ಭಾರತೀಯ ಮಾರುಕಟ್ಟೆಯಲ್ಲಿ ‘ಜೀಪ್ ಗ್ರ್ಯಾಂಡ್ ಚೆರೋಕಿ’ ಭರ್ಜರಿ ಎಂಟ್ರಿ ! ಮಾರುಕಟ್ಟೆಯಲ್ಲಿ ಧಮಾಕಾ!

ಅಮೆರಿಕಾ ಮೂಲದ SUV ತಯಾರಕ ‘ಜೀಪ್’ ಕಂಪನಿಯ ಬಹುನಿರೀಕ್ಷಿತ ‘ಗ್ರ್ಯಾಂಡ್ ಚೆರೋಕಿ’ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಜೀಪ್ ಕಂಪನಿ ಬಿಡುಗಡೆ ಮಾಡಿರುವ ಈ ಆಧುನಿಕ ಎಸ್‌ಯುವಿ ಗ್ರ್ಯಾಂಡ್ ಚೆರೋಕಿಯನ್ನು ಉತ್ತಮ ವಿನ್ಯಾಸ ಮತ್ತು ಇತ್ತೀಚಿನ ಆಧುನಿಕ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ. ಇನ್ನೂ ಈ ಹೊಸ SUV ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಹೊಸ ‘ಜೀಪ್ ಗ್ರ್ಯಾಂಡ್ ಚೆರೋಕಿ’ಯ ಬೆಲೆ ಸುಮಾರು ರೂ. 77.50 ಲಕ್ಷ (ಎಕ್ಸ್ ಶೋರೂಂ, ಭಾರತ). ಈಗಾಗಲೇ ಕಂಪನಿಯು ಈ SUV ಗಾಗಿ ಬುಕ್ಕಿಂಗ್ ಪ್ರಾರಂಭಿಸಿದೆ. ಇದನ್ನು ಖರೀದಿಸಲು ಬಯಸುವ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಕಂಪನಿಯ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದಾಗಿದೆ.

ವಿತರಣೆಯು ಈ ತಿಂಗಳ ಅಂತ್ಯದ ವೇಳೆಗೆ ಆರಂಭವಾಗಲಿದೆ. ಇನ್ನೂ ಈ ಹೊಸ ಜೀಪ್ ಗ್ರ್ಯಾಂಡ್ ಚೆರೋಕಿ ಅದ್ಬುತ ವಿನ್ಯಾಸವನ್ನು ಹೊಂದಿದೆ. LED ಹೆಡ್‌ಲ್ಯಾಂಪ್‌ಗಳೊಂದಿಗೆ ಏಳು-ಸ್ಲಾಟ್ ಗ್ರಿಲ್ ಅನ್ನು ಒಳಗೊಂಡಿದೆ. ಇದಿಷ್ಟೇ ಅಲ್ಲದೆ, ಕೆಳಗಿನ ಭಾಗವು ಸೆಂಟ್ರಲ್ ಏರ್ ಇನ್‌ಟೇಕ್‌ಗಳೊಂದಿಗೆ ನಂಬರ್ ಪ್ಲೇಟ್ ಹೌಸಿಂಗ್ ಮತ್ತು ದಪ್ಪವಾದ ಹಿಂಭಾಗದ ಬಂಪರ್ ನ್ನು ಪಡೆದಿದೆ.

ಇನ್ನೂ ವೈಶಿಷ್ಟ್ಯಗಳಲ್ಲಿ ಈ ಹೊಸ ಜೀಪ್ ಗ್ರ್ಯಾಂಡ್ ಚೆರೋಕಿ 10.1 ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಹಾಗೇ ಅದರ ಕೆಳಗೆ ಏರ್ ಕಂಡಿಷನಿಂಗ್ ಮತ್ತು ಹೀಟಿಂಗ್ ವೆಂಟಿಲೇಷನ್‌ಗಾಗಿ ಬಟನ್‌ಗಳಿವೆ. ಇದರಲ್ಲಿ ಡ್ಯಾಶ್‌ಬೋರ್ಡ್ ಲೇಯರ್ಡ್ ಎಫೆಕ್ಟ್‌ ಸಹ ಇದೆ. ಹೀಗಾಗಿ ತುಂಬಾ ಪ್ರೀಮಿಯಂ ಆಗಿ ಕಾಣುತ್ತದೆ.

ಹಾಗೇ ಇದು 10.25-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಪಾಡ್, ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಒಳಗೊಂಡಿದೆ. ಮತ್ತು ಹಿಂಬದಿ ಸೀಟಿನ ಪ್ರಯಾಣಿಕರಿಗೆ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್ ಕೂಡ ಲಭ್ಯವಿದೆ. ಇದು ದೊಡ್ಡ ಪನೋರಮಿಕ್ ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ರನ್ನಿಂಗ್ ಟೈಲ್‌ಗೇಟ್ ಅನ್ನು ಹೊಂದಿದೆ.

ಹೊಸ ಜೀಪ್ ಗ್ರಾಂಡ್ ಚೆರೋಕಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಇದ್ದು, ಇದು 272 HP ಪವರ್ ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಆಟೋ, ಸ್ಪೋರ್ಟ್, ಮಡ್, ಸ್ಯಾಂಡ್ ಮತ್ತು ಸ್ನೋ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಇನ್ನೂ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳಬೇಕಾದರೆ, ಇದು 8 ಏರ್‌ಬ್ಯಾಗ್‌ಗಳು, ಆಕ್ಟಿವ್ ಲೇನ್ ಮ್ಯಾನೆಜ್‌ಮೆಂಟ್, ಇಂಟರ್ ಸೆಕ್ಷನಲ್ ಕೊಲಿಷನ್ ಹೆಲ್ಪ್ ಸಿಸ್ಟಮ್, ಪ್ಯಾಸಿವ್ ಪೆಡಸ್ಟ್ರಿಯನ್ ಡ್ರೈವ್ ರಕ್ಷಣೆ, 3-ಪಾಯಿಂಟ್ ಸೀಟ್ ಬೆಲ್ಟ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಬ್ಲೈಂಡ್ ಸ್ಪಾಟ್ ಅನ್ನು ಒಳಗೊಂಡಿದೆ. ಹಾಗೇ ಇದು ಲೆವೆಲ್ 2 ADAS ವೈಶಿಷ್ಟ್ಯದೊಂದಿಗೆ ಬರುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಹೊಸ ಗ್ರ್ಯಾಂಡ್ ಚೆರೋಕಿ 5 ಆಸನಗಳ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದು 7 ಸೀಟರ್ ಆಯ್ಕೆಯಲ್ಲಿ ಕೂಡ ಲಭ್ಯವಿರಲಿದೆ. ಈ 7 ಆಸನವು 3 ಸಾಲುಗಳ ಆಸನದ ಆಯ್ಕೆಯನ್ನು ಹೊಂದಿದೆ. ಈ 7 ಆಸನಗಳ ರೂಪಾಂತರವು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿಲ್ಲ. ಗ್ರ್ಯಾಂಡ್ ಚೆರೋಕಿ ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ GLE, BMW X5 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿಗಳಿಗೆಲ್ಲಾ ಇದು ಪ್ರತಿಸ್ಪರ್ಧಿಯಾಗಲಿದೆಯಂತೆ.

Leave A Reply

Your email address will not be published.