Dharmasthala Laksha Deepotsava : 5 ದಿನಗಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ನೀವು ಸಹ ಭಾಗಿಯಾಗಬೇಕೇ? ಹೋಗೋದು ಹೇಗೆ?

ದಕ್ಷಿಣ ಭಾರತದ ಪ್ರಸಿದ್ದ ಹಾಗೂ ಪುರಾತನ ತೀರ್ಥ ಕ್ಷೇತ್ರವಾಗಿರುವ ಧರ್ಮಸ್ಥಳದ ವಿಷೇಶವಾಗಿ ಆಚರಿಸುವ ಲಕ್ಷ ದೀಪೋತ್ಸವ ಸಂಭ್ರಮ ನೋಡುವುದೇ ಕಣ್ಣಿಗೆ ಹಬ್ಬ!!!ಹೀಗಾಗಿಯೇ ಕೋಟ್ಯಂತರ ಭಕ್ತರು ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುತ್ತಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಧರ್ಮಸ್ಥಳ ದಲ್ಲಿ ನವೆಂಬರ್ 19ರಿಂದ ಲಕ್ಷ ದೀಪೋತ್ಸವ ಸಂಭ್ರಮ ಆರಂಭವಾಗಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸದ ಹಿನ್ನಲೆಯಲ್ಲಿ ಕ್ಷೇತ್ರವನ್ನು ಕೋಟಿ ಕೋಟಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಎತ್ತ ಕಣ್ಣು ಹಾಯಿಸಿದರೂ ಝಗಮಗಿಸುವ ಬೆಳಕಿನ ಚಿತ್ತಾರ ಕಂಡು ಬರುತ್ತದೆ. ವರ್ಷವೂ ಅಖಿಲಾಂಡ ಕೋಟಿಯ ಒಡೆಯನಾದ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕೋಟ್ಯಾಂತರ ಜನ ಭಾಗಿಯಾಗಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.


Ad Widget

5 ದಿನಗಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ನೀವು ಸಹ ಭಾಗಿಯಾಗಬೇಕೆಂದು ಅಂದು ಕೊಂಡಿದ್ದೀರಾ?? ಹಾಗಿದ್ರೆ ಅಲ್ಲಿಗೆ ಹೋಗೋದು ಹೇಗೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ!!..ಅಲ್ಲಿಗೆ ತೆರಳುವ ಸಂಪೂರ್ಣ ವಿವರ ಇಲ್ಲಿದೆ ನೋಡಿ:

ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವದ (Dharmasthala Laksha Deepotsava 2021) ಕಾರ್ಯಕ್ರಮಗಳು ನಾಳೆಯಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿ ಭರದ ತಯಾರು ನಡೆಯುತ್ತಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೀಪೋತ್ಸವಕ್ಕೆ ಸಕಲ ತಯಾರಿಗಳನ್ನು ಮಾಡಲಾಗಿದೆ. ಮಂಜುನಾಥ ಸ್ವಾಮಿ ದೇಗುಲ, ಹೆಗ್ಗಡೆಯವರ ಬೀಡು, ಮಹಾದ್ವಾರ ಸಹಿತ ಸಂಪೂರ್ಣ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿದೆ.

ನವೆಂಬರ್ 19ರಿಂದ 23ರ ತನಕ ಐದು ದಿನಗಳ ಕಾಲ ಲಕ್ಷ ದೀಪೋತ್ಸವದ ಜೊತೆಗೆ 90ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ಕೂಡ ನಡೆಯಲಿದೆ. ನಾಳೆಯಿಂದ ಅಂದರೆ, ನವೆಂಬರ್ 19ರಂದು ಹೊಸಕಟ್ಟೆ ಉತ್ಸವ, ನವೆಂಬರ್ 20ರಂದು ಕೆರೆಕಟ್ಟೆ ಉತ್ಸವ, ನವೆಂಬರ್ 21ರ ಸೋಮವಾರದಂದು ಲಲಿತೋದ್ಯಾನ ಉತ್ಸವ ನಡೆಯಲಿದೆ. ಈ ಬಳಿಕ , ನವೆಂಬರ್ 22ರಂದು ಕಂಚಿಮಾರುಕಟ್ಟೆ ಉತ್ಸವ, ನವೆಂಬರ್ 23ರಂದು ಗೌರಿ ಮಾರುಕಟ್ಟೆ ಉತ್ಸವ, ನವೆಂಬರ್ 24ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

ಪೂಜೆಯ ಸಮಯ ಗಮನಿಸುವುದಾದರೆ, ಬೆಳಗ್ಗೆ 6.30ಗಂಟೆ ಯಿಂದ 11 ಮಧ್ಯಾಹ್ನ11 ಗಂಟೆಗೆ ಮಹಾಪೂಜೆ , ಮದ್ಯಾಹ್ನ 12.30ರಿಂದ 2.30ರ ವರೆಗೆ, ಹಾಗೂ ಸಂಜೆ 5ರಿಂದ ರಾತ್ರಿ 8.30ರ ತನಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಬಹುದು. ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಮಯ ವ್ಯತ್ಯಯವಾಗುವ ಸಾಧ್ಯತೆ ಇದೆ.

5 ದಿನಗಳ ಲಕ್ಷದೀಪೋತ್ಸವ ಸಂಭ್ರಮದಲ್ಲಿ ನೀವು ಸಹ ಭಾಗಿಯಾಗಬೇಕೆಂದು ಅಂದು ಕೊಂಡಿದ್ದೀರಾ?? ಹಾಗಾದ್ರೆ ಅಲ್ಲಿಗೆ ತೆರಳುವ ಸಂಪೂರ್ಣ ವಿವರ ಇಲ್ಲಿದೆ:

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ NH75 and NH73 ಮೂಲಕ 309.1 km ದೂರವಿದ್ದು, ಸರಿ ಸುಮಾರು 6 ಗಂಟೆ 27 ನಿಮಿಷ ಪ್ರಯಾಣಿಸಬೇಕಾಗುತ್ತದೆ. ಮೆಜೆಸ್ಟಿಕ್‌ನಿಂದ ರೈಲು ಅಥವಾ ಬಸ್ಸಿನ ಮೂಲಕ ಮಂಗಳೂರಿಗೆ ತೆರಳಿ, ಧರ್ಮಸ್ಥಳಕ್ಕೆ ಹೋಗಬಹುದು. ರೈಲು, ಹಾಗೂ ಬಸ್ಸಿನ ಸಮಯದ ವಿವರ ಇಲ್ಲಿದೆ.

ಬೆಳಗ್ಗೆ 6.40ರಿಂದ ಆರಂಭಗೊಂಡು ತಡರಾತ್ರಿಯ ವರೆಗೂ ಮೆಜೆಸ್ಟಿಕ್ ಹಾಗೂ ಸ್ಯಾಟ್‌ಲೈಟ್‌ ಬಸ್‌ ಸ್ಟ್ಯಾಂಡ್‌ನಿಂದ ಧರ್ಮಸ್ಥಳಕ್ಕೆ ಬಸ್ಸುಗಳು ಲಭ್ಯವಿರುತ್ತವೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾವ ಮಾರ್ಗ ಉತ್ತಮ ?

ಕಾರಿನಲ್ಲಿ ಅಥವಾ ಬೈಕ್‌ನಲ್ಲಿ ಪ್ರಯಾಣಿಸುವವರು ನೆಲಮಂಗಲ, NH-75 ನಲ್ಲಿ ಹಾಸನ, ಸಕಲೇಶಪುರ, ಶಿರಾಡಿ ಘಾಟ್, ಗುಂಡ್ಯ ಮೂಲಕ ನೆಲ್ಯಾಡಿ ಹಾದಿಯ ಮೂಲಕ ಧರ್ಮಸ್ಥಳಕ್ಕೆ ಹೋಗಬಹುದಾಗಿದ್ದು, ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗಲು ಅಲ್ಲಿ ಬಲ ತಿರುವು ತೆಗೆದುಕೊಳ್ಳಬೇಕು.

ಉಡುಪಿಯಿಂದ ಧರ್ಮಸ್ಥಳಕ್ಕೆ 105.6 km ಇದ್ದು, 2 ಗಂಟೆ 31 ನಿಮಿಷದ ಪ್ರಯಾವಿದೆ. ಬಸ್ಸು, ರೈಲು ಅಥವಾ ಟ್ಯಾಕ್ಸಿಯ ಮೂಲಕ ಪ್ರಯಾಣಿಸಬಹುದಾಗಿದೆ.

ಮಂಗಳೂರಿನಿಂದ ಧರ್ಮಸ್ಥಳಕ್ಕೆ 74.2 km ದೂರವಿದ್ದು, 1 ಗಂಟೆ 47 ನಿಮಿಷದ ದಾರಿಯಿದೆ. ಮಂಗಳೂರಿನಿಂದ ಸಾಕಷ್ಟು ಸಾರಿಗೆ, ಖಾಸಗಿ ಬಸ್ಸುಗಳು ಧರ್ಮಸ್ಥಳಕ್ಕೆ ತೆರಳುತ್ತವೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕಿರುವ ರೈಲುಗಳು ಮತ್ತು ಸಮಯ.ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ಬೆಳಗ್ಗೆ 7.00 ಗಂಟೆಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಡುವ ಸಮಯವಾಗಿದ್ದು, ಭಾನುವಾರ, ಮಂಗಳವಾರ ಗುರುವಾರ ಸೇವೆಗಳು ಲಭ್ಯವಿರಲಿದೆ.

ಕಣ್ಣೂರ್ ಎಕ್ಸ್‌ಪ್ರೆಸ್ ರಾತ್ರಿ 9.30ಗಂಟೆಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಡುವ ಸಮಯವಾಗಿದ್ದು, ಈ ರೈಲು ಪ್ರತಿದಿನ ಓಡಾಟ ನಡೆಸುತ್ತದೆ.

ವೈಪಿಆರ್‌ ಕಾರವಾರ ಎಕ್ಸ್‌ಪ್ರೆಸ್‌ ಬೆಳಗ್ಗೆ 5.30 ಗಂಟೆಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟು ಸೋಮವಾರ, ಬುಧವಾರ, ಶುಕ್ರವಾರ ಈ ರೈಲಿನ ಸೇವೆಗಳು ಲಭ್ಯವಾಗಲಿವೆ.

ಮಂಗಳೂರು ಎಕ್ಸ್‌ಪ್ರೆಸ್‌ ಬೆಳಗ್ಗೆ 7.00 ಗಂಟೆಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಡುತ್ತದೆ ಆದರೆ, ಇದು ಕೇವಲ ಶನಿವಾರ ಮಾತ್ರ ಸಂಚಾರ ನಡೆಸುತ್ತದೆ.

ಪಂಚಗಂಗಾ ಎಕ್ಸ್‌ಪ್ರೆಸ್ ಸಂಜೆ 6.50 ಗಂಟೆಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಡುವುದಲ್ಲದೆ ಪ್ರತಿದಿನ ಓಡಾಟ ನಡೆಸುತ್ತದೆ.

ಧರ್ಮಸ್ಥಳಕ್ಕೆ ನೇರ ರೈಲು ಇದೆಯೇ?ಮಂಗಳೂರು ರೈಲು ನಿಲ್ದಾಣವು ಧರ್ಮಸ್ಥಳಕ್ಕೆ ಹತ್ತಿರದ ರೈಲ್ವೆ ಜಂಕ್ಷನ್ ಆಗಿದ್ದು, ಇದು ಸುಮಾರು 74 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಧರ್ಮಸ್ಥಳವನ್ನು ತಲುಪಲು ಟ್ಯಾಕ್ಸಿಗಳು ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯಬಹುದು ಅಥವಾ ಮಂಗಳೂರು ಬಸ್‌ ನಿಲ್ದಾಣದಿಂದ ಸಾಕಷ್ಟು ಬಸ್ಸುಗಳು ಸಹ ಮಂಗಳೂರಿಗೆ ತೆರಳುತ್ತವೆ.

ಇನ್ನು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರ ಎಷ್ಟಿದೆ ಎಂದು ನೋಡುವುದಾದರೆ:

ಕರ್ನಾಟಕ ಸಾರಿಗೆ 351 ರೂ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರವಾಗಿದೆ.

ರಾಜಹಂಸ ಎಕ್ಸಿಕ್ಯೂಟಿವ್ 522 ರೂ.ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರವಾಗಿದೆ.

ನಾನ್‌ ಎಸಿ ಸ್ಲೀಪರ್ 653 ರೂ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರವಾಗಿದ್ದು, ಐರಾವತದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರ 703 ರೂ.ಆಗಿದ್ದು, ಐರಾವತ ಕ್ಲಬ್‌ ಕ್ಲಾಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ಸಿನ ದರ 805 ರೂ. ಆಗಿದೆ.

ಧರ್ಮಸ್ಥಳದಲ್ಲಿ ರೂಮ್ ಬುಕ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಿರಾ?

ಆನ್‌ಲೈನ್ ಬುಕಿಂಗ್ ಸಮಯದಲ್ಲಿ ಮಾಡಿದ ಆಯ್ಕೆಯ ಚೆಕ್ ಇನ್ ಸಮಯದಲ್ಲಿ ಮಾತ್ರ ಭಕ್ತರೊಬ್ಬರು ಗರಿಷ್ಠ 24 ಗಂಟೆಗಳ ಅವಧಿಗೆ ಕೊಠಡಿಯನ್ನು ಬುಕ್ ಮಾಡಬಹುದಾಗಿದೆ. ಒಮ್ಮೆ ಬುಕ್ ಮಾಡಿದ ಕೊಠಡಿಗಳನ್ನು ವರ್ಗಾಯಿಸಲಾಗುವುದಿಲ್ಲ. ಅಲ್ಲದೆ ಕಾಯ್ದಿರಿಸಿದ ಕೊಠಡಿಗಳ ದಿನಾಂಕಗಳನ್ನು ಮುಂದೂಡಲು ಅಥವಾ ಮುಂದೂಡಲು ಯಾವುದೇ ಅವಕಾಶವಿಲ್ಲ. ಚೆಕ್-ಇನ್ ಸಮಯವು 7.00 AM ಮತ್ತು 9.00 PM ನಡುವೆ ತೆರೆದಿರುತ್ತದೆ.

error: Content is protected !!
Scroll to Top
%d bloggers like this: