Amazefit Pop 2 : ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ ಅಮೇಜ್​​​ಫಿಟ್​ ಸ್ಮಾರ್ಟ್​ವಾಚ್! ನವೆಂಬರ್​ 22 ರಿಂದ ಬಿಡುಗಡೆ

ಇದೀಗ ಅಮೇಜ್​​​ಫಿಟ್ ಸ್ಮಾರ್ಟ್​​​ವಾಚ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ. ಇದು ಈ ಬಾರಿ ಅಮೇಜ್​​ಫಿಟ್​ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಹೊಸ ವರ್ಷನ್​ನ ಸ್ಮಾರ್ಟ್​ವಾಚ್​ ಆಗಿದೆ. ಹಾಗೇ ಇದು ಅಮೇಜ್​​​ಫಿಟ್​ ಪಾಪ್ 2 ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

ಸದ್ಯ ಸ್ಮಾರ್ಟ್ ವಾಚ್​​ನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಕಂಪನಿಗಳು ಕೂಡ ಹೊಸ ಹೊಸ ಫೀಚರ್ಸ್ನೊಂದಿಗೆ ಸ್ಮಾರ್ಟ್​ವಾಚ್​​ಗಳನ್ನು ಲಾಂಚ್ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗೆ ಅಮೇಜ್​​ಫಿಟ್​​ ಕಂಪನಿಯು ಭಾರತದಲ್ಲಿ ಅಮೇಜ್​ಫಿಟ್​​ ಪಾಪ್ 2 ಹೆಸರಿನ ಮತ್ತೊಂದು ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ತನ್ನ ಪ್ರತಿಸ್ಪರ್ಧಿ ಕಂಪನಿಗಳಾದ ನಾಯ್ಸ್, ಫೈರ್ ಬೋಲ್ಟ್ ಮತ್ತು ಬಾಟ್‌ಗಳಿಂದ ಬಿಡುಗಡೆಯಾದ ಸ್ಮಾರ್ಟ್‌ವಾಚ್ ಮಾದರಿಗಳೊಂದಿಗೆ ಸ್ಪರ್ಧಿಸಲು ಇದು ಮಾರುಕಟ್ಟೆಯಲ್ಲಿ ಸಜ್ಜಾಗಿ ನಿಂತಿದೆ. ಇನ್ನೂ ಈ ಅಮೇಜ್​​​ಫಿಟ್​ ಸ್ಮಾರ್ಟ್​ವಾಚ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಈ ಅಮೇಜ್​ಫಿಟ್​ ಪಾಪ್​ 2 ಬೆಲೆ ಹೀಗಿದೆ, ಈ ಸ್ಮಾರ್ಟ್ ವಾಚ್ ಅನ್ನು ಭಾರತೀಯ ಮಾರುಕಟ್ಟೆಗಳಲ್ಲಿ 3999 ರೂಪಾಯಿಯ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಆದರೆ ಬಿಡುಗಡೆಯ ಕೊಡುಗೆಯ ಭಾಗವಾಗಿ ಈ ಸ್ಮಾರ್ಟ್ ವಾಚ್ ಅನ್ನು 3299 ರೂಪಾಯಿಗೆ ಖರೀದಿಸಬಹುದಾಗಿದೆ. ಹಾಗೂ ಇದು ಕಪ್ಪು ಮತ್ತು ಗುಲಾಬಿಯಂತಹ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಸದ್ಯ ನೀವು ಸುಮಾರು 700 ರೂಪಾಯಿಯ ರಿಯಾಯಿತಿಯೊಂದಿಗೆ ಈ ಸ್ಮಾರ್ಟ್ ವಾಚ್ ಅನ್ನು ಪಡೆಯಬಹುದಾಗಿದೆ.

ಇನ್ನು ಈ ಸ್ಮಾರ್ಟ್ ವಾಚ್ ಅನ್ನು ಮೆಟಾಲಿಕ್ ಮಿಡಲ್ ಫ್ರೇಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು 150 ಕ್ಕೂ ಹೆಚ್ಚು ವಾಚ್‌ಫೇಸ್‌ಗಳೊಂದಿಗೆ 1.78-ಇಂಚಿನ HD AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ರಕ್ತ-ಆಮ್ಲಜನಕ (spO2) ಮಾಪನ, ಹೃದಯ ಬಡಿತ, 100+ ಸ್ಪೋರ್ಟ್ ಮೋಡ್ ಟ್ರ್ಯಾಕಿಂಗ್‌ನಂತಹ ಹಲವು ಫೀಚರ್ಸ್​​ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, 24 ಗಂಟೆಗಳ ಕಾಲ ಹೃದಯ ಬಡಿತದ ಮೇಲ್ವಿಚಾರಣೆಯನ್ನು ಸಹ ಮಾಡುತ್ತಿರುತ್ತದೆ.

ಹಾಗೂ ಈ ಸ್ಮಾರ್ಟ್‌ವಾಚ್‌ನಲ್ಲಿ ಮೈಕ್ ಮತ್ತು ಸ್ಪೀಕರ್ ಕೂಡ ಇದೆ. ಜೊತೆಗೆ ಬಳಕೆದಾರರು ಸ್ಮಾರ್ಟ್ ವಾಚ್ ಮೂಲಕ ನೇರವಾಗಿ ಕರೆಗಳನ್ನು ಸ್ವೀಕರಿಸಬಹುದಾಗಿದೆ. ನಿರ್ದಿಷ್ಟ ಅಪ್ಲಿಕೇಶನ್‌ಗಳು, SMS ಗೆ ಸಂಬಂಧಿಸಿದ ಸೂಚನೆಗಳನ್ನು ವೈಬ್ರೇಶನ್​ ಫೀಚರ್ ಮೂಲಕ ಪಡೆಯಬಹುದು. ಮತ್ತು ಈ ಸ್ಮಾರ್ಟ್ ವಾಚ್ ರಿಮೋಟ್ ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್‌ಗಳು, ವಾಯ್ಸ್ ಅಸಿಸ್ಟೆಂಟ್‌ನಂತಹ ಸಾಮಾನ್ಯ ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿದೆ.

ಅಷ್ಟೇ ಅಲ್ಲದೆ, ಈ ಸ್ಮಾರ್ಟ್​​ವಾಚ್​ನಲ್ಲಿ 270 mAh ಯುನಿಟ್ ಮೂಲಕ ಬಳಕೆದಾರರು 10 ದಿನಗಳ ಬ್ಯಾಟರಿ ಸಾಮರ್ಥ್ಯವನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್ ವಾಚ್ IP68 ವಾಟರ್​​ ಪ್ರೂಫ್ ರೇಟಿಂಗ್ ಅನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕಿಸಲು ಬ್ಲೂಟೂತ್ 5.2 ಕನೆಕ್ಟಿವಿಟಿ ಸೆಟ್ಟಿಂಗ್ಸ್​ ಕೂಡ ಇದೆ.

ಭಾರತದಲ್ಲಿ Amazfit ಸ್ಮಾರ್ಟ್ ವಾಚ್‌ಗಳು ಅಮೆಜಾನ್ ಮೂಲಕ ಮಾರಾಟ ಮಾಡಲಿದ್ದು, ಕಂಪನಿಯು ಬಿಡುಗಡೆ ಮಾಡುವ ಎಲ್ಲಾ ಮಾದರಿಗಳನ್ನು ಈ ಪೋರ್ಟಲ್ ಮೂಲಕ ಮಾರಾಟ ಮಾಡಲಾಗುತ್ತದೆ. ಆದರೆ ಇತ್ತೀಚಿನ Amazfit ಪಾಪ್ 2 Amazfit ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆಯಂತೆ. ಹಾಗೂ ಭಾರತದಲ್ಲಿ ಇದರ ಮಾರಾಟ ನವೆಂಬರ್ 22 ರಿಂದ ಆರಂಭವಾಗಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.

Leave A Reply

Your email address will not be published.