ಈ ಹಳ್ಳಿಗೆ ಬಟ್ಟೆ ಧರಿಸಿ ಬಂದರೆ ನೋ ಎಂಟ್ರಿ |ಬೆತ್ತಲೆಯಾಗಿಯೇ ತಿರುಗೋ ಅವಕಾಶವಿರೋ ಈ ಹಳ್ಳಿ ಯಾವುದು?

ಪ್ರಪಂಚದಲ್ಲಿ ಜನರು ಬಗೆ ಬಗೆಯ ಜೀವನಶೈಲಿ, ಸಂಸ್ಕೃತಿಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಇದರ ಮಧ್ಯೆ ಹಿಂದಿನಿಂದ ಬಂದ ಸಂಪ್ರದಾಯ ಮತ್ತು ಆಚರಣೆಗಳನ್ನೂ ಅನುಸರಿಸುತ್ತಾರೆ. ಅದರಲ್ಲೂ ಈ ಶತಮಾನದಲ್ಲಿಯೂ ನಂಬಲಸಾಧ್ಯವಾದ ಮೂಡನಂಬಿಕೆ, ಸಾಂಪ್ರದಾಯವನ್ನು ಕೂಡ ಪಾಲಿಸುತ್ತಾರೆ ಎಂದರೆ ಆಶ್ಚರ್ಯವೇ ಸರಿ. ಅಂತಹದ್ದೇ ವಿಚಿತ್ರವಾದ ಬಟ್ಟೆ ಧರಿಸದೇ ನಗ್ನವಾಗಿರುವ ಆಚರಣೆ ಸ್ಪೀಲ್‌ಪ್ಲಾಟ್ಜ್‌ ಎಂಬ ಹಳ್ಳಿಯಲ್ಲಿದೆ.

ಇನ್ನೂ ಈ ವಿಚಿತ್ರವಾದ ಹಳ್ಳಿ ಎಲ್ಲಿದೆ ಎಂದರೆ, UK ಯ ಹರ್ಟ್‌ಫೋರ್ಡ್‌ ಶೈರ್‌ನಲ್ಲಿರುವ ಸ್ಪೀಲ್‌ಪ್ಲಾಟ್ಜ್‌ನಲ್ಲಿದೆ. ಈ ಗ್ರಾಮದ ಜನರು ಬಟ್ಟೆಯನ್ನು ಧರಿಸುವುದಿಲ್ಲ. ಅಷ್ಟೇ ಅಲ್ಲದೆ, ಹೊರಗಿನಿಂದ ಬರುವ ಜನರು ಕೂಡ ಬಟ್ಟೆ ಧರಿಸುವಂತಿಲ್ಲ. ಒಂದು ವೇಳೆ ಬಟ್ಟೆ ಧರಿಸಿ ಬಂದರೆ ಅವರಿಗೆ ನೋ ಎಂಟ್ರಿ ಅಂತಾರೆ ಅಲ್ಲಿನ ಭಾಗದ ಜನರು.

ಯುಕೆಯ ಈ ಹರ್ಟ್‌ಫೋರ್ಡ್‌ಶೈರ್‌ನಲ್ಲಿ ಇರುವ ಸ್ಪೀಲ್‌ಪ್ಲಾಟ್ಜ್‌ ಎಂಬ ಗ್ರಾಮವನ್ನು ಜನರು ‘ರಹಸ್ಯ ಗ್ರಾಮ’ ಎಂದೇ ಕರೆಯುತ್ತಾರೆ. ಇನ್ನೂ ಇಲ್ಲಿನ ಜನರು ಬಟ್ಟೆ ಧರಿಸದೇ ಇರಲು ಕಾರಣಗಳಿವೆ. ಅದೇನೆಂದರೆ, ದೇವರು ಈ ಜಗತ್ತಿಗೆ ಕಳುಹಿಸುವಾಗ ಬಟ್ಟೆಯಿಲ್ಲದೆ ಕಳುಹಿಸಿದ್ದಾನೆ, ಬಟ್ಟೆ ಕೇವಲ ಸಾರ್ವಜನಿಕ ಪ್ರದರ್ಶನದ ವಸ್ತುವಾಗಿದೆ ಎಂಬುದು ಅವರ ಬಲವಾದ ನಂಬಿಕೆ.

ಈ ಹಳ್ಳಿಯನ್ನು 1929 ರಲ್ಲಿ ಚಾರ್ಲ್ಸ್‌ ಮೇಕ್‌ಕಾಸ್ಕಿ ಸ್ಥಾಪಿಸಿದರು. ಅವರ ಪ್ರಕಾರ, ಪ್ರಕೃತಿಯಲ್ಲಿ ವಾಸಿಸುವ ಜನರು ಮತ್ತು ನಗರದಲ್ಲಿ ವಾಸಿಸುವ ಜನರಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದು ನಂಬಿದ್ದರು. ಸುಮಾರು 90 ವರ್ಷದಿಂದ ವಾಸಿಸುತ್ತಿರುವ ಜನರು ಇಲ್ಲಿದ್ದಾರೆ. ಗಂಡು, ಹೆಣ್ಣು ಎಂಬ ಯಾವುದೇ ಭೇದವಿಲ್ಲದೆ, ಯಾವುದೇ ಮುಜುಗರವಿಲ್ಲದೆ ಜನರು ಈ ಗ್ರಾಮದಲ್ಲಿ ನಗ್ನವಾಗಿ ಓಡಾಡುತ್ತಾರೆ.

ಇನ್ನೂ, ಬೆತ್ತಲೆಯಾಗಿ ಓಡಾಡುವ ಈ ಗ್ರಾಮ ಬಡವರ ಗ್ರಾಮ ಎಂದೆನಿಸಿರಬಹುದು ಆದರೆ ಅಲ್ಲವೇ ಅಲ್ಲ! ಇದೊಂದು ಶ್ರೀಮಂತ ಗ್ರಾಮ , ಸಕಲ ಸೌಕರ್ಯಯುತ ಮತ್ತು ಆಧುನಿಕ ಜೀವನದ ಎಲ್ಲಾ ಸೌಲಭ್ಯಗಳಿರುವ ಐಷಾರಾಮಿ ಮನೆಗಳು ಇಲ್ಲಿವೆ. ಮನೆಯೊಳಗೆ ಈಜುಕೊಳಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಕೂಡ ಇವೆ.

ಬಟ್ಟೆ ಧರಿಸದೆ ನಗ್ನವಾಗಿ ಓಡಾಡುವ ಈ ಜನರು ಕಣ್ಣಿನ ರಕ್ಷಣೆಗಾಗಿ ಸನ್‌ ಗ್ಲಾಸ್‌ಗಳನ್ನು ಬಳಸುತ್ತಾರೆ. ಕುತ್ತಿಗೆಗೆ ಚಿನ್ನದ ಆಭರಣಗಳು, ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ನಗರವಾಸಿಗಳಂತೆ ಈ ಗ್ರಾಮದ ಜನರು ಕೂಡ ಹೆಚ್ಚು ಐಷಾರಾಮಿತನವನ್ನು ಇಷ್ಟ ಪಡುತ್ತಾರೆ. ಆದರೆ ಮೈಮೇಲೆ ಒಂದು ತುಂಡು ಬಟ್ಟೆಯನ್ನು ಧರಿಸುವುದಿಲ್ಲ ಅಷ್ಟೇ.

Leave A Reply