ಸುಮ್ಮನೆ ತನ್ನ ಪಾಡಿಗೆ ತಾನು ರಸ್ತೆ ಬದಿ ನಿಂತಿದ್ದ ಬಾಲಕಿಯನ್ನು ಎತ್ತಿ ಕುಕ್ಕಿದ ನೀಚ ವ್ಯಕ್ತಿ | ವೀಡಿಯೋ ವೈರಲ್!

ರಸ್ತೆ ಬದಿಯಲ್ಲಿ ಮದರಸಾದ ಮುಂದೆ ತನ್ನ ಚಿಕ್ಕಪ್ಪನ ಆಗಮನದ ನಿರೀಕ್ಷೆಯಲ್ಲಿ ಕಾಯುತ್ತಾ ನಿಂತಿದ್ದ ಪುಟ್ಟ ಬಾಲಕಿಯೊರ್ವಳನ್ನು ಅಲ್ಲೇ ಇದ್ದ ದುರುಳನೋರ್ವ ಹಠಾತ್ತನೆ ಕುತ್ತಿಗೆಯಲ್ಲಿ ಹಿಡಿದು ಮೇಲೆತ್ತಿ ಕೆಳಗೆಸೆದ ಅಚ್ಚರಿಯ ಘಟನೆ ಮುನ್ನಲೆಗೆ ಬಂದಿದೆ.

ಹೌದು!!. ಕೇರಳದ ಕಾಸರಗೊಡು ಜಿಲ್ಲೆಯ ಮಂಜೇಶ್ವರದಲ್ಲಿ (Manjeshwar) ಈ ಘಟನೆ ನಡೆದಿದ್ದು, ಇಂದು ಮುಂಜಾನೆ 8 ವರ್ಷದ ಬಾಲಕಿ ಮದರಸಾಕ್ಕೆ ತೆರಳಿ ಶಾಲೆ ಬಿಟ್ಟ ನಂತರ ಯಾವಾಗಲೂ ತನ್ನನ್ನು ಕರೆದುಕೊಂಡು ಹೋಗಲು ಬರುವ ತನ್ನ ಚಿಕ್ಕಪ್ಪನಿಗಾಗಿ ಮದರಸಾದ ಮುಂದೆ ಕಾಯುತ್ತ ನಿಂತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹಿಜಾಬ್ (Hijab) ಧರಿಸಿರುವ ಪುಟ್ಟ ಬಾಲಕಿ ಕಾಯುತ್ತಾ ನಿಂತಿದ್ದ ಸಂದರ್ಭ , ಸೀದಾ ಬಾಲಕಿಯತ್ತ ಬಂದ ವ್ಯಕ್ತಿ, ಬಾಲಕಿಯನ್ನು ಎರಡು ಕೈಯಲ್ಲಿ ಗಬ್ಬಕ್ಕನೆ ಹಿಡಿದು ಮೇಲೆತ್ತಿ ಕಸ ಎಸೆಯುವಂತೆ ದೂರ ಎಸೆದಿದ್ದು, ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹಠಾತ್ತನೆ ತನ್ನನ್ನು ಎಸೆದ ತಕ್ಷಣ ಬೆಚ್ಚಿ ಬಿದ್ದ ಬಾಲಕಿ ಏನು ನಡೆಯುತ್ತಿದೆ ಎನ್ನುವುದು ಅರಿವಾಗದೇ ಅಕ್ಷರಶಃ ಶಾಕ್ ಆಗಿದ್ದಾಳೆ. ಆದರೆ ಅದೃಷ್ಟವಶಾತ್ ಬಾಲಕಿಗೆ ದೈಹಿಕವಾಗಿ ದೊಡ್ಡ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಬಿದ್ದ ತಕ್ಷಣ ಮೇಲೆದ್ದು, ಆಕೆ ತನ್ನ ಕೈಯಿಂದ ಬಿದ್ದ ಪುಸ್ತಕದ ತುಣಕನ್ನು ಮೇಲೆತ್ತಿಕೊಂಡು ಅಲ್ಲೇ ಗಾಬರಿಯಾಗಿ ನಿಂತಿರುವ ಆಘಾತಕಾರಿ ದೃಶ್ಯ ಅಲ್ಲೇ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಘಟನೆಯಿಂದಾಗಿ ಮಾನಸಿಕವಾಗಿ ಆಘಾತಕ್ಕೊಳ ಕ್ಕಾಗಿದ್ದ ಬಾಲಕಿ, ಮನೆಯಲ್ಲಿ ಯಾರು ನನ್ನನ್ನು ಹೊಡೆದರು ಎಂದಷ್ಟೇ ಹೇಳಿದ್ದಾಳೆ. ಆ ಬಳಿಕ ಏನು ಹೇಳಲಾಗದೇ ಹೆದರಿದ್ದು, ಮಗಳ ಭಯ, ಗಾಬರಿ ಕಂಡ ಮನೆ ಮಂದಿ, ಮದರಾಸದ ಬಳಿ ಬಂದು ಸಿಸಿಟಿವಿಯನ್ನು (cctv) ಗಮನಿಸಿದಾಗ ಅಚ್ಚರಿಗೊಂಡಿದ್ದಾರೆ.

ಬಾಲಕಿಯನ್ನು(Little Girl) ಹಿಡಿದು ಎಸೆದ ಆಘಾತಕಾರಿ ದೃಶ್ಯ ಅಲ್ಲಿ ಸೆರೆ ಆಗಿದೆ. ಅಲ್ಲದೇ, ಈ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ (social media) ಹರಿದಾಡಲು ಆರಂಭಿಸಿದ ಬಳಿಕ ಹಾಗೂ ಸ್ಥಳೀಯ ಚಾನೆಲ್‌ಗಳು ಈ ಘಟನೆಯ ದೃಶ್ಯವನ್ನು ಪ್ರಸಾರ ಮಾಡಿದ ಬಳಿಕ ಪೊಲೀಸರು ಆರೋಪಿ ಅಬ್ಬುಬಕ್ಕರ್ ಸಿದ್ಧಿಕ್‌ನನ್ನು (Aboobacker Siddique) ವಶಕ್ಕೆ ಪಡೆದಿದ್ದಾರೆ. ಆದರೆ ಆತ ಯಾಕೆ ಈ ರೀತಿ ಬಾಲಕಿ ಮೇಲೆ ಕ್ರೌರ್ಯ ತೋರಿದ ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ.

ಪೊಲೀಸರು ಈ ಬಗ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(POCSO) ಅಡಿ ಪ್ರಕರಣ ದಾಖಲಿಸಿ, ಈ ಘಟನೆಗೆ ಸಂಬಂಧಿಸಿದಂತೆ 31 ವರ್ಷ ಅಬ್ಬುಬಕ್ಕರ್ ಸಿದ್ಧಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಬಾಲಕಿಗೆ ದೈಹಿಕವಾಗಿ ಯಾವುದೇ ಹಾನಿಯಾಗದಿದ್ದರು ಕೂಡ ಮಂಗಳೂರಿನ (Mangalore) ಆಸ್ಪತ್ರೆಗೆ (hospital) ಆ ಬಾಲಕಿಯನ್ನು ದಾಖಲಿಸಿ ದೈಹಿಕ ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

https://twitter.com/MdFasahathullah/status/1593246671093510144?ref_src=twsrc%5Etfw%7Ctwcamp%5Etweetembed%7Ctwterm%5E1593246671093510144%7Ctwgr%5E2a26d04aace026f047661513f7d1af117692722a%7Ctwcon%5Es1_c10&ref_url=https%3A%2F%2Ftv9kannada.com%2Fnational%2Fcrime-news-in-kannada-man-beats-and-flinging-8-year-old-girl-on-road-in-kasaragods-manjeshwar-gsp-au60-471998.html
Leave A Reply

Your email address will not be published.