SBI e-Mudra ಸಾಲದ ವಿವರವಾದ ಮಾಹಿತಿ ಇಲ್ಲಿದೆ | ಅರ್ಜಿ ಹಾಕುವುದು ಹೇಗೆ? ವಿವರ ತಿಳಿಯಿರಿ

ದೇಶದಲ್ಲಿ ಸಣ್ಣ ಉದ್ದಿಮೆಗಳ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಸ್ವಂತ ಉದ್ಯೋಗಿಗಳಿಗೆ Mudra (ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ) ಯೋಜನೆಯ ಅಡಿಯಲ್ಲಿ ವಿವಿಧ ಬ್ಯಾಂಕು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲಗಳನ್ನು ಒದಗಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅರ್ಹರಿಗೆ ೧೦ ಲಕ್ಷ ರೂವರೆಗೂ ಸಾಲ ನೀಡುತ್ತಿದ್ದೂ, ಇದೀಗ ಎಸ್‌ಬಿಐನ ಇ-ಮುದ್ರಾ ಸಾಲಗಳು ಆನ್‌ಲೈನ್‌ನಲ್ಲೇ ಲಭ್ಯ ಇದೆ. ಸಾಲದ ಕಂತುಗಳನ್ನು ಕಟ್ಟಲು ೫ ವರ್ಷಗಳವರೆಗೆ ಅವಕಾಶ ನೀಡಲಾಗುತ್ತದೆ.

ನಿಮ್ಮ ಉದ್ದಿಮೆ ಬೆಳೆಸಲು ಬೇಕಾದ ಅಗತ್ಯವಾದ ವೆಚ್ಚಕ್ಕೆ ಈ ಸಾಲವನ್ನು ಬಳಸಬಹುದು. ಇ ಮುದ್ರಾ ಯೋಜನೆ ಅಡಿ ಮ್ಯಾನುಫ್ಯಾಕ್ಚರಿಂಗ್ (ಉತ್ಪಾದನೆ), ಸರ್ವಿಸ್ ಮತ್ತು ಟ್ರೇಡಿಂಗ್ ಕ್ಷೇತ್ರದಲ್ಲಿ ಉದ್ದಿಮೆ ನಡೆಸುವ ವ್ಯಕ್ತಿಗಳು, ಮತ್ತು ಸಣ್ಣ ಸಂಸ್ಥೆಗಳು ಸಾಲಗಳನ್ನು ಪಡೆಬಹುದು.

ಎಸ್‌ಬಿಐನಂತಹ ಕಮರ್ಷಿಯಲ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮುದ್ರಾ ಯೋಜನೆಯಲ್ಲಿ ಸಾಲಗಳನ್ನು ವಿತರಿಸುತ್ತವೆ. ಮಹಿಳಾ ಉದ್ಯಮಶೀಲತೆ ಯೋಜನೆ ಮೂಲಕವೂ ಸಾಲ ಪಡೆಯಬಹುದು.

ಮುಖ್ಯವಾಗಿ ಬ್ಯಾಂಕ್‌ನಲ್ಲಿ ಎಸ್‌ಬಿ ಅಥವಾ ಕರೆಂಟ್ ಅಕೌಂಟ್ ಹೊಂದಿದ್ದರೆ ಮಾತ್ರ ಮುದ್ರಾ ಲೋನ್ ಪಡೆಯಬಹುದು. ಅರ್ಜಿದಾರರು ಉತ್ಪಾದನೆ ಅಥವಾ ಸೇವಾ ಮೊದಲಾದ ಕೃಷಿಯೇತರ ಕ್ಷೇತ್ರದಲ್ಲಿ ಉದ್ದಿಮೆ ಹೊಂದಿರಬೇಕು ಅಥವಾ ಸ್ವಂತ ಉದ್ಯೋಗ ಮಾಡುತ್ತಿರಬೇಕು. ಕನಿಷ್ಠ ೨ ವರ್ಷವಾದರೂ ಒಂದೇ ಸ್ಥಳದಲ್ಲಿ ನೆಲಸಿರಬೇಕು. .

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳಾದ ಅರ್ಜಿ ನಮೂನೆ ಮತ್ತು ಪಾಸ್‌ಪೋರ್ಟ್ ಫೋಟೋಗಳು , ಕೆವೈಸಿಗಾಗಿ ಪಾಸ್‌ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ದಾಖಲೆಗಳನ್ನು ಹೊಂದಿರಬೇಕು. ಎಸ್‌ಬಿಐನ ಸೇವಿಂಗ್ಸ್ ಬ್ಯಾಂಕ್ ಖಾತೆ ಮತ್ತು ಚಾಲ್ತಿ ಖಾತೆಯ ನಂಬರ್, ನಿಮ್ಮ ವ್ಯವಹಾರದ ವ್ಯಾಲಿಡೇಶನ್ ಅಂದರೆ ನಿಮ್ಮ ಉದ್ಯಮದ ಹೆಸರು, ವಿಳಾಸ ಮತ್ತು ಆರಂಭ ದಿನಾಂಕ, ನಿಮ್ಮ ಸಮುದಾಯದ ವಿವರ (ಎಸ್‌ಸಿ / ಎಸ್‌ಟಿ / ಒಬಿಸಿ / ಅಲ್ಪಸಂಖ್ಯಾತ / ಜನರಲ್ ಹೀಗೆ ಯಾವ ಕೆಟಗರಿ ಎಂಬ ವಿವರ) ಜಿಎಸ್‌ಟಿಎನ್ ಮತ್ತು ಉದ್ಯೋಗ್ ಆಧಾರ್ ಬೇಕು. ನಿಮ್ಮ ವ್ಯವಹಾರದ ನೊಂದಣಿ ವಿವರ ಇರಬೇಕು. ನಿಮ್ಮ ಉದ್ದಿಮೆಯ ಅಸ್ತಿತ್ವಕ್ಕೆ ಸಾಕ್ಷಿಯಾಗಿ ದಾಖಲೆಗಳು ನಿಮ್ಮ ಬಳಿ ಇರಬೇಕು.

ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ನೀಡಲಾಗಿದೆ.
ಹಂತ 1:-ನೀವು ಎಸ್‌ಬಿಐನಲ್ಲಿ ಖಾತೆ ಹೊಂದಿಲ್ಲದಿದ್ದರೆ ಮೊದಲು ಅಕೌಂಟ್ ಓಪನ್ ಮಾಡಿ. ಎಸ್‌ಬಿಐನ ಇ-ಮುದ್ರಾ ಪೋರ್ಟಲ್‌ಗೆ ಭೇಟಿ ಕೊಡಿ.
ಹಂತ 2:- ಅದರಲ್ಲಿ ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಆಯ್ಕೆ ಮಾಡಿ
ಹಂತ 3:- ನಂತರ ‘ಪ್ರೊಸೀಡ್’ ಬಟನ್ ಕ್ಲಿಕ್ ಮಾಡಿ , ಇ-ಕೆವೈಸಿ ಭರ್ತಿ ಮಾಡಿ. ಒಟಿಪಿ ಮೂಲಕ ಇ-ಸೈನ್ ಪೂರ್ಣಗೊಳಿಸಿ. ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ವಿವರಗಳನ್ನು ನಮೂದಿಸಿ.
ಹಂತ 4:- ದಾಖಲೆ ಸಲ್ಲಿಸುವಿಕೆ ಇತ್ಯಾದಿ ಪೂರ್ಣಗೊಂಡ ಬಳಿಕ ನಿಮಗೆ ಲೋನ್ ಅಪ್ರೂವಲ್ ಆಗಿರುವ ಮೆಸೇಜ್ ಬರುತ್ತದೆ.
ಹಂತ 5:- ಈ ಸಂದೇಶ ಬಂದ 30 ದಿನದೊಳಗೆ ನೀವು ಮತ್ತೆ ಇ-ಮುದ್ರಾ ಪೋರ್ಟಲ್‌ಗೆ ಹೋಗಿ ಬಾಕಿ ಇರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Leave A Reply

Your email address will not be published.