PCC exemption : ಸೌದಿಗೆ ಹೋಗುವ ಭಾರತೀಯರಿಗೆ ಸಿಹಿ ಸುದ್ದಿ | ಇನ್ಮುಂದೆ ಕ್ಲಿಯರೆನ್ಸ್ ಅಗತ್ಯವಿಲ್ಲ!

ಇನ್ನು ಮುಂದೆ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರದ ಅಗತ್ಯ ಇರುವುದಿಲ್ಲ. ಸೌದಿ ವೀಸಾಗೆ ಅರ್ಜಿ ಸಲ್ಲಿಸಲು ಭಾರತೀಯರು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದಾಗಿದೆ.

ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಭಾರತದಲ್ಲಿನ ಸೌದಿ ರಾಯಭಾರ ಕಚೇರಿ ಟ್ವಿಟ್ ಮಾಡಿದೆ. ಹಾಗೇ ಇನ್ನು ಮುಂದೆ ಭಾರತೀಯ ಪ್ರಜೆಗಳು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ಪಿಸಿಸಿ) ರಾಯಭಾರ ಕಚೇರಿಗೆ ಸಲ್ಲಿಸುವ ಅಗತ್ಯವಿಲ್ಲ ಎಂದು ನವದೆಹಲಿಯಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿಯು ಗುರುವಾರ ತಿಳಿಸಿದೆ.

ಸೌದಿ ಅರೇಬಿಯಾ ಮತ್ತು ಭಾರತ ಗಣರಾಜ್ಯಗಳ ನಡುವಿನ ಬಲವಾದ ಸಂಬಂಧಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ದೃಷ್ಟಿಯಿಂದ, ಭಾರತೀಯ ಪ್ರಜೆಗಳಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (PCC) ಸಲ್ಲಿಸುವುದರಿಂದ ವಿನಾಯಿತಿ ನೀಡಲು ಸೌದಿ ಸರ್ಕಾರ ನಿರ್ಧರಿಸಿದೆ ಎಂದು ರಾಯಭಾರ ಕಚೇರಿಯು ಟ್ವಿಟ್ ಮಾಡಿದೆ.

ರಾಜ್ಯದಲ್ಲಿ ಶಾಂತಿಯುತವಾಗಿ ವಾಸಿಸುತ್ತಿರುವ ಎರಡು ಮಿಲಿಯನ್ ಭಾರತೀಯ ನಾಗರಿಕರ ಕೊಡುಗೆಯನ್ನು ರಾಯಭಾರ ಕಚೇರಿ ಪ್ರಶಂಸಿಸುತ್ತದೆ ಎಂದು ರಾಯಭಾರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ, ಸೌದಿ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಈ ತಿಂಗಳು ಭಾರತಕ್ಕೆ ಭೇಟಿ ನೀಡವವರಿದ್ದರು. ಆದರೆ ನಿಗದಿತ ಸಮಸ್ಯೆಯಿಂದಾಗಿ ಈ ಭೇಟಿ ರದ್ದಾಯಿತು. ನಂತರ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ಶೃಂಗಸಭೆಗೆ ತೆರಳುತ್ತಿದ್ದರು ಎನ್ನಲಾಗಿದೆ.

Leave A Reply

Your email address will not be published.