ಸೂರ್ಯಾಸ್ತದ ಬಳಿಕ ತಪ್ಪಿಯೂ ದಾನ ಮಾಡಬೇಡಿ ಈ ವಸ್ತುಗಳನ್ನು!!

ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ಕೆಲವೊಂದು ಬಾರಿ ಮುಂಜಾನೆಯಿಂದ ಮುಸ್ಸಂಜೆವರೆಗೆ ಹೇಗೆ ನಮ್ಮ ದಿನಚರಿ ಆರಂಭಿಸುತ್ತೇವೆ ಎಂಬುದರ ಮೇಲೆ ಪೂರ್ತಿ ದಿನ ನಿಂತಿರುತ್ತದೆ.

ಶಾಸ್ತ್ರ, ಸಂಪ್ರದಾಯಗಳ ಪ್ರಕಾರ ನೋಡೋದಾದ್ರೆ, ಹಿರಿಯರು ಕೆಲವೊಂದು ವಿಚಾರಗಳನ್ನು ಅಶುಭ ಎಂದು ಪರಿಗಣಿಸುತ್ತಾರೆ. ಹೌದು. ಹೆಚ್ಚಿನ ಜನರಿಗೆ ಅಭ್ಯಾಸವೇ ಇದೆ. ಆ ದಿನ ಏನಾದರೂ ಕೆಟ್ಟದು ಸಂಭವಿಸಿದ್ರೆ, ಬೆಳಗ್ಗೆ ಆ ಕೆಲಸ ಮಾಡಿದೆ ಅಥವಾ ಆ ವ್ಯಕ್ತಿಯನ್ನು ನೋಡಿದೆ ಅನ್ನೋರು ಹೆಚ್ಚು. ಅದ್ರಂತೆ ಕೆಲವೊಂದು ಕೆಲಸಗಳು ಬೆಳಗ್ಗೆ ಮಾಡಿದ್ರೆ ಸೂಕ್ತವಲ್ಲ ಅನ್ನೋದು ಕೂಡ ಇದೆ. ಅದರಂತೆ ಇದೀಗ ನಾವು ಯಾವ 4 ವಸ್ತುವನ್ನು ಸೂರ್ಯಾಸ್ತದ ಬಳಿಕ ದಾನ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ..

ಮೊದಲನೇಯ ವಸ್ತು, ದುಡ್ಡು. ಸೂರ್ಯಾಸ್ತದ ಬಳಿಕ, ದೀಪ ಹಚ್ಚಿದ ಮೇಲೆ ಎಂದಿಗೂ ಬೇರೆಯವರಿಗೆ ದುಡ್ಡು ದಾನ ಮಾಡಬೇಡಿ. ಯಾಕಂದ್ರೆ ಈ ಸಮಯ ಲಕ್ಷ್ಮೀ ಮನೆಗೆ ಬರುವ ಸಮಯ ಎಂದು ನಂಬಲಾಗಿದೆ. ಹಾಗಾಗಿ ಸಂಜೆ ಹೊತ್ತು ನೀವು ದುಡ್ಡು ದಾನ ಮಾಡಿದ್ರೆ, ಮನೆಗೆ ಬಂದ ಲಕ್ಷ್ಮೀಯನ್ನೇ ದಾನ ಮಾಡಿದಂತೆ. ಹಾಗಾಗಿ ದೀಪ ಹಚ್ಚಿದ ಬಳಿಕ ದುಡ್ಡು ದಾನ ಮಾಡಬೇಡಿ..

ಎರಡನೇಯ ವಸ್ತು ಹಾಲು. ಹಾಲು ಸೂರ್ಯ ಮತ್ತು ಚಂದ್ರನಿಗೆ ಸಂಬಂಧಪಟ್ಟ ವಸ್ತುವಾಗಿದೆ. ಹಾಗಾಗಿ , ಸೂರ್ಯಾಸ್ತದ ಬಳಿಕ ಮತ್ತು ರಾತ್ರಿ ಹೊತ್ತು ಯಾರಿಗೂ ಹಾಲು ದಾನ ಮಾಡಬೇಡಿ.. ಇದರಿಂದ ಲಕ್ಷ್ಮೀ ಮತ್ತು ನಾರಾಯಣರ ಆಶೀರ್ವಾದ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ನಂಬಿಕೆ ಇದೆ. ಇದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.

ಮೂರನೇಯ ವಸ್ತು ಮೊಸರು. ಆರ್ಥಿಕ ಸ್ಥಾನವನ್ನು ಉತ್ತಮವಾಗಿಸುವ ಗ್ರಹ ಎಂದರೆ, ಶುಕ್ರ ಗ್ರಹ. ಮತ್ತು ಶುಕ್ರ ಗ್ರಹ ಮೊಸರಿಗೆ ಸಂಬಂಧಪಟ್ಟಿದೆ. ನೀವು ಮುಸ್ಸಂಜೆ ಹೊತ್ತಲ್ಲಿ ಮೊಸರನ್ನು ದಾನ ಮಾಡಿದ್ರೆ, ನಿಮ್ಮ ಮೇಲೆ ಶುಕ್ರಗ್ರಹ ಉತ್ತಮ ಪ್ರಭಾವ ಬೀರುವುದಿಲ್ಲ. ಹಾಗಾಗಿ ದೀಪ ಹಚ್ಚಿದ ಬಳಿಕ, ಸಂಜೆ ಯಾರಿಗೂ ಮೊಸರನ್ನು ದಾನ ಮಾಡಬೇಡಿ.

ನಾಲ್ಕನೇಯ ವಸ್ತು ಈರುಳ್ಳಿ ಮತ್ತು ಬೆಳ್ಳುಳ್ಳಿ. ಇದು ರಾಹು ಮತ್ತು ಕೇತುವಿಗೆ ಸಂಬಂಧಪಟ್ಟ ತರಕಾರಿಯಾಗಿದೆ. ಮತ್ತು ಸೂರ್ಯಾಸ್ತದ ಬಳಿಕ ಮಾಟ ಮಂತ್ರ ಮಾಡುವವರು ಕೇತುವಿನ ಆರಾಧನೆ ಮಾಡುತ್ತಾರೆ. ಹಾಗಾಗಿ ಸಂಜೆ ಬಳಿಕ ಈರುಳ್ಳಿ ಮತ್ತು ಬೆಳ್ಳುಳ್ಳಿ ದಾನ ಮಾಡುವುದರಿಂದ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಅನ್ನೋ ನಂಬಿಕೆ ಇದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗಿ, ನೆಮ್ಮದಿ ಹಾಳಾಗುತ್ತದೆ.

Leave A Reply

Your email address will not be published.