ದಕ್ಷಿಣ ಕನ್ನಡ : ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ ಪದವೀಧರ ಅಭ್ಯರ್ಥಿಗಳಿಂದ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯು ರಾಜ್ಯದ 29 ಜಿಲ್ಲೆಯಿಂದ ಖಾಲಿ ಇರುವ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಜಿಲ್ಲೆಗೆ 50ರಂತೆ ಒಟ್ಟು 1,450 ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತ ಕುಟುಂಬದ ಮಕ್ಕಳಿಗೆ ವಿಶೇಷ ಆಧ್ಯತೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತವು ರಾಜ್ಯದ ಪದವಿಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ (LRC) ವೃತ್ತಿ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು. ರೈತ ಕುಟುಂಬದ ಮಕ್ಕಳಿಗೆ ವಿಶೇಷ ಆದ್ಯತೆ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಸಿ.ಇ.ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ : ಅಭ್ಯರ್ಥಿಯು 500 ರೂಪಾಯಿ DDಯೊಂದಿಗೆ ತಮ್ಮ ಬಯೋಡಾಟವನ್ನು ರಿಜಿಸ್ಟರ್ ಪೋಸ್ಟ್ ಮುಖಾಂತರ ಕೇಂದ್ರ ಕಚೇರಿ ನಿಗದಿತ ಅವಧಿಯೊಳಗೆ ಸಲ್ಲಿಸುವುದು.

ಸಂಬಳ: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತದ ಅಧಿಸೂಚನೆ ಪ್ರಕಾರ ಮಾಸಿಕ 10,000 ರೂಪಾಯಿ ಸಂಬಳದ ಜತೆಗೆ 5,000 ರೂಪಾಯಿ ಭತ್ಯೆ ಸೌಲಭ್ಯವಿರುತ್ತದೆ.

ಅರ್ಹತೆಗಳು: ಅಭ್ಯರ್ಥಿಯು ಪದವಿಧರರಾಗಿರಬೇಕು, ಆಧಾರ್ ಕಾರ್ಡ್ ಜೊತೆಗೆ ದ್ವಿಚಕ್ರ ವಾಹನ ಪರವಾನಗಿಯನ್ನು ಹೊಂದಿರಬೇಕು.

ವಯೋಮಿತಿ: 35 ವರ್ಷದ ಒಳಗಿನ ಯುವಕ/ ಯುವತಿಯರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು.

ಕರ್ನಾಟಕ ರಾಜ್ಯದ 29 ಜಿಲ್ಲೆಗಳಾದ ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಹಾಸನ, ಮಂಡ್ಯ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಬೆಳಗಾವಿ, ಕಲ್ಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ, ಧಾರವಾಡ, ಯಾದಗಿರಿ, ಉತ್ತರಕನ್ನಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ದಾವಣಗೆರೆ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ವಿಜಯನಗರ ಜಿಲ್ಲೆಗಳಿಗೆ ರೈತರ ಸದಸ್ಯತ್ವ ನೋಂದಾವಣೆ ಮಾಡಲು ಪ್ರತಿ ಜಿಲ್ಲೆಗೆ 50 ಉಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿದೆ.

ಅರ್ಜಿ ಕೊನೆಯ ದಿನಾಂಕ: ಜನವರಿ 30, 2023 ಮುಂಚಿತವಾಗಿ ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತದ ಕೇಂದ್ರ ಕಚೇರಿಗೆ ಅರ್ಜಿ ವಿವರ ಸಲ್ಲಿಕೆಯಾಗಬೇಕು. DD ಯನ್ನು South Canara Coconut Farmers Producer Company Ltd ಹೆಸರಿಗೆ ಮಾಡಿಸ ತಕ್ಕದ್ದು A.C No-29040200010143 IFSC – BARBOVJVITL ಬ್ಯಾಂಕ್ ಆಫ್ ಬರೋಡಾ, ವಿಟ್ಲ ಶಾಖೆ

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿ., ಕೇಂದ್ರ ಕಛೇರಿ ವಿಳಾಸ: #1/101, CPCRI ಬಳಿ, ಮಂಗಳ ಮಂಟಪ, ಪುತ್ತೂರು ರೋಡ್, ವಿಟ್ಲ ದಕ್ಷಿಣ ಕನ್ನಡ-574 243

ಹೆಚ್ಚಿನ ಮಾಹಿತಿಗೆ ಮೊ: 7338567763, 7899367763

Leave A Reply

Your email address will not be published.