ಒಂಬತ್ತು ಮಕ್ಕಳ ಜೊತೆ ಸೈಕಲ್ ಸವಾರಿ ಮಾಡುತ್ತಿರುವ ವ್ಯಕ್ತಿ | ಭುಜ ಚಕ್ರದ ಮೇಲೆ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯವೇ ಭಯಾನಕ!!

ಬದುಕು ಎಷ್ಟು ವಿಚಿತ್ರ ಅಂದ್ರೆ, ಒಬ್ಬಬ್ಬರ ಬಾಳು ಒಂದೊಂದು ರೀತಿಲಿ ಇರುತ್ತೆ. ಕೆಲವೊಂದಷ್ಟು ಜನ ಬಡತನದಿಂದಾಗಿ ಬೇರೆಯೇ ರೀತಿಯ ಬದುಕು ಕಟ್ಟಿಕೊಳ್ಳುತ್ತಾರೆ. ಆದ್ರೆ, ಇದೀಗ ಒಂದು ವೈರಲ್ ಆದ ವಿಡಿಯೋ ನೋಡಿದ್ರೆ ಆಡಿಕೊಳ್ಳಬೇಕಾ ಕೊಂಡಾಡಿಕೊಳ್ಳಬೇಕಾ ಎಂಬುದೇ ಗೊಂದಲದಲ್ಲಿದೆ.

ಹೌದು. ಸಾಮಾನ್ಯವಾಗಿ ಒಂದು ಸೈಕಲ್ ನಲ್ಲಿ ಇಬ್ಬರು ಕುಳಿತುಕೊಳ್ಳುವುದನ್ನು ನೋಡಿದ್ದೇವೆ. ಆದ್ರೆ ವೈರಲ್ ಆದ ಈ ವೀಡಿಯೊ ನೋಡಿದ್ರೆ ಹೀಗೇನೂ ಪ್ರಯಾಣ ಬೆಳೆಸಬಹುದಾ ಎಂದು ಅಂದುಕೊಳ್ಳದೆ ಇರಲು ಸಾಧ್ಯವಿಲ್ಲ. ಯಾಕಂದ್ರೆ, ಇಲ್ಲಿ ಸೈಕಲ್ ನಲ್ಲಿ ಸವಾರಿ ಮಾಡುತ್ತಿರುವವರ ಸಂಖ್ಯೆ 2 ಅಲ್ಲ 5 ಅಲ್ಲ, 9 ಜನ.

ಹಿಂಭಾಗದಲ್ಲಿ ಮುಂಭಾಗದಲ್ಲಿ ಅಲ್ಲದೆ ಭುಜವನ್ನೇರಿ, ಚಕ್ರದ ಮೇಲೆ ಹೀಗೆ ಎಲ್ಲೆಂದರಲ್ಲಿ ಚೀಲಗಳನ್ನು ಸಿಕ್ಕಿಸಿಕೊಂಡಂತೆ ಪುಟ್ಟ ಮಕ್ಕಳನ್ನು ಕೂರಿಸಿಕೊಂಡು ನಿಲ್ಲಿಸಿಕೊಂಡು ಈ ವ್ಯಕ್ತಿ ಸೈಕಲ್​ ಓಡಿಸುತ್ತಿದ್ದಾನೆ. ನೋಡಲು ಭಯ ತರಿಸುವ ಮಕ್ಕಳ ಜೀವಕ್ಕೇ ಅಪಾಯ ಎದುರಾಗುವ ಈ ವೀಡಿಯೊವನ್ನು 1.5 ಲಕ್ಷ ಜನ ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಜೈಕಿ ಯಾದವ್​ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಆದರೆ, ಈ ವಿಡಿಯೋ ಯಾವ ಸ್ಥಳದ್ದು ಎಂದು ಈತನಕ ಗೊತ್ತಾಗಿಲ್ಲ. ಕೆಲವೊಬ್ಬರು ಇದು ಭಾರತದ್ದೇ ವಿಡಿಯೋ ಎಂದರೆ, ಇಲ್ಲ ಇದು ಭಾರತದ ವಿಡಿಯೋ ಅಲ್ಲ ಆಫ್ರಿಕಾದಲ್ಲಿರಬೇಕು ಎಂದಿದ್ದಾರೆ.

https://twitter.com/JaikyYadav16/status/1592438950991626241?s=20&t=vcYLUAbqJY4pioEI-ps1BQ
Leave A Reply