ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉದ್ಯೋಗವಕಾಶ | ಮಾಸಿಕ 48,400 ರೂ.ವೇತನ

Chikkaballapur DC Office Recruitment 2022: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ವಿಪತ್ತು ನಿರ್ವಹಣಾ ಸಲಹೆಗಾರ(Disaster Management Consultant) ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು(Local Candidates) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.
ಸಂಸ್ಥೆ : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ
ಹುದ್ದೆ : ವಿಪತ್ತು ನಿರ್ವಹಣಾ ಸಲಹೆಗಾರ
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ
ವೇತನ ಮಾಸಿಕ : ₹48,400
ಸ್ಥಳ : ಚಿಕ್ಕಬಳ್ಳಾಪುರ
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಕೆ ಬಗೆ : ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 14/11/2022
ಅರ್ಜಿ ಸಲ್ಲಿಸಲು ಕೊನೆ ದಿನ : 28/11/2022

ಶೈಕ್ಷಣಿಕ ಅರ್ಹತೆ:
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ವಿಜ್ಞಾನ/ಸಮಾಜ ವಿಜ್ಞಾನ/ಗ್ರಾಮೀಣಾಭಿವೃದ್ಧಿ/ಪರಿಸರ ವಿಜ್ಞಾನ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನಿಯಾವಳಿಗಳ ಪ್ರಕಾರ ಇರಬೇಕು.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇಲ್ಲ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08156-277001 ಗೆ ಕರೆ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.