Mahalakshmi Ravinder : ಮಹಾಲಕ್ಷ್ಮೀ ರವೀಂದರ್ ಕಡೆಯಿಂದ ಹೊರಬಂತು ಸ್ವೀಟ್ ಸುದ್ದಿ | ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ ಈ ವಿಚಾರ!

ಮದುವೆಯಾದ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಸೆಲೆಬ್ರಿಟಿ ದಂಪತಿಗಳ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಸಿಹಿ ಸುದ್ದಿ ನೀಡಲು ಅಣಿಯಾಗಿದ್ದಾರೆ ಎಂಬ ಅನುಮಾನದ ಜೊತೆಗೆ, ಮಹಾಲಕ್ಷ್ಮಿಯವರು ತಾಯಿಯಾಗುತ್ತಿದ್ದಾರಾ?? ಎಂಬ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೌದು!!..ಮಹಾಲಕ್ಷ್ಮಿ ಮತ್ತು ರವೀಂದರ್ ಕಾಲಿವುಡ್ ಸೆಲೆಬ್ರಿಟಿ ದಂಪತಿಗಳಾಗಿದ್ದು, ಇಬ್ಬರೂ ಪ್ರೀತಿಸಿ ಹಸೆ ಮಣೆ ಏರಿದ್ದು ತಿಳಿದಿರುವ ವಿಚಾರವೇ!!! ಈ ನಡುವೆ ಇವರಿಬ್ಬರ ಅದ್ದೂರಿ ಮದುವೆಯ ಫೋಟೋಗಳು ವೈರಲ್ ಆಗಿ ನೋಡುಗರಿಗೆ ಅಚ್ಚರಿಯಾಗಿತ್ತು. ಜೊತೆಗೆ ಈ ಜೋಡಿಯನ್ನು ಪ್ರತಿ ಬಾರಿ ಕಾಲೆಳೆದು ಕಮೆಂಟ್ ಮಾಡುವವರೇ ಹೆಚ್ಚು..


Ad Widget

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಲಕ್ಷ್ಮಿ ಮತ್ತು ರವೀಂದ್ರ ಮದುವೆಗೆ ತಿರುಪತಿಯೇ ವೇದಿಕೆಯಾಗಿತ್ತು. ತಮ್ಮ ಅಪ್‌ಡೇಟ್‌ಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಿಂದಾಸ್ ಜೀವನ ನಡೆಸುತ್ತಿದ್ದು, ಅವರ ರೊಮ್ಯಾಂಟಿಕ್ ಹನಿಮೂನ್ ಫೋಟೋಗಳು ಕೂಡ ವೈರಲ್ ಆಗಿ ನೆಟ್ಟಿಗರಿಗೆ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು. ಇದಾವುದಕ್ಕೂ ಕೂಡ ಈ ಲವ್ ಕಪಲ್ ಕ್ಯಾರೇ ಎನ್ನದೆ ಸಂತೋಷದ ಕ್ಷಣಗಳನ್ನೂ ಆಸ್ವಾದಿಸುತ್ತಿದ್ದಾರೆ. ಇದೀಗ, ಈ ತಾರಾ ಜೋಡಿಯ ಬಗ್ಗೆ ಹೊಸ ಸುದ್ದಿಯೊಂದು ಜೋರಾಗಿ ಕೇಳಿಬರುತ್ತಿದೆ.

Ad Widget

Ad Widget

Ad Widget

ತಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಇಬ್ಬರೂ ಮದುವೆಯಾಗಿ ತಮ್ಮ ಸಂಗಾತಿಗಳಿಂದ ದೂರವಾಗಿದ್ದು, ಈ ಜೋಡಿಗಳಿಬ್ಬರಿಗೂ ಇದು ಎರಡನೇ ಮದುವೆಯಾಗಿರುವುದರಿಂದ ಚರ್ಚೆಗೆ ಕಾರಣವಾಗಿದೆ.
ಮಹಾಲಕ್ಷ್ಮಿಗೆ ಮೊದಲ ಮದುವೆಯ ಬಳಿಕ ಪುಟ್ಟ ಮಗುವೊಂದು ಇದ್ದು, ಆದರೆ ಈಗ ಹೊಸ ಜೋಡಿ ಮತ್ತೊಂದು ಶುಭ ಸುದ್ದಿಯನ್ನು ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇನಪ್ಪಾ ಎಂದು ಯೋಚಿಸುತ್ತಿದ್ದೀರಾ??

ಮಹಾಲಕ್ಷ್ಮಿ ಗರ್ಭಿಣಿಯಾಗಿರಬಹುದು ಎಂಬ ಸುದ್ದಿ ಹರಿದಾಡುತ್ತಿದ್ದು, ಗಂಡ-ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಸ್ವೀಟ್ ನೀಡುತ್ತಿರುವ ಫೋಟೋ ಹಂಚಿಕೊಂಡು ಇದಕ್ಕೆ ಇಂಬು ನೀಡುವಂತೆ ಫೋಟೊ ಹಂಚಿ ಕೊಂಡಿದ್ದಾರೆ. ಇತ್ತೀಚೆಗಷ್ಟೇ ರಾತ್ರಿ ಊಟ ಮಾಡುವಾಗ ಇಬ್ಬರೂ ಹಂಚಿಕೊಂಡ ಚಿತ್ರವೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಚಿತ್ರದಲ್ಲಿ ಮಹಾಲಕ್ಷ್ಮಿಯನ್ನು ನೋಡಿದವರೆಲ್ಲ ಆಕೆ ಗರ್ಭಿಣಿಯೇ ಎಂಬ ಅನುಮಾನವನ್ನೂ ಹೊರಹಾಕುತ್ತಿದ್ದಾರೆ. ಮಹಾಲಕ್ಷ್ಮಿಯ ಕುಳಿತುಕೊಳ್ಳುವ ಶೈಲಿಯು ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ಕಾಣುತ್ತಿದೆ.


ಇದಲ್ಲದೇ, ಮಕ್ಕಳ ವಿಷಯದಲ್ಲಿ ಮಹಾಲಕ್ಷ್ಮಿ ತನಗೆ ಷರತ್ತು ಹಾಕಿದ್ದಳು ಎಂದು ಕೂಡ ರವೀಂದರ್ ಹೇಳಿದ್ದಾರೆ. ಈ ನಡುವೆ ಮತ್ತೊಮ್ಮೆ ಮಹಾಲಕ್ಷ್ಮೀ ತಾಯಿಯಾಗುತ್ತಿದ್ದಾರಾ?? ಎಂಬ ಪ್ರಶ್ನೆ ಎದ್ದಿದ್ದು, ಈ ಬಗ್ಗೆ ಚರ್ಚೆ ಜೋರಾಗೆ ನಡೆಯುತ್ತಿದೆ.

error: Content is protected !!
Scroll to Top
%d bloggers like this: