ಕರಿಬೇವಿನ ಚಹಾದಲ್ಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ.

ಇಂತಹ ಉತ್ತಮವಾದ ಆಹಾರ ತಂದುಕೊಡುವಲ್ಲಿ ಕರಿಬೇವು ಉತ್ತಮ ಪಾತ್ರವನ್ನು ವಹಿಸುತ್ತದೆ. ಹೌದು. ಮನುಷ್ಯನ ಬುದ್ಧಿವಂತಿಕೆ, ನೆನೆಪುಶಕ್ತಿ ಹೆಚ್ಚಿಸುವಲ್ಲಿ ಕರಿಬೇವಿನ ಸೊಪ್ಪು ಮಹತ್ವ ಪಡೆದಿದೆ. ಹೆಚ್ಚು ಚುರುಕುತನ ಮತ್ತು ಒಳ್ಳೆಯ ನೆನಪಿನ ಶಕ್ತಿ ಬೇಕು ಎನ್ನುವವರು ಕರಿಬೇವಿನ ಸೊಪ್ಪಿನ ಚಹಾ ಮಾಡಿ ಕುಡಿಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬಿಪಿ ಇರುವವರು ಮಾತ್ರ ವೈದ್ಯರ ಸಲಹೆ ಪಡೆದುಕೊಂಡೇ ಮುಂದುವರಿಯಬೇಕು.

ಆದ್ರೆ, ಕೆಲವೊಂದಷ್ಟು ಜನ ಕರಿಬೇವಿನ ಸೊಪ್ಪಿನ ಬಳಕೆಯಿಂದ ನಿಜವಾಗಲೂ ಮನುಷ್ಯನ ಬುದ್ಧಿ ಚುರುಕಾಗುತ್ತದೆಯೇ ಎಂದು ಯೋಚಿಸುತ್ತಾರೆ. ಆದ್ರೆ, ಈ ಬಗ್ಗೆನೂ ಅಧ್ಯಯನ ನಡೆದಿದೆ. ಹೌದು. ಮೊದಲು ಇಲಿಗಳ ಮೇಲೆ ಈ ಸಂಶೋಧನೆ ನಡೆದಿತ್ತು ಮತ್ತು ಫೈಟೋಥೆರಪಿ ರಿಸರ್ಚ್‌ನಲ್ಲಿ ವರದಿ ಪ್ರಕಟ ಮಾಡಲಾಗಿತ್ತು. ಕರಿಬೇವಿನ ಸೊಪ್ಪು ಸೇವನೆ ಮಾಡಿದ ಇಲಿಗಳಲ್ಲಿ ಆಮ್ನೇಶಿಯ ಕಡಿಮೆಯಾಗಿತ್ತು. ಅದೇ ರೀತಿ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ.

ನೆನಪಿನ ಶಕ್ತಿಯ ಕೊರತೆ ಮತ್ತು ಹಾಳಾಗುವ ಮೆದುಳಿನ ಜೀವಕೋಶಗಳನ್ನು ಸರಿಪಡಿಸುವ ಜೊತೆಗೆ ಅಲ್ಜಿಮರ್ ಮತ್ತು ಡೆಮನ್ಶಿಯಾ ರೋಗಗಳನ್ನು ನಿಯಂತ್ರಣ ಮಾಡುವ ಶಕ್ತಿ ಕರಿಬೇವಿನ ಸೊಪ್ಪಿಗೆ ಇದೆ ಎನ್ನಲಾಗಿದೆ. ಹೀಗಾಗಿ ಬೆಳಗ್ಗೆ ಎದ್ದು ಕರಿಬೇವಿನ ಚಹಾ ಮಾಡಿ ಕುಡಿಯುವುದು ಒಳ್ಳೆಯದು. ಹಾಗಿದ್ರೆ ಬನ್ನಿ ಚಹಾ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ..

ಕರಿ ಬೇವು ಎಲೆಗಳು, ಎರಡು ಕಪ್ ನೀರು, ಬೆಲ್ಲ, ಒಂದು ಚಿಟಿಕೆ ಜೀರಿಗೆ, ಸಣ್ಣ ಗಾತ್ರದ ಶುಂಠಿ, ಸ್ವಲ್ಪ ಕಪ್ಪು ಉಪ್ಪು ತೆಗೆದುಕೊಳ್ಳಿ. ಮೊದಲಿಗೆ ಜೀರಿಗೆಯನ್ನು ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ಪ್ಯಾನ್ ತೆಗೆದುಕೊಂಡು ಅದರಲ್ಲಿ ಎರಡು ಕಪ್ ನೀರು ಹಾಕಿ, ಕರಬೇವಿನ ಸೊಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಬೆಲ್ಲ ಸೇರಿಸಿ ಸ್ಟವ್ ಆರಿಸಿ ಐದು ನಿಮಿಷ ಹಾಗೆ ಬಿಡಬೇಕು. ಇದನ್ನು ಕಪ್‌ಗೆ ಹಾಕಿಕೊಂಡು ಅದಕ್ಕೆ ಕಪ್ಪು ಉಪ್ಪು ಸೇರಿಸಬೇಕು. ಈಗ ಜೀರಿಗೆ ಪೌಡರ್ ಸೇರಿಸಬೇಕು.ಈ ಚಹವನ್ನು ಬಿಸಿ ಇರುವಾಗ ಕುಡಿಯುವುದು ಒಳ್ಳೆಯದು. ​ಬೆಲ್ಲ, ಶುಂಠಿ ಮತ್ತು ಜೀರಿಗೆ ಇಷ್ಟಪಡದವರು ಕೇವಲ ಕರಿಬೇವಿನ ಸೊಪ್ಪಿನಿಂದ ಚಹಾ ತಯಾರು ಮಾಡಿ ಕುಡಿಯಬಹುದು. ಈ ಸುಲಭ ಆರೋಗ್ಯ ಪಡೆಯುವ ಚಹಾ ನೀವೂನು ಕುಡಿಯಿರಿ ಆರೋಗ್ಯ ವೃದ್ಧಿಸಿಕೊಳ್ಳಿ..

Leave A Reply