತದೆ ಎಂಬುದು ಇಲ್ಲಿನ ಜನರ ಬಲವಾದ ನಂಬಿಕೆ.

ಈ ನಂಬಿಕೆ ಎಷ್ಟು ಪ್ರಬಲವಾಗಿದೆ ಎಂದರೆ ಬೆಂಟಾಸಾಲಿಯಾದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿ ಕೂಡ ಸಸ್ಯಾಹಾರಿ ಆಹಾರವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಊಟದಲ್ಲಿಯೂ ಮೊಟ್ಟೆಯ ಬದಲು ಬಾಳೆಹಣ್ಣು ಕೊಡಲಾಗುತ್ತದೆ.

ಗ್ರಾಮದ ನಿವಾಸಿ ತಾರಾಬತಿ ವಾಶ್ ಅವರು ತಮ್ಮ ಪೂರ್ವಜರ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇವರು ಬಹು ದಿನದಿಂದಲೂ ಮಾಂಸಾಹಾರವನ್ನು ತ್ಯಜಿಸಿರುವುದಾಗಿ ಹೇಳಿದ್ದು, ಉದ್ಯೋಗ ಅಥವಾ ಉನ್ನತ ವ್ಯಾಸಂಗಕ್ಕಾಗಿ ಹಳ್ಳಿಯಿಂದ ಹೊರಗೆ ಕಾಲಿಡುವ ಮಕ್ಕಳು ಈ ಸಂಪ್ರದಾಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಕುಟುಂಬದಲ್ಲಿ ಮದುವೆ ಅಥವಾ ಯಾವುದೇ ರೀತಿಯ ಕಾರ್ಯಕ್ರಮವಿದ್ದರೂ ಮಾಂಸಾಹಾರ ಸೇವಿಸುವುದಿಲ್ಲ. ಈ ಗ್ರಾಮದಲ್ಲಿ ವಾಸಿಸುವ ಪ್ರಾಣಿಗಳು, ಬೆಕ್ಕುಗಳು ಅಥವಾ ನಾಯಿಗಳು ಕೂಡ ಸಸ್ಯಾಹಾರಿಗಳು ಎಂದು ಹೇಳಿದರು.

ನಾವು ಗೋಪಾಲ್ ವೈಷ್ಣವ್ ವಂಶಕ್ಕೆ ಸೇರಿದವರು ನಾವು ಅಂತಹ ಆಹಾರವನ್ನು ಸೇವಿಸಿದರೆ, ನಮ್ಮ ಕಣ್ಣು ಮತ್ತು ಕಿವಿಗಳು ನಾಶವಾಗುತ್ತವೆ ಮತ್ತು ಯಾರಾದರೂ ನಮ್ಮ ಗ್ರಾಮಕ್ಕೆ ಯಾವುದೇ ರೀತಿಯ ಮಾಂಸಾಹಾರಿ ವಸ್ತುಗಳನ್ನು ತಂದರೆ ಅವರಿಗೆ ಹಾವು ಕಚ್ಚುತ್ತದೆ. ನೀವು ಕೂಡ ಅದನ್ನು ಪರೀಕ್ಷಿಸಬಹುದು ನಮ್ಮ ಅಡುಗೆಮನೆಯಲ್ಲಿ ಯಾವುದೇ ರೀತಿಯ ವಿಚಲನ ಕಂಡುಬಂದರೆ ನಿಜವಾಗಿಯೂ ಹಾವು ಕಾಣಿಸಿಕೊಳ್ಳುತ್ತದೆ ಎಂದು ಈ ಗ್ರಾಮದ ನಿವಾಸಿ ಶಶಿ ಪ್ರವದಶ್ ಈ ಸಂಗತಿಯನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಹಾಗೂ ನಾವು ರಾಧಾ ಕೃಷ್ಣನ ಭಕ್ತರು. ವರ್ಷವಿಡೀ ಹವನಗಳು, ಪೂಜೆಗಳು ಮತ್ತು ಕೀರ್ತನೆಗಳನ್ನು ನಡೆಸುತ್ತೇವೆ ನಾವು ನಮ್ಮ ಹೆಣ್ಣು ಮಕ್ಕಳನ್ನು ಬೇರೆ ಕುಲಕ್ಕೆ ಮದುವೆಗೆ ಕೊಡುವುದಿಲ್ಲ ಮತ್ತು ಅಷ್ಟೇ ಅಲ್ಲದೆ, ನಮ್ಮ ಹಳ್ಳಿಯಲ್ಲಿ ಬೇರೆ ಸಮುದಾಯದ ಹುಡುಗಿ ಮದುವೆಯಾದರೆ ಅವಳು ನಮ್ಮ ಸಂಪ್ರದಾಯಗಳನ್ನು ಅನುಸರಿಸುತ್ತಾಳೆ. ಇನ್ನೂ ಈ ಸಂಪ್ರದಾಯವನ್ನು ಈ ಗ್ರಾಮದ ಪ್ರಾರಂಭದಿಂದಲೂ ನಾವೆಲ್ಲರೂ ಅನುಸರಿಸುತ್ತಿದ್ದೇವೆ ಎಂದು ಗ್ರಾಮದ ಅರ್ಚಕ ಭ್ರಮರ್ ಡಾಸ್ ಹೇಳಿದ್ದಾರೆ

Leave A Reply

Your email address will not be published.